144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳಕ್ಕೆಈ ವರ್ಷ ಸಾಕ್ಷಿಯಾಗಿದೆ.ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಕೋಟ್ಯಂತರ ಜನ ಆಗಮಿಸಿದ್ದಾರೆ. ಪರಮೇಶ್ವರನಿಗೆ ತಲೆಬಾಗಿ ತ್ರಿವೇಣಿ ಸಂಗಮದಲ್ಲಿ ಮಿಂದೆದಿದ್ದಾರೆ.ಈ ವರ್ಷ ನಡೆದ ಕುಂಭಮೇಳ, ದೊಡ್ಡ ಮೈಲಿಗಲ್ಲನ್ನೇ ಸೃಷ್ಟಿಸಿದೆ. ಹಾಗಿದ್ರೆ ಜನಸಂಖ್ಯೆಯಲ್ಲಿ ದಾಖಲೆಯನ್ನು ಬರೆಯುವುದರ ಜೊತೆಗೆ ಆರ್ಥಿಕವಾಗಿ ದಾಖಲೆಯನ್ನು ಮಾಡಿದೆ.ಹಾಗಿದ್ರೆ ಮಹಾಕುಂಭಮೇಳದಲ್ಲಿ ಸಂಗ್ರಹವಾದ ಹಣ ಎಷ್ಟು? ಇದರಲ್ಲಿ ರಾಜ್ಯಕ್ಕೆ ಎಷ್ಟು ತೆರಿಗೆ ಸಿಗುತ್ತದೆ ಎಂಬ ಹೆಚ್ಚಿನ ವಿವರ ಇಲ್ಲಿದೆ.
ಹೌದು, ಮಕರ ಸಂಕ್ರಾಂತಿ ಮುನ್ನಾ ದಿನದಿಂದ ಆರಂಭವಾದ 45 ದಿನಗಳ ಕಾಲ ಸಾಗಿದ ಮಹಾ ಕುಂಭಮೇಳ ಮಹಾಶಿವರಾತ್ರಿಯಂದು ಮುಕ್ತಾಯಗೊಂಡಿದ್ದು, ಉತ್ತರ ಪ್ರದೇಶಕ್ಕೆ 1 ಟ್ರಿಲಿಯನ್ ಆರ್ಥಿಕತೆ ಗುರಿಯತ್ತ ಸಾಗಿದೆ. ಮಹಾ ಕುಂಭಮೇಳವು 3 ಲಕ್ಷ ಕೋಟಿ ರೂಪಾಯಿ ವಹಿವಾಟಿನ ತೆರಿಗೆಯು ರಾಜ್ಯದ ಆರ್ಥಿಕತೆಗೆ ಬಲ ತಂದು ಕೊಟ್ಟಿದೆ.

ಪ್ರಯಾಗ್‌ರಾಜ್‌ನಲ್ಲಿ ಜನವರಿ 13ರಿಂದ ಫೆ. 26ರ ವರೆಗೆ ನಡೆದ ಮಹಾಕುಂಭ ಮೇಳದಲ್ಲಿ 66.21 ಕೋಟಿ ಭಕ್ತರು ಪ್ರಯಾಗ್ರಾಜ್ನ ತ್ರಿವೇಣಿ ಸಂಗಮನದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಉದ್ಯಮ ತಜ್ಞರ ಪ್ರಕಾರ ಪ್ರಕಾರ ಜಗತ್ತಿನ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ ಮಹಾಕುಂಭ ಮೇಳದಲ್ಲಿ ಸರಕು ಮತ್ತು ಸೇವೆಗಳ ಮೂಲಕವೇ 3 ಲಕ್ಷ ಕೋಟಿ ಉದ್ಯಮ ಚಟುವಟಿಕೆ ನಡೆದಿದೆ ಎಂದು ಮಾಹಿತಿಯನ್ನು ತಿಳಿಸಿದ್ದಾರೆ.
ಬೃಹತ್ ಪ್ರಮಾಣದಲ್ಲಿ ಆರ್ಥಿಕ ಚಟುವಟಿಕೆ
ಮಹಾ ಕುಂಭಮೇಳವು ಬೃಹತ್ ಪ್ರಮಾಣದಲ್ಲಿ ಆರ್ಥಿಕ ಚಟುವಟಿಕೆಯನ್ನು ನೀಡಿದೆ. ಇದು ವಿವಿಧ ಉದ್ಯಮ ವಲಯಗಳಲ್ಲಿ ದೊಡ್ಡ ಪ್ರಮಾಣದ ವೃದ್ಧಿಗೆ ಕಾರಣವಾಗಿದೆ. ಅತಿಥ್ಯ, ವಸತಿ, ಆಹಾರ ಮತ್ತು ಪಾನೀಯ ವಲಯ, ಸಾರಿಗೆ ಮತ್ತು ಲಾಜಿಸ್ಟಿಕ್ಸ್, ಧಾರ್ಮಿಕ ವಸ್ತುಗಳು, ಪೂಜೆ ಮತ್ತು ಕರಕುಶಲ, ಜವಳಿ ಮತ್ತು ಇತರ ಗ್ರಾಹಕರ ಸರಕುಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಆರ್ಥಿಕ ಚಟುವಟಿಕೆಗಳ ಹೆಚ್ಚಳವನ್ನು ಮಾಡಿದೆ.
ಈ ಆರ್ಥಿಕ ಚಟುವಟಿಕೆ ಪ್ರಯಾಗ್ರಾಜ್ನಲ್ಲಿಯೇ ಅಲ್ಲದೆ, ಸುತ್ತಮುತ್ತ 100-150 ಕಿಲೋಮೀಟರ್ ವ್ಯಾಪ್ತಿಯ ವ್ಯಾಪಾರಗಳಲ್ಲಿ ಗಮನಾರ್ಹ ಏರಿಕೆಯನ್ನು ಕಂಡು ಬಂದಿದೆ. ಇದು ಸ್ಥಳೀಯ ಆರ್ಥಿಕತೆಯನ್ನು ಅಭಿವೃದ್ದಿಪಡಿಸಲು ಸಹಾಯಕವಾಗಿದೆ.
ಪ್ರಯಾಗ್ರಾಜ್ನ ಮೂಲ ಸೌಕರ್ಯಗಳಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಲು, ಸರ್ಕಾರ 7,500 ಕೋಟಿ ವೆಚ್ಚವನ್ನು ಮಂಜೂರು ಮಾಡಿತ್ತು. ಇದರ ಮೂಲಕ, 14 ಫ್ಲೈಓವರ್ಗಳು, 6 ಅಂಡರ್ಪಾಸ್ಗಳು, 200ಕ್ಕೂ ಹೆಚ್ಚು ರಸ್ತೆ ಅಗಲೀಕರಣ, ಹೊಸ ಕಾರಿಡಾರ್ಗಳು, ರೈಲ್ವೆ ನಿಲ್ದಾಣದ ವಿಸ್ತರಣೆ ಮತ್ತು ಆಧುನಿಕ ವಿಮಾನ ನಿಲ್ದಾಣದ ಟರ್ಮಿನಲ್ ನಿರ್ಮಾಣವನ್ನು ಸಾಧ್ಯವಾಗಿಸಿದೆ. ಜೊತೆಗೆ, ಮಹಾ ಕುಂಭಮೇಳದ ಸಿದ್ಧತೆಗಾಗಿ 1,500 ಕೋಟಿಯಷ್ಟು ಬಳಕೆ ಮಡಿಕೊಳ್ಳಲಾಗಿದೆ.
ಮಹಾಕುಂಭ ಮೇಳವು ಸರ್ಕಾರದ ನಿರೀಕ್ಷೆಗೆ ಮೀರಿ ದೇಶ-ವಿದೇಶಿ ಭಕ್ತರನ್ನು ಆಗಮಿಸಿದ್ದಾರೆ. ಇದು ಸ್ಥಳೀಯ ಆರ್ಥಿಕತೆಗೂ ಮತ್ತು ರಾಜ್ಯದ ಒಟ್ಟಾರೆ ಆರ್ಥಿಕತೆಗೆ ಮಹತ್ವಪೂರ್ಣ ಕೊಡುಗೆಯನ್ನು ನೀಡಿದೆ ಎಂದು ಹೇಳಬಹುದು.
1. 3 ಲಕ್ಷ ಕೋಟಿ ರೂ. ಆದಾಯ
ಕುಂಭಮೇಳದಿಂದ ಉತ್ತರಪ್ರದೇಶದ ಆರ್ಥಿಕತೆ 3 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಾಗಿದೆ. ಅಲ್ಲದೇ ಶೀಘ್ರದಲ್ಲೇ ರಾಜ್ಯಕ್ಕೆ ಈ ಆದಾಯದ ಕೊಡುಗೆ ಸಿಗಲಿದೆ ಎಂದು, ಯುಪಿ ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ. ವಿವಿಧ ವಲಯಗಳ ಉದ್ಯಮಿಗಳು ಈ ಭವ್ಯ ಕುಂಭಮೇಳಕ್ಕೆ ಆಗಮಿಸಿದ್ದು, 2 ಲಕ್ಷ ಕೋಟಿ ರೂ.ಗಳ ವ್ಯಾಪಾರ ಅವಕಾಶವನ್ನು ಗುರಿಯಾಗಿಸಿಕೊಂಡಿದ್ದಾರೆ. ಟೆಕ್ ಸ್ಟಾರ್ಟ್-ಅಪ್‌ಗಳು ಮತ್ತು ಫಿನ್‌ಟೆಕ್ ವಲಯಗಳ ಪ್ರಮುಖ ಹೂಡಿಕೆದಾರರು, ತಮ್ಮ ಮಾರುಕಟ್ಟೆ ಸ್ಥಿತಿಯನ್ನು ವಿಸ್ತರಿಸಲು ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದಾರೆ.
ಉತ್ತರಪ್ರದೇಶದ ಗತ್ತು ಈಗ ಇಡೀ ಜಗತ್ತಿಗೆ ಗೊತ್ತು ಎನ್ನುವಂತಾಗಿದೆ. ಭಾರತೀಯರಷ್ಟೇ ಅಲ್ಲದೇ ವಿದೇಶಿಗರೂ ಈ ಕುಂಭಮೇಳಕ್ಕೆ ಮಾರುಹೋಗಿದ್ದರು. ಇಲ್ಲಿನ ಆಚರಣೆಯನ್ನು ಭಕ್ತಿಪೂರ್ವಕವಾಗಿ ಸ್ವೀಕರಿಸಿದರು. ಇದೆಲ್ಲದರಿಂದ ಉತ್ತರ ಪ್ರದೇಶದ ಆರ್ಥಿಕತೆಯು ಬಲಿಷ್ಠವಾಗಿದೆ.


Click it and Unblock the Notifications