ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಒಟ್ಟಾರೆ 1,29,047.61ಕೋಟಿ ರು ಮೌಲ್ಯ ಪಡೆದುಕೊಂಡಿವೆ. ಕಳೆದ ವಾರದಲ್ಲಿ ಒಟ್ಟಾರೆ 3 ಕಂಪನಿಗಳು ನಷ್ಟ ಅನುಭವಿಸಿದ್ದು, ಐಸಿಐಸಿಐ ಬ್ಯಾಂಕ್, ಭಾರ್ತಿ ಏರ್ ಟೆಲ್ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಭಾರಿ ನಷ್ಟ ಅನುಭವಿಸಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್ ಡಿ ಎಫ್ ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ಎಚ್ ಡಿ ಎಫ್ ಸಿ, ಬಜಾಜ್ ಫೈನಾನ್ಸ್ ಲಾಭ ಗಳಿಸಿವೆ.
ಬಿಎಸ್ಇಯಲ್ಲಿ 30 ಷೇರುಗಳು ಸೆನ್ಸೆಕ್ಸ್ 589.31 ಅಂಕ ಅಥವಾ ಶೇ 1.03 ರಷ್ಟು ಗಳಿಕೆ ಕಂಡಿತ್ತು. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಹೆಚ್ಚು ಕಂಪನಿ ಮೌಲ್ಯ ಗಳಿಸಿಕೊಂಡಿವೆ. ಟಾಪ್ 10 ರಲ್ಲಿ 9 ಕಂಪನಿಗಳ ಮೌಲ್ಯ ಬದಲಾಗಿದೆ. ಹಬ್ಬದ ರಜೆಗಳಿಗೂ ಮುನ್ನ ಷೇರುಪೇಟೆಯಲ್ಲಿ ಹೆಚ್ಚು ವಹಿವಾಟು ಕಂಡು ಬಂದಿರಲಿಲ್ಲ.
ಕೊರೊನಾವೈರಸ್ ಹೊಸ ರೂಪಾಂತರಿ ಅಲೆಯಿಂದ ಷೇರುಪೇಟೆ ವಹಿವಾಟು ಭಾರಿ ನಷ್ಟ ಅನುಭವಿಸುತ್ತಿದೆ. ಟಾಪ್ ಕಂಪನಿಗಳು ಭಾರಿ ನಷ್ಟ ಅನುಭವಿಸಿವೆ. ಭಾರ್ತಿ ಏರ್ ಟೆಲ್ ಮಾತ್ರ ಟಾಪ್ 10 ಪಟ್ಟಿಯಲ್ಲಿ ಲಾಭ ಗಳಿಸಿದ ಸಾಧನೆ ಮಾಡಿದೆ. ಕಳೆದ ವಾರ ಹೆಚ್ಚಿನ ಲಾಭವನ್ನು ಟಾಪ್ ಕಂಪನಿಗಳು ಕಂಡಿಲ್ಲ. ರಜೆಗಳ ನಡುವೆ ಷೇರುಪೇಟೆಯಲ್ಲಿ ಹೆಚ್ಚು ವಹಿವಾಟು ಹೆಚ್ಚಾಗಿದ್ದರೂ ಟಾಪ್ ಕಂಪನಿಗಳು ಭಾರಿ ನಷ್ಟ ಅನುಭವಿಸಿವೆ. ಯಾವ ಕಂಪನಿ ಮೌಲ್ಯ ಏರಿಕೆಯಾಗಿದೆ ಹಾಗೂ ಯಾವ ಕಂಪನಿ ಮೌಲ್ಯ ಕುಸಿದಿದೆ ಎಂಬ ವಿವರ ಮುಂದೆ ಓದಿ..

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) 71,761.59 ಕೋಟಿ ರು ಕುಸಿತ ಕಂಡು 13,46,325.23 ಕೋಟಿ ರು ಮೌಲ್ಯ ಕಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆ ಮೌಲ್ಯ 38,440.66 ಕೋಟಿ ರು ಕುಸಿತ ಕಂಡು 15,30,109.51 ರು ಆಗಿದೆ. ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ಕಳೆದ ಒಂದು ವಾರದಲ್ಲಿ 37,950.03 ಕೋಟಿ ರು ಮೌಲ್ಯ ಇಳಿಸಿಕೊಂಡು 7,10,925.34 ಕೋಟಿ ರು ಮೌಲ್ಯ ಹೊಂದಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 29,852.83 ಕೋಟಿ ರು ಇಳಿಸಿಕೊಂಡು 4,19,902.97 ಕೋಟಿ ರು ಮೌಲ್ಯಕ್ಕಿಳಿದಿದೆ. ಐಸಿಐಸಿಸಿ ಬ್ಯಾಂಕ್ ಮೌಲ್ಯ 28,567.03 ಕೋಟಿ ರು ಇಳಿಕೆ ಕಂಡು 5,01,039.91 ಕೋಟಿ ರು ಆಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ 26,873.77 ಕೋಟಿ ರು ಇಳಿಕೆ ಕಂಡು 8,25,658.59 ಕೋಟಿ ರು ತಲುಪಿದೆ. ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ 14,778.93 ಕೋಟಿ ರು ಇಳಿಕೆ ಕಂಡು 5,48,570.82 ಕೋಟಿ ರು ಮೌಲ್ಯ ಉಳಿಸಿಕೊಂಡಿದೆ.
ಭಾರ್ತಿ ಏರ್ ಟೆಲ್ ಮೌಲ್ಯ 12, 769.55 ಕೋಟಿ ರು ಏರಿಕೆ ಕಂಡು 4,05,009.55 ಕೋಟಿ ರು ಗೇರಿದೆ. ಎಚ್‌ಡಿಎಫ್‌ಸಿ 33,067.68 ಕೋಟಿ ರು ಮೌಲ್ಯ ಇಳಿಸಿಕೊಂಡು 4,96,168.98 ಕೋಟಿ ರು ತಲುಪಿದೆ. ಬಜಾಜ್ ಫೈನಾನ್ಸ್ 41,518.24 ಕೋಟಿ ರು ಇಳಿಸಿಕೊಂಡು 4,10,670.50 ಕೋಟಿ ರುಗೆ ಕುಸಿತ ಕಂಡಿದೆ.
ಒಟ್ಟಾರೆ, ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಜಾಜ್ ಫೈನಾನ್ಸ್ ಹಾಗೂ ಭಾರ್ತಿ ಏರ್ ಟೆಲ್.
ಕಂಪನಿಗಳ ಮಾರುಕಟ್ಟೆ ಮೌಲ್ಯ
ಟಾಟಾ ಕನ್ಸಲೈನ್ಸಿ ಸರ್ವಿಸಸ್‌ನ ಮಾರುಕಟ್ಟೆ ಮೌಲ್ಯವು 71,761.59 ಕೋಟಿ ರೂಪಾಯಿಗೆ ಜಿಗಿದು, 13,46,325.23 ಕೋಟಿಗೆ ತಲುಪಿದೆ. ಇನ್ಫೋಸಿಸ್ 18,693.62 ಕೋಟಿ ರೂಪಾಯಿಗಳನ್ನು ಸೇರಿಸಿ ಅದರ ಮೌಲ್ಯವನ್ನು ರೂಪಾಯಿ 7,29,618.96 ಕೋಟಿಗೆ ತಲುಪಿದೆ. ಬಜಾಜ್ ಫೈನಾನ್ಸ್‌ನ ಮಾರುಕಟ್ಟೆ ಮೌಲ್ಯವು 16,082.77 ಕೋಟಿ ರೂ. ಯಿಂದ 4,26,753.27 ಕೋಟಿ ರೂ.ಗೆ ಏರಿಕೆ ಆಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮಾರುಕಟ್ಟೆ ಮೌಲ್ಯವು ರೂ. 12,744.21 ಕೋಟಿಯಿಂದ ರೂ. 8,38,402.80 ಕೋಟಿಗೆ ಏರಿಕೆಯಾಗಿದೆ. ಎಚ್‌ಡಿಎಫ್‌ಸಿಯ ಮಾರುಕಟ್ಟೆ ಕ್ಯಾಪಿಟಲ್ 5,393.86 ಕೋಟಿ ರೂ. ಏರಿಕೆ ಆಗಿ ರೂ.5,01,562.84 ಕೋಟಿಗೆ ತಲುಪಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರೂ.2,409.65 ಕೋಟಿಯಿಂದ ರೂ.4,22,312.62 ಕೋಟಿಗೆ ತಲುಪಿದೆ. ಹಿಂದುಸ್ತಾನ್ ಯೂನಿಲಿವರ್ ಲಿಮಿಟೆಡ್ 1,961.91 ಕೋಟಿ ರೂ.ಗಳನ್ನು ಗಳಿಸಿದ್ದು, ಅದರ ಒಟ್ಟು ಮೌಲ್ಯವು 5,50,532.73 ಕೋಟಿ ರೂಪಾಯಿಗೆ ಏರಿಕೆ ಕಂಡಿದೆ.
ಇದಕ್ಕೆ ವಿರುದ್ಧವಾಗಿ, ಭಾರ್ತಿ ಏರ್‌ಟೆಲ್‌ನ ಮೌಲ್ಯವು 10,489.77 ಕೋಟಿ ರೂ.ಗೆ ಕುಸಿದು 3,94,519.78 ಕೋಟಿಗೆ ಇಳಿದಿದೆ. ಐಸಿಐಸಿಐ ಬ್ಯಾಂಕ್‌ನ ಮೌಲ್ಯವು 3,686.55 ಕೋಟಿ ರೂ.ಗೆ ಕುಸಿದು 4,97,353.36 ಕೋಟಿ ರೂ.ಗೆ ಕುಸಿತ ಕಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಮೌಲ್ಯವು ರೂ.2,537.34 ಕೋಟಿ ಇಳಿಕೆಯಾಗಿ ರೂ.15,27,572.17 ಕೋಟಿಗೆ ತಲುಪಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅತ್ಯಂತ ಮೌಲ್ಯಯುತವಾದ ಸಂಸ್ಥೆ ಎಂಬ ಶೀರ್ಷಿಕೆಯನ್ನು ಉಳಿಸಿಕೊಂಡಿದೆ. ನಂತರ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಭಾರ್ತಿ ಏರ್‌ಟೆಲ್ ಇದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications