ಕಾಫೀ ಡೇ ಸಿಇಒ ಆಗಿ ಸಿದ್ಧಾರ್ಥ ಹೆಗ್ಡೆ ಹೆಂಡತಿ ಮಾಳವಿಕಾ ನೇಮಕ

ಕಾಫೀ ಡೇ ಎಂಟರ್ ಪ್ರೈಸಸ್ ಲಿಮಿಟೆಡ್ ಸಿಇಒ ಆಗಿ ವಿ.ಜಿ. ಸಿದ್ಧಾರ್ಥ ಹೆಗ್ಡೆ ಹೆಂಡತಿ ಮಾಳವಿಕಾ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನೇಮಕಕ್ಕೆ ಕಂಪೆನಿಯ ಆಡಳಿತ ಮಂಡಳಿ ಸೋಮವಾರ ಒಪ್ಪಿಗೆ ನೀಡಿದೆ ಎಂದು ಸ್ಟಾಕ್ ಎಕ್ಸ್ ಚೇಂಜ್ ಫೈಲಿಂಗ್ ನಲ್ಲಿ ತಿಳಿಸಲಾಗಿದೆ.

2019ರ ಜುಲೈನಲ್ಲಿ ಎಸ್.ವಿ. ರಂಗನಾಥ್ ಅವರನ್ನು ಆಡಳಿತ ಮಂಡಳಿಯ ಸ್ವತಂತ್ರ ಸದಸ್ಯರಾಗಿ ಹೆಸರಿಸಲಾಗಿತ್ತು. ನದಿಗೆ ಹಾರಿ ಸಿದ್ಧಾರ್ಥ ಹೆಗ್ಡೆ ಸಾವು ಸಂಭವಿಸಿದ ನಂತರ ಈ ಆಯ್ಕೆ ಮಾಡಲಾಗಿತ್ತು. ಬೆಂಗಳೂರು ಮೂಲದ ಕಾಫೀ ಡೇ ಎಂಟರ್ ಪ್ರೈಸಸ್ ನಿಂದ ಕೆಫೆ ಕಾಫೀ ಡೇ ಬ್ರ್ಯಾಂಡ್ ಅಡಿಯಲ್ಲಿ ನೂರಾರು ಮಳಿಗೆಗಳನ್ನು ದೇಶದಾದ್ಯಂತ ನಡೆಸುತ್ತದೆ.

ಕಾಫೀ ಡೇ ಸಿಇಒ ಆಗಿ ಸಿದ್ಧಾರ್ಥ ಹೆಗ್ಡೆ ಹೆಂಡತಿ ಮಾಳವಿಕಾ ನೇಮಕ

ಸಿ.ಎಚ್. ವಸುಂಧರಾ ದೇವಿ, ಗಿರಿ ದೇವನೂರು, ಮೋಹನ್ ರಾಘವೇಂದ್ರ ಕೊಂಡಿ ಅವರನ್ನು ಸ್ವತಂತ್ರ ನಿರ್ದೇಶಕರಾಗಿ ನೇಮಕ ಮಾಡಿದ್ದು, ಡಿಸೆಂಬರ್ 31, 2020ರಿಂದ ಡಿಸೆಂಬರ್ 30, 2025ರ ತನಕ ಅವರ ಅವಧಿ ಇರುತ್ತದೆ. ಕಂಪೆನಿಯ ಷೇರುದಾರರ ಒಪ್ಪಿಗೆಯನ್ನು ಪಡೆದ ನಂತರ ಇವರೆಲ್ಲರ ಆಯ್ಕೆ ಅಂತಿಮವಾಗುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+