ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಒಟ್ಟಾರೆ ಮೌಲ್ಯಗಳ ಬೆಲೆ 1,52,355.03 ಕೋಟಿ ರು ದಾಟಿದೆ. ಕಳೆದ ವಾರದಲ್ಲಿ ಎಚ್‌ಡಿಎಫ್‌ಸಿ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಅತ್ಯಧಿಕ ಲಾಭ ಗಳಿಸಿವೆ.
ಬಿಎಸ್ಇಯಲ್ಲಿ 30 ಷೇರುಗಳು ಸೆನ್ಸೆಕ್ಸ್ 1,246.89 ಅಂಕ ಅಥವಾ ಶೇ 2.07 ರಷ್ಟು ಏರಿಕೆ ಕಂಡಿತ್ತು. ಆದರೆ, ಶುಕ್ರವಾರದಂದು ದಸರಾ ಹಬ್ಬದ ನಿಮಿತ್ತ ಷೇರುಪೇಟೆ ವಹಿವಾಟು ಸ್ಥಗಿತಗೊಂಡಿತ್ತು.
ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಹೆಚ್ಚು ಕಂಪನಿ ಮೌಲ್ಯ ಕಳೆದುಕೊಂಡಿವೆ. ಟಾಪ್ 10 ರಲ್ಲಿ 8 ಕಂಪನಿಗ ಮೌಲ್ಯ ಬದಲಾಗಿದೆ. ರಜೆಗಳ ನಡುವೆ ಷೇರುಪೇಟೆಯಲ್ಲಿ ಹೆಚ್ಚು ವಹಿವಾಟು ಕಂಡು ಬಂದಿವೆ..
ಎಚ್‌ಡಿಎಫ್‌ಸಿ ಬ್ಯಾಂಕ್ 46,348.47 ಕೋಟಿ ರು ಮೌಲ್ಯ ಏರಿಸಿಕೊಂಡು 9,33,559.01 ಕೋಟಿ ರು ತಲುಪಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 29,272.73 ಕೋಟಿ ರು ಹೆಚ್ಚಿಸಿಕೊಂಡು 4,37,752.20 ಕೋಟಿ ರು ಮೌಲ್ಯಕ್ಕೇರಿದೆ. ಮಿಕ್ಕ ಕಂಪನಿಗಳ ಮೌಲ್ಯ ಏರಿಳಿತ ವಿವರ ಮುಂದಿದೆ...
ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ
ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ 18,384.38 ಕೋಟಿ ರು ಹಿಗ್ಗಿ 17,11,554.55 ಕೋಟಿ ರು ಮೌಲ್ಯಕ್ಕೇರಿದೆ. ಐಸಿಐಸಿಸಿ ಬ್ಯಾಂಕ್ ಮೌಲ್ಯ 16,860.76 ಕೋಟಿ ರು ಏರಿಕೆ ಕಂಡು 5,04,249.13 ಕೋಟಿ ರು ಆಗಿದೆ. ಎಚ್‌ಡಿಎಫ್‌ಸಿ 16,020.7 ಕೋಟಿ ರು ಏರಿಕೆ ಕಂಡು 5,07,861.84 ಕೋಟಿ ರು ತಲುಪಿದೆ.
ಕೋಟಕ್ ಮಹೀಂದ್ರಾ ಬ್ಯಾಂಕ್ ಮೌಲ್ಯ
ಕೋಟಕ್ ಮಹೀಂದ್ರಾ ಬ್ಯಾಂಕ್ ಮೌಲ್ಯ 15,944.02 ಕೋಟಿ ರು ಏರಿಕೆ ಕಂಡು 3,99,810.31 ಕೋಟಿ ರು ಮೌಲ್ಯಕ್ಕೇರಿದೆ. ಬಜಾಜ್ ಫೈನಾನ್ಸ್ 7,526.82 ಕೋಟಿ ರು ಏರಿಸಿಕೊಂಡು 4,74,467.41ಕೋಟಿ ರುಗೆ ಏರಿದೆ. ಹಿಂದೂಸ್ತಾನ್ ಯೂನಿಲಿವರ್ ಮೌಲ್ಯ 1,997.15 ಕೋಟಿ ರು ಏರಿ 6,22,359.73 ರು ಆಗಿದೆ.
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) 1,19,849.27 ಕೋಟಿ ರು ಕುಸಿತ ಕಂಡು 13,35,838.42 ಕೋಟಿ ರು ಮೌಲ್ಯ ಕಂಡಿದೆ. ಟಿಸಿಎಸ್ ಸೆಪ್ಟೆಂಅಬ್ರ್ 30ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ನಿರೀಕ್ಷಿತ ಫಲಿತಾಂಶ ಹೊರ ಹಾಕಲು ವಿಫಲವಾಗಿದ್ದರಿಂದ ಷೇರು ಮೌಲ್ಯ ಶೇ 6ಕ್ಕಿಂತ ಅಧಿಕ ಕುಸಿತ ಕಂಡಿತ್ತು. ಇನ್ಫೋಸಿಸ್ 3,414.71 ಕೋಟಿ ರು ಇಳಿಸಿಕೊಂಡು 7,27,692.41ಕೋಟಿ ರು ಮೌಲ್ಯ ಹೊಂದಿದೆ.
ಒಟ್ಟಾರೆ, ಟಾಪ್ 10 ಕಂಪನಿಗಳು
ಒಟ್ಟಾರೆ, ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕ್.


Click it and Unblock the Notifications