For Quick Alerts
ALLOW NOTIFICATIONS  
For Daily Alerts

ಕಳೆದ ವಾರ ಟಾಪ್ 10 ಸಂಸ್ಥೆ ಮೌಲ್ಯ: ಟಿಸಿಎಸ್‌ಗೆ ಮಾತ್ರ ಭಾರಿ ಲಾಭ

|

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ 5 ಕಂಪನಿಗಳು ಒಟ್ಟಾರೆ 85,712.56 ಕೋಟಿ ರು ಮೌಲ್ಯ ಏರಿಸಿಕೊಂಡಿವೆ. ಇದಕ್ಕೂ ಹಿಂದಿನ ವಾರದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL), ಇನ್ಫೋಸಿಸ್ ಹಾಗೂ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ (ಟಿಸಿಎಸ್) ಹೆಚ್ಚು ಲಾಭಗಳಿಸಿದ್ದವು. ಜಾಗತಿಕ ಮಾರುಕಟ್ಟೆ ಏರಿಳಿತದ ನಡುವೆ ಸ್ಥಳೀಯ ಮಾರುಕಟ್ಟೆಯಲ್ಲಿ ಭಾರಿ ವ್ಯತ್ಯಾಸ ಕಂಡಿವೆ. ಬಜೆಟ್ ನಂತರ ಐಟಿ, ಆರೋಗ್ಯ, ಫಾರ್ಮಾ, ಪ್ರವಾಸೋದ್ಯಮ, ಇನ್ಫ್ರಾ ಷೇರುಗಳು ಚೇತರಿಕೆ ಕಾಣುವ ಸಾಧ್ಯತೆಯಿದೆ ಎನ್ನಲಾಗಿತ್ತು.

ಜಾಗತಿಕ ವಿದ್ಯಮಾನ, ವಿದೇಶಿ ಫಂಡ್ ಹರಿವು, ಬಜೆಟ್ ಬಗ್ಗೆ ನಿರೀಕ್ಷೆಗಳು ಹೆಚ್ಚಿನ ವಹಿವಾಟು ಕಾಣದಂತೆ ಮಾಡಿವೆ. ಟಿಸಿಎಸ್‌ ಮಾತ್ರ ಲಾಭ ಗಳಿಸಿದೆ.

ಕೊರೊನಾವೈರಸ್ ಹೊಸ ರೂಪಾಂತರಿ ಅಲೆಯಿಂದ ಷೇರುಪೇಟೆ ವಹಿವಾಟು ಭಾರಿ ನಷ್ಟ ಅನುಭವಿಸಿದ್ದವು, ಟಾಪ್ ಕಂಪನಿಗಳು ಭಾರಿ ನಷ್ಟ ಅನುಭವಿಸಿದ್ದವು. ಯಾವ ಕಂಪನಿ ಮೌಲ್ಯ ಎಷ್ಟಾಗಿದೆ ಎಂಬ ವಿವರ ಮುಂದೆ ಓದಿ..

ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ 36,694.59 ಕೋಟಿ ರು ಸೇರಿಸಿಕೊಂಡು 14,03,716.02 ಕೋಟಿ ರು ಮೌಲ್ಯಕ್ಕೆ ಏರಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆ ಮೌಲ್ಯ 32,014.47 ಕೋಟಿ ರು ಏರಿಕೆ ಕಂಡು 16,39,872.16 ಕೋಟಿ ರು ಆಗಿದೆ.

ಕಳೆದ ವಾರ ಟಾಪ್ 10 ಸಂಸ್ಥೆ ಮೌಲ್ಯ: ಟಿಸಿಎಸ್‌ಗೆ ಮಾತ್ರ ಭಾರಿ ಲಾಭ

ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ 12,781.78 ಕೋಟಿ ರು ಏರಿಕೆ ಕಂಡು 5,43,225.5 ಕೋಟಿ ರು ಮೌಲ್ಯ ಉಳಿಸಿಕೊಂಡಿದೆ. ಇದೇ ವೇಳೆ ಎಚ್‌ಡಿಎಫ್‌ಸಿ 2,703.68 ಕೋಟಿ ರು ಮೌಲ್ಯ ಇಳಿಕೆ ಕಂಡು 4,42,162.93 ಕೋಟಿ ರು ತಲುಪಿದೆ.

ಬಜಾಜ್ ಫೈನಾನ್ಸ್ 1,518.04 ಕೋಟಿ ರು ಏರಿಸಿಕೊಂಡು 4,24,456.6 ಕೋಟಿ ರುಗೆ ಇಳಿಕೆ ಕಂಡಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ 3,399.6 ಕೋಟಿ ರು ಇಳಿಕೆ ಕಂಡು 8,38,529.6 ಕೋಟಿ ರು ತಲುಪಿದೆ.

ದೇಶದ ಎರಡನೇ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ 5,845.84 ಕೋಟಿ ರು ಕುಸಿತ ಕಂಡು 7,17,944.43 ಕೋಟಿ ರು ತಲುಪಿದೆ. ಐಸಿಐಸಿಐ ಬ್ಯಾಂಕ್ 28,779.7 ಕೋಟಿ ರು ಇಳಿಕೆ ಕಂಡು 5,20,654.76 ಕೋಟಿ ರು ತಲುಪಿದೆ.

ಇದೇ ವೇಳೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 12,360.59 ಕೋಟಿ ರು ಮೌಲ್ಯ ಇಳಿಕೆ ಕಂಡು 4,60,019.1 ಕೋಟಿ ರು ತಲುಪಿದೆ. ಭಾರ್ತಿ ಏರ್ ಟೆಲ್ ಸಂಸ್ಥೆ ಮೌಲ್ಯಗಳು 961.11 ಕೋಟಿ ರು ಇಳಿಸಿಕೊಂಡು 3,91,416.78 ಕೋಟಿ ರುಗೆ ಇಳಿಕೆ ಕಂಡಿದೆ.

ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ, ಬಜಾಜ್ ಫೈನಾನ್ಸ್ ಹಾಗೂ ಭಾರ್ತಿ ಏರ್ ಟೆಲ್.

English summary

M-cap of five of top-10 companies adds Rs 86,000 cr; TCS top gainer

The market valuation of five of top 10 most valued companies jumped by Rs 85,712.56 crore last week. Tata Consultancy Services (TCS) emerged as the biggest gainer.
Story first published: Sunday, February 20, 2022, 23:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X