For Quick Alerts
ALLOW NOTIFICATIONS  
For Daily Alerts

ಟಾಪ್ 10 ಕಂಪನಿ ವಾರದ ಮೌಲ್ಯ: ರಿಲಯನ್ಸ್ ಸಂಸ್ಥೆಗೆ ಹೆಚ್ಚು ಲಾಭ

|

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಒಂಭತ್ತು ಕಂಪನಿಗಳು ಕಳೆದ ವಾರದಲ್ಲಿ 2.93 ಲಕ್ಷ ಕೋಟಿ ರು ಮಾರುಕಟ್ಟೆ ಮೌಲ್ಯ ಹೆಚ್ಚಿಸಿಕೊಂಡಿವೆ. ಸತತ ನಾಲ್ಕು ವಾರಗಳಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಹೆಚ್ಚು ಲಾಭ ಗಳಿಸಿದೆ. ಕಳೆದ ವಾರಕ್ಕೂ ಹಿಂದಿನ ವಾರದಲ್ಲಿ ಹಿಂದೂಸ್ತಾನ್ ಯೂನಿಲಿವರ್ ಲಿ. ಹೆಚ್ಚು ಲಾಭ ಗಳಿಸಿತ್ತು. ಕಳೆದ ವಾರ ರಿಲಯನ್ಸ್ ಇಂಡಸ್ಟ್ರೀಸ್ ಅತಿ ಹೆಚ್ಚು ಮೌಲ್ಯವೃದ್ಧಿ ಕಂಡಿದೆ.

 

ಹೆಚ್ಚು ಮೌಲ್ಯ ಕಳೆದು ಕೊಂಡ ಕಂಪನಿಯಾಗಿ ಇನ್ಫೋಸಿಸ್ ಮಾತ್ರ ಗುರುತಿಸಿಕೊಂಡಿವೆ, ರಿಲಯನ್ಸ್, ಟಿಸಿಎಸ್, ಎಚ್ ಡಿಎಫ್ ಸಿ ಬ್ಯಾಂಕ್, ಬಜಾಜ್ ಫೈನಾನ್ಸ್ ಹಾಗೂ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಅತಿ ಹೆಚ್ಚು ಲಾಭ ಗಳಿಸಿವೆ. ಬಿಎಸ್ಇಯಲ್ಲಿ 30 ಷೇರುಗಳು ಸೆನ್ಸೆಕ್ಸ್ 2,005.23 ಅಂಕ ಅಥವಾ ಶೇ 3.57ರಷ್ಟು ಏರಿಕೆ ಕಂಡಿತ್ತು. ಆಗಸ್ಟ್ 15ರ ಪ್ರಕಟವಾದ ಮಾರುಕಟ್ಟೆ ಮೌಲ್ಯ ವರದಿಯಂತೆ ಬಜಾಜ್ ಫೈನಾನ್ಸ್ ಹಿನ್ನಡೆ ಅನುಭವಿಸಿದೆ. ಜೊತೆಗೆ ಸ್ಟೇಟ್ ಆಫ್ ಇಂಡಿಯಾ ಕೂಡಾ ಹಿಂದೆ ಬಿದ್ದಿದೆ. ಆಗಸ್ಟ್ 22ರ ವರದಿಯಲ್ಲಿ ಏಳು ಕಂಪನಿಗಳು ಲಾಭದತ್ತ ಮುಖ ಮಾಡಿದ್ದವು. ಕಳೆದ ವಾರ ಎಚ್ ಡಿ ಎಫ್ ಸಿ ಹಾಗೂ ಇನ್ಫೋಸಿಸ್ ಮೌಲ್ಯ ಕಳೆದುಕೊಂಡಿದ್ದವು.

ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಒಂದು ಕಂಪನಿ ಮೌಲ್ಯ ಕಳೆದುಕೊಂಡಿದೆ. ರಜೆಗಳ ನಡುವೆ ಷೇರುಪೇಟೆಯಲ್ಲಿ ಬಿಎಸ್ಇ ಬೆಂಚ್ ಮಾರ್ಕ್ ಸೆನ್ಸೆಕ್ಸ್ ಶೇ 9ರಷ್ಟು ಏರಿಕೆ ಕಂಡಿತ್ತು. ಕಳೆದ ಶುಕ್ರವಾರ 58,000 ಅಂಕ ಕಂಡಿತ್ತು.

ಹೆಚ್ಚಿನ ವಹಿವಾಟು ನಡೆಸಿದ ಕಂಪನಿಗಳು

ಹೆಚ್ಚಿನ ವಹಿವಾಟು ನಡೆಸಿದ ಕಂಪನಿಗಳು

ರಿಲಯನ್ಸ್ ಇಂಡಸ್ಟ್ರೀಸ್ , ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್ ಡಿಎಫ್ ಸಿ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್ ಲಿ, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ, ಬಜಾಜ್ ಫೈನಾನ್ಸ್, ವಿಪ್ರೋ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಳೆದ ವಾರ ಲಾಭ ಗಳಿಸಿದ ಕಂಪನಿಗಳಾಗಿದ್ದು, ಹೆಚ್ಚಿನ ವಹಿವಾಟು ನಡೆಸಿವೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಳೆದ ಶುಕ್ರವಾರ (ಸೆಪ್ಟೆಂಬರ್ 03) ದಂದು ಶೇ 4.10ರಷ್ಟು 94.10ರು ಏರಿಕೆಯಾಗಿ 2,388.50 ಅಂಶಕ್ಕೇರಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಟಾಪ್

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಟಾಪ್

ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ 1,02,382 ಕೋಟಿ ರು ಹಿಗ್ಗಿ 15,14,017.50 ಕೋಟಿ ರು ಮೌಲ್ಯಕ್ಕೇರಿದೆ. ಮಾರುಕಟ್ಟೆ ಮೌಲ್ಯ ಕೂಡಾ 15 ಲಕ್ಷ ಕೋಟಿ ರು ಗೇರಿದ ಮೊದಲ ದೇಶಿ ಕಂಪನಿ ಎನಿಸಿಕೊಂಡಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) 44,832.5 ಕೋಟಿ ರು ಸೇರಿಸಿಕೊಂಡು 14,20,935.10 ಕೋಟಿ ರು ಮೌಲ್ಯಕ್ಕೇರಿದೆ. ಭಾರ್ತಿ ಏರ್ ಟೆಲ್ 35,342.16 ಕೋಟಿ ರು ಸೇರಿಸಿಕೊಂಡು 3,61,540.16ಕೋಟಿ ರು ತಲುಪಿದೆ. ಬಜಾಜ್ ಫೈನಾನ್ಸ್ 33,906.91 ಕೋಟಿ ರು ಕಳೆದುಕೊಂಡು 4,54,207.76 ಕೋಟಿ ರುಗೆ ಕುಸಿದಿದೆ.

ಹಿಂದೂಸ್ತಾನ್ ಯೂನಿಲಿವರ್ ಮೌಲ್ಯ
 

ಹಿಂದೂಸ್ತಾನ್ ಯೂನಿಲಿವರ್ ಮೌಲ್ಯ

ಹಿಂದೂಸ್ತಾನ್ ಯೂನಿಲಿವರ್ ಮೌಲ್ಯ 20,712.29 ಕೋಟಿ ರು ಹಿಗ್ಗಿ 6,49,943.93 ರು ಆಗಿದೆ. ಐಸಿಐಸಿಸಿ ಬ್ಯಾಂಕ್ ಮೌಲ್ಯ 17,373.55 ಕೋಟಿ ರು ಮೇಲಕ್ಕೇರಿ 5,02,232.46 ಕೋಟಿ ರು ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 17,001.38 ಕೋಟಿ ರು ಏರಿಕೆಯಾಗಿ 3,85,007.74 ಕೋಟಿ ರು ಆಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ 14,954.74ಕೋಟಿ ರು ಸೇರಿಸಿಕೊಂಡು 8,72,362.42 ಕೋಟಿ ರು ತಲುಪಿದೆ. ಎಚ್‌ಡಿಎಫ್‌ಸಿ 7,298.81 ಕೋಟಿ ರು ಸೇರಿಸಿಕೊಂಡು 4,98,290.05 ಕೋಟಿ ರು ತಲುಪಿದೆ.

ಒಟ್ಟಾರೆ, ಟಾಪ್ 10 ಕಂಪನಿಗಳು

ಒಟ್ಟಾರೆ, ಟಾಪ್ 10 ಕಂಪನಿಗಳು

ಒಟ್ಟಾರೆ, ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿ, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ, ಬಜಾಜ್ ಫೈನಾನ್ಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹಾಗೂ ಭಾರ್ತಿ ಏರ್ ಟೆಲ್. ಕಳೆದ ವಾರ ಮೌಲ್ಯ ಕಳೆದುಕೊಂಡ ಏಕೈಕ ಕಂಪನಿ ಇನ್ಫೋಸಿಸ್ ಮೌಲ್ಯ 3,457.12 ಕೋಟಿ ರು ಇಳಿಕೆ ಕಂಡು 7,21,244.78 ರು ಆಗಿದೆ.

English summary

Market valuation: Nine of top-10 cos add Rs 2.93 lakh cr in m-cap

M- Cap valuation last week: Nine of top-10 cos add Rs 1,90,032.06 crore in Market valuation (m-cap) HUL and TCS tops chart.
Story first published: Sunday, September 5, 2021, 15:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X