ಟಾಪ್ 10 ಕಂಪನಿಗಳ ಮೌಲ್ಯ: ರಿಲಯನ್ಸ್ , ಟಿಸಿಎಸ್ ಗಳಿಕೆ ಹೆಚ್ಚಳ

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಕಳೆದ ವಾರ (ಜುಲೈ 24 ತನಕ) ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಅತಿ ಹೆಚ್ಚು ಗಳಿಕೆ ಕಂಡಿವೆ. ಒಟ್ಟಾರೆ 9 ಕಂಪನಿಗಳಿಂದ ಮಾರುಕಟ್ಟೆ ಚೇತರಿಕೆ ಕಂಡಿದೆ.

ಕಳೆದ ವಾರ ಎಲ್ಲಾ ಟಾಪ್ 10 ಕಂಪನಿಗಳ 8 ಕಂಪನಿಗಳಿಂದ ಒಟ್ಟಾರೆ 2.98 ಲಕ್ಷ ಕೋಟಿ ರು ಮೌಲ್ಯ ಹೆಚ್ಚಳವಾಗಿದೆ. ದೇಶದ ಅತಿ ಮೌಲ್ಯಯುತ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಅತಿ ದೊಡ್ಡ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ನಷ್ಟ ಅನುಭವಿಸಿವೆ. ಹಿಂದೂಸ್ತಾನ್ ಯೂನಿಲಿವರ್ ಹೆಚ್ಚು ಲಾಭ ಮಾಡಿದೆ.

ರಷ್ಯಾ- ಉಕ್ರೇನ್ ಯುದ್ಧದ ನಡುವೆ ಜಾಗತಿಕ ಮಾರುಕಟ್ಟೆ ಏರಿಳಿತ ಕಾಣುತ್ತಿದ್ದು, ಜಾಗತಿಕವಾಗಿ ಅನೇಕ ದೇಶಗಳಲ್ಲಿನ ಆರ್ಥಿಕ ಪರಿಸ್ಥಿತಿ ಕುರಿತ, ಆಮದು -ರಫ್ತು ನಿರ್ಬಂಧ, ಜಿಎಸ್ಟಿ ಸಭೆ, ಸಮ್ಮೇಳನ ನಂತರ ಮುಂತಾದ ವಿದ್ಯಮಾನ ಎಲ್ಲದರ ಪರಿಣಾಮ ಸ್ಥಳೀಯ ಮಾರುಕಟ್ಟೆಯಲ್ಲಿ ಭಾರಿ ವ್ಯತ್ಯಾಸ ಕಂಡಿವೆ.

ಕಳೆದ ವಾರ, ಬೆಂಚ್‌ಮಾರ್ಕ್ 30 ಷೇರು ಬಿಎಸ್‌ಇ ಸೆನ್ಸೆಕ್ಸ್ 2,311.45 ಪಾಯಿಂಟ್‌ಗಳು ಅಥವಾ ಶೇಕಡಾ 4.29 ರಷ್ಟು ಏರಿಕೆ ಕಂಡಿತ್ತು. ಕಳೆದ ವಾರದಲ್ಲಿ ಹೂಡಿಕೆದಾರರು ಸುರಕ್ಷೆಯ ವಿಧಾನ ಅನುಸರಿಸಿ, ಹೆಚ್ಚಿನ ಹೂಡಿಕೆಗೆ ಮುಂದಾದರು. ಯಾವ ಕಂಪನಿ ಮೌಲ್ಯ ಎಷ್ಟಾಗಿದೆ ಎಂಬ ವಿವರ ಮುಂದೆ ಓದಿ..

ಯಾವೆಲ್ಲ ಕಂಪನಿಗಳ ಮೌಲ್ಯ ಏರಿಕೆ?

ಯಾವೆಲ್ಲ ಕಂಪನಿಗಳ ಮೌಲ್ಯ ಏರಿಕೆ?

ಟಾಪ್ 10 ಕಂಪನಿಗಳ ಪೈಕಿ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ ಹೊರತುಪಡಿಸಿ, ಮಿಕ್ಕೆಲ್ಲ ಕಂಪನಿಗಳ ಮೌಲ್ಯ ಮೇಲಕ್ಕೇರಿದೆ. ಎಚ್ ಡಿ ಎಫ್ ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಹಾಗೂ ಐಸಿಐಸಿಐ ಬ್ಯಾಂಕ್ ಒಟ್ಟಾರೆ 2,98,523.01 ಕೋಟಿ ರು ಮೌಲ್ಯಕ್ಕೇರಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಮೌಲ್ಯ

ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಮೌಲ್ಯ

ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಮೌಲ್ಯ 68,564.65 ಕೋಟಿ ರು ಏರಿಕೆ ಕಂಡು 16,93,245.73 ಕೋಟಿ ರು ತಲುಪಿದೆ. ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ 64,929.87 ಕೋಟಿ ರು ಇಳಿಕೆ ಕಂಡು 11,60,285.19 ಕೋಟಿ ರು ಮೌಲ್ಯಕ್ಕಿಳಿದಿದೆ.  

ಇನ್ಫೋಸಿಸ್ ಸಂಸ್ಥೆ

ಇನ್ಫೋಸಿಸ್ ಸಂಸ್ಥೆ

ದೇಶದ ಎರಡನೇ ಅತಿ ದೊಡ್ಡ ಸಂಸ್ಥೆ ಇನ್ಫೋಸಿಸ್ ಸಂಸ್ಥೆ 31,893.77 ಕೋಟಿ ರು ಇಳಿಕೆ ಕಂಡು 6,33,793.91 ಕೋಟಿ ರು ಮೌಲ್ಯ ತಲುಪಿದೆ. ಐಸಿಐಸಿಐ ಬ್ಯಾಂಕ್ ಮೌಲ್ಯ 34,028.7 ಕೋಟಿ ರು ಕುಗ್ಗಿ 5,56,526.81 ಕೋಟಿ ರು ಆಗಿದೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) 30,968.4 ಕೋಟಿ ರು ವ್ಯತ್ಯಾಸ ಕಂಡು 4,58,457.30 ಕೋಟಿ ರು ಗೇರಿದೆ. ಬಜಾಜ್ ಫೈನಾನ್ಸ್ ಮೌಲ್ಯ 20,636.69 ಕೋಟಿ ರು ಏರಿಕೆಯಾಗಿ 3,78,774.69 ಕೋಟಿ ರು ಆಗಿದೆ. ಹಿಂದೂಸ್ತಾನ್ ಯೂನಿಲಿವರ್ 16,811.32 ಕೋಟಿ ರು ಸೇರಿಸಿ 6,20,362.58 ಕೋಟಿ ರು ತಲುಪಿದೆ.

ಭಾರತೀಯ ಜೀವ ವಿಮಾ ನಿಗಮ

ಭಾರತೀಯ ಜೀವ ವಿಮಾ ನಿಗಮ

ಖಾಸಗಿ ವಲಯದ ಪ್ರಮುಖ ಹಣಕಾಸು ಸಂಸ್ಥೆ ಎಚ್ ಡಿ ಎಫ್ ಸಿ 16,110.37 ಕೋಟಿ ರು ಏರಿಕೆ ಕಂಡು 7,73,770.09 ಕೋಟಿ ರು ತಲುಪಿದೆ. ಎಚ್ ಡಿ ಎಫ್ ಸಿ ಮೌಲ್ಯ 14,579.24 ಕೋಟಿ ರು ಕುಗ್ಗಿ 4,16,701.23 ಕೋಟಿ ರು ಆಗಿದೆ. ಇದೇ ವೇಳೆ ಭಾರತೀಯ ಜೀವ ವಿಮಾ ನಿಗಮ(ಎಲ್ಐಸಿ) ದ ಮೌಲ್ಯ 12,396.99 ಕೋಟಿ ರು ಇಳಿಕೆಯಾಗಿ 4,35,760.72 ಕೋಟಿ ರು ತಲುಪಿದೆ.

ಟಾಪ್ 10 ಕಂಪನಿಗಳು

ಟಾಪ್ 10 ಕಂಪನಿಗಳು

ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್ ಮತ್ತೊಮ್ಮೆ ಅತಿ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ಸಂಸ್ಥೆ ಎನಿಸಿಕೊಂಡಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್ ಡಿಎಫ್ ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಲ್ ಐಸಿ, ಎಚ್ ಡಿ ಎಫ್ ಸಿ ಹಾಗೂ ಬಜಾಜ್ ಫೈನಾನ್ಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+