ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಒಟ್ಟಾರೆ ಮೌಲ್ಯಗಳ ಬೆಲೆ 2.32 ಲಕ್ಷ ಕೋಟಿ ರು ದಾಟಿದೆ. ಕಳೆದ ವಾರದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ ಅತ್ಯಧಿಕ ಲಾಭ ಗಳಿಸಿವೆ.
ಒಟ್ಟು 10 ಕಂಪನಿಗಳ ವಹಿವಾಟು ಸೇರಿಸಿ 2,32,800.35 ಕೋಟಿ ರು ಮೌಲ್ಯ ದಾಖಲಾಗಿದೆ. ಬಿಎಸ್ಇಯಲ್ಲಿ 30 ಷೇರುಗಳು ಸೆನ್ಸೆಕ್ಸ್ 1,293.48 ಅಂಕ ಅಥವಾ ಶೇ 2.20 ರಷ್ಟು ಏರಿಕೆ ಕಂಡಿತ್ತು. ಆದರೆ, ಶುಕ್ರವಾರದ ವಹಿವಾಟು 60, 000 ಅಂಶ ದಾಟಿದೆ.
ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಹೆಚ್ಚು ಕಂಪನಿ ಮೌಲ್ಯ ಕಳೆದುಕೊಂಡಿವೆ. ಟಾಪ್ 10 ರಲ್ಲಿ 8 ಕಂಪನಿಗ ಮೌಲ್ಯ ಬದಲಾಗಿದೆ. ರಜೆಗಳ ನಡುವೆ ಷೇರುಪೇಟೆಯಲ್ಲಿ ಹೆಚ್ಚು ವಹಿವಾಟು ಕಂಡು ಬಂದಿವೆ..
ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ
ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ 93,823.76ಕೋಟಿ ರು ಹಿಗ್ಗಿ 16,93,170.17 ಕೋಟಿ ರು ಮೌಲ್ಯಕ್ಕೇರಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) 76,200.46 ಕೋಟಿ ರು ಏರಿಕೆ ಕಂಡು 14,55,687.69 ಕೋಟಿ ರು ಮೌಲ್ಯಕ್ಕೆ ಏರಿಕೆ ಕಂಡಿದೆ. ಇನ್ಫೋಸಿಸ್ 24,857.35 ಕೋಟಿ ರು ಸೇರಿಸಿಕೊಂಡು 7,31,107.12 ಕೋಟಿ ರು ಮೌಲ್ಯ ಹೊಂದಿದೆ.
ಬಜಾಜ್ ಫೈನಾನ್ಸ್ ಮೌಲ್ಯ ಏರಿಕೆ
ಬಜಾಜ್ ಫೈನಾನ್ಸ್ 12,913.91 ಕೋಟಿ ರು ಏರಿಸಿಕೊಂಡು 4,66,940.59ಕೋಟಿ ರುಗೆ ಏರಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ 10,881.09 ಕೋಟಿ ರು ಮೌಲ್ಯ ಏರಿಸಿಕೊಂಡು 8,87,210.54ಕೋಟಿ ರು ತಲುಪಿದೆ. ಐಸಿಐಸಿಸಿ ಬ್ಯಾಂಕ್ ಮೌಲ್ಯ 7,403.24 ಕೋಟಿ ರು ಏರಿಕೆ ಕಂಡು 4,87,388.37 ಕೋಟಿ ರು ಆಗಿದೆ.
ಹಿಂದೂಸ್ತಾನ್ ಯೂನಿಲಿವರ್ ಮೌಲ್ಯ ಇಳಿಕೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 5,310.14 ಕೋಟಿ ರು ಹೆಚ್ಚಿಸಿಕೊಂಡು 4,08,479.47 ಕೋಟಿ ರು ಮೌಲ್ಯಕ್ಕೇರಿದೆ.
ಎಚ್‌ಡಿಎಫ್‌ಸಿ 1,410.4 ಕೋಟಿ ರು ಏರಿಕೆ ಕಂಡು 4,91,841.14 ಕೋಟಿ ರು ತಲುಪಿದೆ.
ಹಿಂದೂಸ್ತಾನ್ ಯೂನಿಲಿವರ್ ಮೌಲ್ಯ 14,614.46 ಕೋಟಿ ರು ಕುಸಿದು 6,20,362.58 ರು ಆಗಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್ ಮೌಲ್ಯ 11,697.38 ಕೋಟಿ ರು ಇಳಿಕೆ ಕಂಡು 3,83,866.29ಕೋಟಿ ರು ಮೌಲ್ಯಕ್ಕೇರಿದೆ.
ಒಟ್ಟಾರೆ, ಟಾಪ್ 10 ಕಂಪನಿಗಳು
ಒಟ್ಟಾರೆ, ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕ್.


Click it and Unblock the Notifications