ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳಲ್ಲಿ ಏಳರ ಮಾರುಕಟ್ಟೆ ಮೌಲ್ಯ ಕಳೆದ ವಾರ 75,845.46 ಕೋಟಿ ರುಪಾಯಿ ಹೆಚ್ಚಳವಾಗಿದೆ. ಆ ಪೈಕಿ ಎಚ್ ಡಿಎಫ್ ಸಿ ಹಾಗೂ ಎಚ್ ಡಿಎಫ್ ಸಿ ಬ್ಯಾಂಕ್ ಪ್ರಮುಖವಾಗಿ ಗಳಿಕೆ ಕಂಡಿವೆ. ಇವೆರಡರ ಹೊರತಾಗಿ ಟಿಸಿಎಸ್, ಇನ್ಫೋಸಿಸ್, ಕೊಟಕ್ ಮಹೀಂದ್ರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಬಜಾಜ್ ಫೈನಾನ್ಸ್ ಮಾರುಕಟ್ಟೆ ಬಂಡವಾಳ ಕೂಡ ಏರಿಕೆ ಆಗಿವೆ.
ಇನ್ನು ರಿಲಯನ್ಸ್ ಇಂಡಸ್ಟ್ರೀಸ್, ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ ಮತ್ತು ಭಾರ್ತಿ ಏರ್ ಟೆಲ್ ಕಂಪೆನಿಗಳ ಮಾರುಕಟ್ಟೆ ಮೌಲ್ಯ ಕೊಚ್ಚಿಹೋಗಿವೆ. ಯಾವ ಕಂಪೆನಿಗಳ ಮಾರುಕಟ್ಟೆ ಮೌಲ್ಯ ಎಷ್ಟು ಹೆಚ್ಚಾಗಿದೆ ಎಂಬ ವಿವರ ಹೀಗಿದೆ.
* ಎಚ್ ಡಿಎಫ್ ಸಿ 20,857.99 ಕೋಟಿ ರುಪಾಯಿ
* ಎಚ್ ಡಿಎಫ್ ಸಿ ಬ್ಯಾಂಕ್ 15,393.9 ಕೋಟಿ ರುಪಾಯಿ
* ಇನ್ಫೋಸಿಸ್ 10,251.38 ಕೋಟಿ ರುಪಾಯಿ
* ಐಸಿಐಸಿಐ ಬ್ಯಾಂಕ್ 9609.3 ಕೋಟಿ ರುಪಾಯಿ
* ಟಿಸಿಎಸ್ 7410.96 ಕೋಟಿ ರುಪಾಯಿ
* ಕೊಟಕ್ ಮಹೀಂದ್ರಾ ಬ್ಯಾಂಕ್ 6500.94 ಕೋಟಿ ರುಪಾಯಿ
* ಬಜಾಜ್ ಫೈನಾನ್ಸ್ 5820.99 ಕೋಟಿ ರುಪಾಯಿ

ಮಾರುಕಟ್ಟೆ ಬಂಡವಾಳ ಮೌಲ್ಯ ಇಳಿಕೆ ಕಂಡ ಕಂಪೆನಿಗಳು
* ರಿಲಯನ್ಸ್ 4279.13 ಕೋಟಿ ರುಪಾಯಿ
* ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ 2,948.69 ಕೋಟಿ ರುಪಾಯಿ
* ಭಾರ್ತಿ ಏರ್ ಟೆಲ್ 1063.83 ಕೋಟಿ ರುಪಾಯಿ
ಕಳೆದ ವಾರ ಬಿಎಸ್ ಇ ಸೆನ್ಸೆಕ್ಸ್ 895.44 ಪಾಯಿಂಟ್ ಏರಿಕೆ ಕಂಡಿತು.


Click it and Unblock the Notifications