For Quick Alerts
ALLOW NOTIFICATIONS  
For Daily Alerts

ಕಳೆದ ವಾರದ ಟಾಪ್ 10 ಕಂಪನಿ: ರಿಲಯನ್ಸ್, ಇನ್ಫೋಸಿಸ್ ಟಾಪ್

|

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಒಟ್ಟಾರೆ ಮೌಲ್ಯಗಳ ಬೆಲೆ 1.56 ಟ್ರಿಲಿಯನ್ ದಾಟಿದೆ. ಕಳೆದ ಎರಡು ವಾರದಲ್ಲಿ ಹಿಂದೂಸ್ತಾನ್ ಯೂನಿಲಿವರ್ ಲಿ, ರಿಲಯನ್ಸ್ ಇಂಡಸ್ಟ್ರೀಸ್ ಅತಿ ಹೆಚ್ಚು ಮೌಲ್ಯವೃದ್ಧಿ ಕಂಡಿದ್ದವು, ಕಳೆದ ವಾರದ ಈ ಎರಡು ಕಂಪನಿಗಳು ನಷ್ಟದತ್ತ ಮುಖ ಮಾಡಿದ್ದವು, ರಿಲಯನ್ಸ್ ಹಾಗೂ ಇನ್ಫೋಸಿಸ್ ಅತಿ ಹೆಚ್ಚು ಗಳಿಕೆ ಕಂಡಿವೆ.

ಒಟ್ಟು 10 ಕಂಪನಿಗಳು 1,56,317.17 ಕೋಟಿ ರು ಮೌಲ್ಯ ಏರಿಸಿಕೊಂಡಿವೆ. ಬಿಎಸ್ಇಯಲ್ಲಿ 30 ಷೇರುಗಳು ಸೆನ್ಸೆಕ್ಸ್ 1,032.58 ಅಂಕ ಅಥವಾ ಶೇ 1.74 ರಷ್ಟು ಏರಿಕೆ ಕಂಡಿತ್ತು. ಸೆನ್ಸೆಕ್ಸ್ 60,000 ಗುರಿಯನ್ನು ದಾಟಿತ್ತು.

ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಹೆಚ್ಚು ಕಂಪನಿ ಮೌಲ್ಯ ಹೆಚ್ಚಿಸಿಕೊಂಡಿದೆ. ರಜೆಗಳ ನಡುವೆ ಷೇರುಪೇಟೆಯಲ್ಲಿ ಹೆಚ್ಚು ವಹಿವಾಟು ಕಂಡು ಬಂದಿವೆ..

ರಿಲಯನ್ಸ್ ಸಂಸ್ಥೆ ಮೌಲ್ಯ

ರಿಲಯನ್ಸ್ ಸಂಸ್ಥೆ ಮೌಲ್ಯ

ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ 58,671.55 ಕೋಟಿ ರು ಹಿಗ್ಗಿ 15,74,052.03 ಕೋಟಿ ರು ಮೌಲ್ಯಕ್ಕೇರಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಳೆದ ಗುರುವಾರದಂದು ಸಂಸ್ಥೆ ಮೌಲ್ಯವನ್ನು 16 ಲಕ್ಷ ಕೋಟಿ ರುಗೆ ಹೆಚ್ಚಿಸಿಕೊಂಡಿತು. ಕಳೆದ ಶುಕ್ರವಾರ (ಸೆಪ್ಟೆಂಬರ್ 24) ದಂದು ಶೇ 0.29ರಷ್ಟು 7.20ರು ಇಳಿಕೆಯಾಗಿ 2,482.70 ಅಂಶ ಹೊಂದಿತ್ತು.

ಇನ್ಫೋಸಿಸ್ ಮೌಲ್ಯ ಏರಿಕೆ

ಇನ್ಫೋಸಿಸ್ ಮೌಲ್ಯ ಏರಿಕೆ

ಇನ್ಫೋಸಿಸ್ 30,605.08 ಕೋಟಿ ರು ಸೇರಿಸಿಕೊಂಡು 7,48,032.17 ಮೌಲ್ಯ ಹೊಂದಿದೆ. ಬಜಾಜ್ ಫೈನಾನ್ಸ್ 22,173.04 ಕೋಟಿ ರು ಹೆಚ್ಚಿಸಿಕೊಂಡು 4,70,465.58 ಕೋಟಿ ರುಗೆ ಕುಸಿದಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) 15,110.63 ಕೋಟಿ ರು ಹೆಚ್ಚಿಸಿಕೊಂಡು 14,32,013.76 ಕೋಟಿ ರು ಮೌಲ್ಯಕ್ಕೇರಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್

ಎಚ್‌ಡಿಎಫ್‌ಸಿ ಬ್ಯಾಂಕ್

ಎಚ್‌ಡಿಎಫ್‌ಸಿ ಬ್ಯಾಂಕ್ 10,142 ಕೋಟಿ ರು ಮೌಲ್ಯ ಹೆಚ್ಚಿಸಿಕೊಂಡು 8,86,739.86 ಕೋಟಿ ರು ತಲುಪಿದೆ. ಭಾರ್ತಿ ಏರ್ ಟೆಲ್ 6,068.69 ಕೋಟಿ ರು ಸೇರಿಸಿಕೊಂಡು 4,05,970.66 ಕೋಟಿ ರು ತಲುಪಿದೆ. ಹಿಂದೂಸ್ತಾನ್ ಯೂನಿಲಿವರ್ ಮೌಲ್ಯ 4,863.65 ಕೋಟಿ ರು ಕುಸಿದು 6,44,199.18 ರು ಆಗಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್ ಮೌಲ್ಯ 4,254.75 ಕೋಟಿ ರು ಏರಿಕೆ ಕಂಡು 4,01,978.75 ಕೋಟಿ ರು ಮೌಲ್ಯಕ್ಕೇರಿದೆ. ಎಚ್‌ಡಿಎಫ್‌ಸಿ 2,523.56 ಕೋಟಿ ರು ಸೇರಿಸಿಕೊಂಡು 5,13,073.85 ಕೋಟಿ ರು ತಲುಪಿದೆ. ಐಸಿಐಸಿಸಿ ಬ್ಯಾಂಕ್ ಮೌಲ್ಯ 1,904.22 ಕೋಟಿ ರು ಏರಿಕೆ ಕಂಡು 5,01,080.90 ಕೋಟಿ ರು ಆಗಿದೆ.

ಒಟ್ಟಾರೆ, ಟಾಪ್ 10 ಕಂಪನಿಗಳು

ಒಟ್ಟಾರೆ, ಟಾಪ್ 10 ಕಂಪನಿಗಳು

ಒಟ್ಟಾರೆ, ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿಮೆಟೆಡ್, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್, ಭಾರ್ತ್ ಏರ್ ಟೆಲ್ ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕ್.

English summary

Market cap of 10 most valued companies jumps over Rs 1.56 trillion

The top 10 valued firms added a total Rs 1,56,317.17 crore to their market valuation last week, helped by across the board rally which catapulted the benchmark index Sensex to the record 60,000 mark for the first time.
Story first published: Sunday, September 26, 2021, 14:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X