ಸ್ಯಾನಿಟೈಸರ್ ಬಳಸಿ ಮದ್ಯ ತಯಾರಿಸಿದ್ದ ಭೂಪತಿ ಗಂಡು ಈಗ ಕಂಬಿ ಹಿಂದೆ

ಕೊರೊನಾ ಲಾಕ್ ಡೌನ್ ದೇಶದಾದ್ಯಂತ ಘೋಷಣೆ ಮಾಡಿದ ಮೇಲೆ ಮದ್ಯ ಮಾರಾಟ ಸಂಪೂರ್ಣ ನಿಂತುಹೋಗಿದೆ. ಒಂದಕ್ಕೆ ಎರಡು ಪಟ್ಟು, ಹತ್ತು ಪಟ್ಟು ಹಣ ಕೊಟ್ಟು ಖರೀದಿ ಮಾಡುತ್ತಿರುವ ಪ್ರಕರಣಗಳು ಅಲ್ಲಿಲ್ಲಿ ಕಂಡುಬರುತ್ತಿವೆ. ಆದರೆ ಮಧ್ಯಪ್ರದೇಶದಲ್ಲಿ ತೀರ ಅಪರೂಪದ ಪ್ರಕರಣವೊಂದು ಕಂಡುಬಂದಿದೆ.

ಸ್ಯಾನಿಟೈಜರ್ ದ್ರವವನ್ನೇ ಬಳಸಿಕೊಂಡು ಮದ್ಯ ತಯಾರಿಸಿದ್ದ ವ್ಯಕ್ತಿಯನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.

ಹ್ಯಾಂಡ್ ಸ್ಯಾನಿಟೈಜರ್ ನ ಮುಖ್ಯವಸ್ತು ಆಲ್ಕೋಹಾಲ್

ಹ್ಯಾಂಡ್ ಸ್ಯಾನಿಟೈಜರ್ ನ ಮುಖ್ಯವಸ್ತು ಆಲ್ಕೋಹಾಲ್

ಅಂದಹಾಗೆ, ಹ್ಯಾಂಡ್ ಸ್ಯಾನಿಟೈಜರ್ ನಲ್ಲಿ ಇರುವ ಅತಿ ಮುಖ್ಯ ವಸ್ತುವೇ ಆಲ್ಕೋಹಾಲ್. ಆರೋಪಿಯ ಹೆಸರು ಇಂದಲ್ ಸಿಂಗ್ ರಜಪೂತ್. ಈತ ಸುಲ್ತಾನ್ ಪುರ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಬೋರಿಯಾ ಜಾಗಿರ್ ಹಳ್ಳಿಯವನು ಎಂದು ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ.

ಮದ್ಯ ಮಾರಾಟ ಮಳಿಗೆ ಬಂದ್

ಮದ್ಯ ಮಾರಾಟ ಮಳಿಗೆ ಬಂದ್

ಈಗ ಲಾಕ್ ಡೌನ್ ಇರುವುದರಿಂದ ಮಧ್ಯಪ್ರದೇಶದಲ್ಲೂ ಮದ್ಯ ಮಾರಾಟ ಮಳಿಗೆಗಳು ಮುಚ್ಚಿವೆ. ಆದರೆ ಅಲ್ಲಿನ ಸರ್ಕಾರವು ಹಲವು ಡಿಸ್ಟಿಲರಿಗಳಿಗೆ ಸ್ಯಾನಿಟೈಜರ್ ತಯಾರಿಸುವುದಕ್ಕೆ ಅನುಮತಿ ನೀಡಿದೆ. ಏಕೆಂದರೆ, ಕೊರೊನಾ ಸಮಯದಲ್ಲಿ ಸ್ಯಾನಿಟೈಜರ್ ಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ.

ರಜಪೂತ್ ತಯಾರಿಸಿದ ಮದ್ಯದಲ್ಲಿ 72ರಷ್ಟು ಆಲ್ಕೋಹಾಲ್

ರಜಪೂತ್ ತಯಾರಿಸಿದ ಮದ್ಯದಲ್ಲಿ 72ರಷ್ಟು ಆಲ್ಕೋಹಾಲ್

ಈಗ ಸ್ಯಾನಿಟೈಜರ್ ಬಳಸಿಕೊಂಡು ರಜಪೂತ್ ತಯಾರಿಸಿರುವ ಮದ್ಯದಲ್ಲಿ ಶೇಕಡಾ 72ರಷ್ಟು ಆಲ್ಕೋಹಾಲ್ ಇದೆ ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ. "ಇದು ತೀರಾ ಅಪರೂಪದ ಪ್ರಕರಣ" ಎಂದು ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಮೋನಿಕಾ ಶುಕ್ಲಾ ಅವರು ಹೇಳಿದ್ದಾರೆ. ರಜಪೂತ್ ವಿರುದ್ಧ ಅಬಕಾರಿ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+