ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಒಟ್ಟಾರೆ ಮೌಲ್ಯಗಳ ಬೆಲೆ 1.80 ಲಕ್ಷ ಕೋಟಿ ರು ದಾಟಿದೆ. ಕಳೆದ ವಾರದಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಹಾಗೂ ಇನ್ಫೋಸಿಸ್ ಮಾತ್ರ ಹಿನ್ನಡೆ ಅನುಭವಿಸಿವೆ.
ಒಟ್ಟು 10 ಕಂಪನಿಗಳ ವಹಿವಾಟು ಸೇರಿಸಿ 1,80,534.34 ಕೋಟಿ ರು ಮೌಲ್ಯ ದಾಖಲಾಗಿದೆ. ಬಿಎಸ್ಇಯಲ್ಲಿ 30 ಷೇರುಗಳು ಸೆನ್ಸೆಕ್ಸ್ 1,282.89 ಅಂಕ ಅಥವಾ ಶೇ 2.13 ರಷ್ಟು ಏರಿಕೆ ಕಂಡಿತ್ತು. ಆದರೆ, ಶುಕ್ರವಾರದ ನಾಲ್ಕು ಸೆಷನ್ ನಲ್ಲೂ ನಷ್ಟ ಅನುಭವಿಸಿತ್ತು.
ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಹೆಚ್ಚು ಕಂಪನಿ ಮೌಲ್ಯ ಕಳೆದುಕೊಂಡಿವೆ. ಟಾಪ್ 10ರಲ್ಲಿ 8 ಕಂಪನಿಗ ಮೌಲ್ಯ ಬದಲಾಗಿದೆ. ರಜೆಗಳ ನಡುವೆ ಷೇರುಪೇಟೆಯಲ್ಲಿ ಹೆಚ್ಚು ವಹಿವಾಟು ಕಂಡು ಬಂದಿವೆ..
ಹೆಚ್ಚು ಮೌಲ್ಯ ಕಳೆದುಕೊಂಡ ಕಂಪನಿಗಳು
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) 52,526.53 ಕೋಟಿ ರು ಇಳಿಕೆ ಕಂಡು13,79,487.23 ಕೋಟಿ ರು ಮೌಲ್ಯಕ್ಕೆ ಕುಸಿತ ಕಂಡಿದೆ. ಇನ್ಫೋಸಿಸ್ 41,782.4 ಕೋಟಿ ರು ಕಳೆದುಕೊಂಡು 7,06,249.77 ಮೌಲ್ಯ ಹೊಂದಿದೆ.
ಎಚ್‌ಡಿಎಫ್‌ಸಿ 22,643.11 ಕೋಟಿ ರು ಕಳೆದುಕೊಂಡು 4,79,985.13 ಕೋಟಿ ರು ತಲುಪಿದೆ.
ಐಸಿಐಸಿಸಿ ಬ್ಯಾಂಕ್ ಮೌಲ್ಯ 21,095.77 ಕೋಟಿ ರು ಇಳಿಕೆ ಕಂಡು 4,79,985.13 ಕೋಟಿ ರು ಆಗಿದೆ.
ಬಜಾಜ್ ಫೈನಾನ್ಸ್
ಬಜಾಜ್ ಫೈನಾನ್ಸ್ 16,438.9 ಕೋಟಿ ರು ತಗ್ಗಿಸಿಕೊಂಡು 4,54,026.68 ಕೋಟಿ ರುಗೆ ಕುಸಿದಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ 10,410.41 ಕೋಟಿ ರು ಮೌಲ್ಯ ಇಳಿಸಿಕೊಂಡು 8,76,329.45ಕೋಟಿ ರು ತಲುಪಿದೆ.
ಹಿಂದೂಸ್ತಾನ್ ಯೂನಿಲಿವರ್ ಮೌಲ್ಯ 9,222.14ಕೋಟಿ ರು ಕುಸಿದು 6,34,977.04 ರು ಆಗಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್ ಮೌಲ್ಯ 6,415.08 ಕೋಟಿ ರು ಇಳಿಕೆ ಕಂಡು 3,95,563.67 ಕೋಟಿ ರು ಮೌಲ್ಯಕ್ಕೇರಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ
ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ 25,294.38ಕೋಟಿ ರು ಹಿಗ್ಗಿ 15,99,346.41 ಕೋಟಿ ರು ಮೌಲ್ಯಕ್ಕೇರಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 9,773.33 ಕೋಟಿ ರು ಹೆಚ್ಚಿಸಿಕೊಂಡು 4,03,169.33 ಕೋಟಿ ರು ಮೌಲ್ಯಕ್ಕೇರಿದೆ.
ರಿಲಯನ್ಸ್ ಇಂಡಸ್ಟ್ರೀಸ್
ಒಟ್ಟಾರೆ, ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕೋಟಕ್ ಮಹೀಂದ್ರಾ


Click it and Unblock the Notifications