ಮೆಜೆಸ್ಕೋ ಕಂಪೆನಿ ಷೇರು ಮಂಗಳವಾರ (ಡಿಸೆಂಬರ್ 15, 2020) ಬೆಳಗ್ಗೆ ಸೆಷನ್ ನಲ್ಲಿ 5% ಏರಿಕೆ ಕಂಡು, ಸಾರ್ವಕಾಲಿಕ ಗರಿಷ್ಠ ಮಟ್ಟವಾದ 1019 ರುಪಾಯಿ ಮುಟ್ಟಿತು. ಕಂಪೆನಿಯ ಆಡಳಿತ ಮಂಡಳಿಯು ಷೇರುದಾರರಿಗೆ ಪ್ರತಿ ಷೇರಿಗೆ 974 ರುಪಾಯಿ ಇಂಟೆರಿಮ್ ಡಿವಿಡೆಂಡ್ (ಮಧ್ಯಂತರ ಲಾಭಾಂಶ) ವಿತರಿಸಲು ಅನುಮತಿ ನೀಡಿದೆ ಎಂಬುದನ್ನು ಸ್ಟಾಕ್ ಎಕ್ಸ್ ಚೇಂಜ್ ಗೆ ಮಾಹಿತಿ ನೀಡಿದ ಮೇಲೆ ಷೇರಿನ ಬೆಲೆಯಲ್ಲಿ ಏರಿಕೆ ಆಗಿದೆ.
ಡಿಸೆಂಬರ್ 15, 2020ರಂದು ನಡೆದ ಕಂಪೆನಿಯ ಆಡಳಿತ ಮಂಡಳಿ ನಿರ್ದೇಶಕರ ಸಭೆಯಲ್ಲಿ, 2020- 21ನೇ ಆರ್ಥಿಕ ವರ್ಷದಲ್ಲಿ ಮಧ್ಯಂತರ ಲಾಭಾಂಶವಾಗಿ 5 ರುಪಾಯಿ ಮುಖಬೆಲೆಯ ಷೇರಿಗೆ 19,480%, ಅಂದರೆ ಪ್ರತಿ ಷೇರಿಗೆ 974 ರುಪಾಯಿ ನೀಡಲು ನಿರ್ಧರಿಸಲಾಗಿದೆ ಎಂದು ಕಂಪೆನಿಯು ಬಿಎಸ್ ಎ ಫೈಲಿಂಗ್ ನಲ್ಲಿ ತಿಳಿಸಿದೆ.
ಮಧ್ಯಂತರ ಲಾಭಾಂಶದ ಒಟ್ಟು ಮೊತ್ತ 2,788.4 ಕೋಟಿ ರುಪಾಯಿ ಆಗುತ್ತದೆ. ಕಂಪೆನಿಯ ಒಟ್ಟು ಷೇರುಗಳ ಸಂಖ್ಯೆ 2,85,77,939 ಇದೆ. ಡಿವಿಡೆಂಡ್ ರೆಕಾರ್ಡ್ ದಿನಾಂಕ ಡಿಸೆಂಬರ್ 25. ಎಕ್ಸ್- ಡಿವಿಡೆಂಡ್ ದಿನಾಂಕ ಡಿಸೆಂಬರ್ 23. ಡಿಸೆಂಬರ್ 30ನೇ ತಾರೀಕಿನಂದು ಲಾಭಾಂಶ ಪಾವತಿಸುವ ಸಾಧ್ಯತೆ ಇದೆ.

ಮಂಗಳವಾರ ಮಧ್ಯಾಹ್ನ 1.03ರ ಹೊತ್ತಿಗೆ ಕಂಪೆನಿಯು ಎನ್ ಎಸ್ ಇಯಲ್ಲಿ 989.95 ರುಪಾಯಿಯಲ್ಲಿ ವಹಿವಾಟು ನಡೆಸುತ್ತಿತ್ತು.


Click it and Unblock the Notifications