ಭಾರತದ ಷೇರು ಮಾರುಕಟ್ಟೆಗಳಾದ ಸೆನ್ಸೆಕ್ಸ್, ನಿಫ್ಟಿ ಶನಿವಾರ (ನವೆಂಬರ್ 14, 2020) ಹೊಸದಾಗಿ ಎತ್ತರಕ್ಕೆ ಏರಿ, ದಾಖಲೆ ಬರೆದಿದೆ. ನಿಫ್ಟಿ 50 ಸೂಚ್ಯಂಕವು 12,800 ಪಾಯಿಂಟ್ ಗಿಂತ ಮೇಲೇರಿತು. ಬಿಎಸ್ ಇ ಸೆನ್ಸೆಕ್ಸ್ ಸಂಜೆ 6.15ಕ್ಕೆ 1 ಪರ್ಸೆಂಟ್ ಏರಿಕೆ ಕಂಡು, 43,815.45 ವ್ಯವಹರಿಸಿತು. ಎನ್ ಎಸ್ ಇ ನಿಫ್ಟಿ 50 ಸೂಚ್ಯಂಕವು 12,823.85 ಪಾಯಿಂಟ್ ಗೆ ಹೆಚ್ಚಳವಾಯಿತು.
ಆರಂಭದ ಗಳಿಕೆಯನ್ನು ಸೂಚ್ಯಂಕವು ದಿನದ ಅಂತ್ಯದ ರಾತ್ರಿ 7.15ಕ್ಕೆ ಕಳೆದುಕೊಂಡಿತು. ನಿಫ್ಟಿ 0.63% ಹೆಚ್ಚಳವಾಗಿ, 12,770.60 ಪಾಯಿಂಟ್ ನಲ್ಲಿ ಮುಹೂರ್ತ್ ಟ್ರೇಡಿಂಗ್ ಮುಗಿದಿದೆ. ಇನ್ನು ಸೆನ್ಸೆಕ್ಸ್ 0.65% ಏರಿಕೆ ಕಂಡು, 43,637.98 ಪಾಯಿಂಟ್ ನೊಂದಿಗೆ ವಹಿವಾಟು ಮುಗಿಸಿದೆ.
ಮುಹೂರ್ತ್ ಟ್ರೇಡಿಂಗ್ 2020ರಲ್ಲಿ ನಿಫ್ಟಿ 50ರಲ್ಲಿ ಟಾಪ್ ಗೇಯ್ನರ್ಸ್ ಅಂದರೆ, ಬಿಪಿಸಿಎಲ್, ಟಾಟಾ ಮೋಟಾರ್ಸ್, ಐಒಸಿ, ಬಜಾಜ್ ಫೈನಾನ್ಸ್ ಸರ್ವೀಸ್, ಟಾಟಾ ಸ್ಟೀಲ್. ಇನ್ನು ಸೆನ್ಸೆಕ್ಸ್ ಟಾಪ್ ಗೇಯ್ನರ್ಸ್ ಅಂದರೆ, ಬಜಾಜ್ ಫೈನಾನ್ಸ್ ಸರ್ವೀಸಸ್, ಟಾಟಾ ಸ್ಟೀಲ್, ಭಾರ್ತಿ ಏರ್ ಟೆಲ್, ಇಂಡಸ್ ಇಂಡ್ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್.

ಹೂಡಿಕೆದಾರರು ಹೊಸ ಸಂವತ್ 2077 ಸಕಾರಾತ್ಮಕವಾಗಿ ಆರಂಭವಾಗಿದೆ. ಕೊರೊನಾ ಕೊನೆಯಾಗಬಹುದು ಹಾಗೂ ಆರ್ಥಿಕತೆ ಮತ್ತೆ ಹಳಿಗೆ ಮರಳಬಹುದು ಎಂಬ ನಿರೀಕ್ಷೆಯಲ್ಲಿ ಮಾರ್ಕೆಟ್ ಮೇಲೇರಿದೆ.
ದೀಪಾವಳಿ ಸಂದರ್ಭದಲ್ಲಿ ಎನ್ ಎಸ್ ಇ ಹಾಗೂ ಬಿಎಸ್ ಇಯಲ್ಲಿ ವಿಶೇಷ ಟ್ರೇಡಿಂಗ್ ಮಾಡಲಾಗುತ್ತದೆ. ಅದನ್ನು ಮುಹೂರ್ತ್ ಟ್ರೇಡಿಂಗ್ ಸೆಷನ್ ಎನ್ನಲಾಗುತ್ತದೆ. ಒಂದು ಗಂಟೆಗಳ ಕಾಲ ಈ ಟ್ರೇಡಿಂಗ್ ನಡೆಯುತ್ತದೆ. ಹಿಂದೂ ಲೆಕ್ಕಾಚಾರದ ಪ್ರಕಾರ ವರ್ಷದ ಆರಂಭ ಆಗುತ್ತದೆ. ಈ ಸಂದರ್ಭದಲ್ಲಿ ಸಣ್ಣ ಪ್ರಮಾಣದಲ್ಲಿಯಾದರೂ ಷೇರು ಖರೀದಿಸಬೇಕು ಎಂಬುದು ನಂಬಿಕೆ.
ಈ ವರ್ಷ ನವೆಂಬರ್ ಹದಿನಾಲ್ಕನೇ ತಾರೀಕಿನ ಸಂಜೆ 6.15ರಿಂದ ರಾತ್ರಿ 7.15ರ ತನಕ ಎನ್ ಎಸ್ ಇ, ಬಿಎಸ್ ಇ ಹಾಗೂ ಎಂಸಿಎಕ್ಸ್ ನಲ್ಲಿ ಮುಹೂರ್ತ್ ಟ್ರೇಡಿಂಗ್ ನಡೆಯಿತು.


Click it and Unblock the Notifications