For Quick Alerts
ALLOW NOTIFICATIONS  
For Daily Alerts

ಕಳೆದ ವಾರದ ಟಾಪ್ 10 ಕಂಪನಿ: ಏರ್ ಟೆಲ್ ಹಾಗೂ ಎಸ್ಬಿಐ ಟಾಪ್

|

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ನಾಲ್ಕು ಕಂಪನಿಗಳು ಕಳೆದ ವಾರದಲ್ಲಿ65,464ಕೋಟಿ ರು ಮಾರುಕಟ್ಟೆ ಮೌಲ್ಯ ಹೆಚ್ಚಿಸಿಕೊಂಡಿವೆ. ಸತತ ನಾಲ್ಕು ವಾರಗಳಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಹೆಚ್ಚು ಲಾಭ ಗಳಿಸಿದೆ. ಕಳೆದ ಎರಡು ವಾರದಲ್ಲಿ ಹಿಂದೂಸ್ತಾನ್ ಯೂನಿಲಿವರ್ ಲಿ, ರಿಲಯನ್ಸ್ ಇಂಡಸ್ಟ್ರೀಸ್ ಅತಿ ಹೆಚ್ಚು ಮೌಲ್ಯವೃದ್ಧಿ ಕಂಡಿದ್ದವು, ಕಳೆದ ವಾರದ ಈ ಎರಡು ಕಂಪನಿಗಳು ನಷ್ಟದತ್ತ ಮುಖ ಮಾಡಿವೆ. ಏರ್ ಟೆಲ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅತಿ ಹೆಚ್ಚು ಗಳಿಕೆ ಕಂಡಿವೆ.

 

ಹೆಚ್ಚು ಮೌಲ್ಯ ಕಳೆದು ಕೊಂಡ ಕಂಪನಿಗಳಲ್ಲಿ ಅಚ್ಚರಿಯೆಂಬಂತೆ ರಿಲಯನ್ಸ್ ಇಂಡಸ್ಟ್ರೀಸ್, ಹಿಂದೂಸ್ತಾನ್ ಯೂನಿಲಿವರ್ ಕಂಪನಿ, ಎಚ್ ಡಿ ಎಫ್ ಸಿ ಗುರುತಿಸಿಕೊಂಡಿದೆ. ಏರ್ ಟೆಲ್, ಎಸ್ ಬಿಐ ಅಲ್ಲದೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್ ಡಿ ಎಫ್ ಸಿ ಬ್ಯಾಂಕ್ ಅತಿ ಹೆಚ್ಚು ಲಾಭ ಗಳಿಸಿವೆ. ಬಿಎಸ್ಇಯಲ್ಲಿ 30 ಷೇರುಗಳು ಸೆನ್ಸೆಕ್ಸ್ 719 ಅಂಕ ಅಥವಾ ಶೇ 1.21 ರಷ್ಟು ಏರಿಕೆ ಕಂಡಿತ್ತು. ಸೆನ್ಸೆಕ್ಸ್ 59,000 ಗುರಿಯನ್ನು ಕಳೆದ ಗುರುವಾರ ದಾಟಿತ್ತು.

ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಹೆಚ್ಚು ಕಂಪನಿ ಮೌಲ್ಯ ಕಳೆದುಕೊಂಡಿದೆ. ರಜೆಗಳ ನಡುವೆ ಷೇರುಪೇಟೆಯಲ್ಲಿ ಹೆಚ್ಚು ವಹಿವಾಟು ಕಂಡು ಬಂದಿವೆ..

ಹೆಚ್ಚಿನ ವಹಿವಾಟು ನಡೆಸಿದ ಕಂಪನಿಗಳು

ಹೆಚ್ಚಿನ ವಹಿವಾಟು ನಡೆಸಿದ ಕಂಪನಿಗಳು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಭಾರ್ತಿ ಏರ್ ಟೆಲ್, ಎಚ್‌ಡಿಎಫ್‌ಸಿ ಬ್ಯಾಂಕ್, ಕಳೆದ ವಾರ ಲಾಭ ಗಳಿಸಿದ ಕಂಪನಿಗಳಾಗಿದ್ದು, ಹೆಚ್ಚಿನ ವಹಿವಾಟು ನಡೆಸಿವೆ. ಭಾರ್ತಿ ಏರ್ ಟೆಲ್ ಕಳೆದ ಶುಕ್ರವಾರ (ಸೆಪ್ಟೆಂಬರ್ 17) ದಂದು ಶೇ 1.33ರಷ್ಟು 9.55ರು ಏರಿಕೆಕೆಯಾಗಿ 728.15ಅಂಶಕ್ಕೇರಿದೆ.

ಎಸ್ ಬಿ ಐ, ಏರ್ಟೆಲ್ ಟಾಪ್

ಎಸ್ ಬಿ ಐ, ಏರ್ಟೆಲ್ ಟಾಪ್

ಭಾರ್ತಿ ಏರ್ ಟೆಲ್ 19,500.28 ಕೋಟಿ ರು ಸೇರಿಸಿಕೊಂಡು 4,05,221.99ಕೋಟಿ ರು ತಲುಪಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 19,500.28 ಕೋಟಿ ರು ಏರಿಕೆಯಾಗಿ 4,05,221.99 ಕೋಟಿ ರು ಆಗಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) 14,315.33ಕೋಟಿ ರು ಹೆಚ್ಚಿಸಿಕೊಂಡು 14,16,903.13 ಕೋಟಿ ರು ಮೌಲ್ಯಕ್ಕೇರಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ 8,664.66ಕೋಟಿ ರು ಮೌಲ್ಯ ಹೆಚ್ಚಿಸಿಕೊಂಡು 8,76,597.86 ಕೋಟಿ ರು ತಲುಪಿದೆ.

ಹೆಚ್ಚು ಕಳೆದುಕೊಂಡ ಕಂಪನಿಗಳು
 

ಹೆಚ್ಚು ಕಳೆದುಕೊಂಡ ಕಂಪನಿಗಳು

ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ 22,219.75 ಕೋಟಿ ರು ಕುಗ್ಗಿ 15,15,380.48 ಕೋಟಿ ರು ಮೌಲ್ಯಕ್ಕೇರಿದೆ. ಹಿಂದೂಸ್ತಾನ್ ಯೂನಿಲಿವರ್ ಮೌಲ್ಯ 20,605.92 ಕೋಟಿ ರು ಕುಸಿದು 6,39,335.53 ರು ಆಗಿದೆ. ಎಚ್‌ಡಿಎಫ್‌ಸಿ 576.19 ಕೋಟಿ ರು ಸೇರಿಸಿಕೊಂಡು 5,10,550.29 ಕೋಟಿ ರು ತಲುಪಿದೆ. ಇನ್ಫೋಸಿಸ್ 212.1 ಕೋಟಿ ರು ಕಳೆದುಕೊಂಡು 7,17,427.09 ಮೌಲ್ಯ ಹೊಂದಿದೆ.
ಬಜಾಜ್ ಫೈನಾನ್ಸ್ 90.54 ಕೋಟಿ ರು ಕಳೆದುಕೊಂಡು 4,48,292.54 ಕೋಟಿ ರುಗೆ ಕುಸಿದಿದೆ. ಐಸಿಐಸಿಸಿ ಬ್ಯಾಂಕ್ ಮೌಲ್ಯ 42.29 ಕೋಟಿ ರು ಕೆಳಕ್ಕಿಳಿದು 4,99,176.68 ಕೋಟಿ ರು ಆಗಿದೆ.

ಒಟ್ಟಾರೆ, ಟಾಪ್ 10 ಕಂಪನಿಗಳು

ಒಟ್ಟಾರೆ, ಟಾಪ್ 10 ಕಂಪನಿಗಳು

ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿ,ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹಾಗೂ ಭಾರ್ತಿ ಏರ್ ಟೆಲ್.

English summary

M-cap of four of top-10 most-valued cos jumps Rs 65,464 cr; Airtel, SBI lead gainers

Four of the top-10 most valued companies together added Rs 65,464.41 crore to market valuation last week, with Bharti Airtel and State Bank of India emerging as the biggest gainers.
Story first published: Sunday, September 19, 2021, 16:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X