For Quick Alerts
ALLOW NOTIFICATIONS  
For Daily Alerts

ಮೊಟ್ಟ ಮೊದಲ ಬಾರಿಗೆ 16,000 ಗಡಿ ದಾಟಿದ ನಿಫ್ಟಿ: ಸೆನ್ಸೆಕ್ಸ್ 872 ಪಾಯಿಂಟ್ಸ್ ಜಿಗಿತ

|

ಭಾರತದ ಷೇರುಪೇಟೆ ಮಂಗಳವಾರ ದಾಖಲೆಯ ಮಟ್ಟದಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 872 ಪಾಯಿಂಟ್ಸ್ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಮೊಟ್ಟ ಮೊದಲ ಬಾರಿಗೆ 16,000 ಗಡಿ ದಾಟಿದೆ.

 

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 1.65ರಷ್ಟು ಅಥವಾ 872.73 ಪಾಯಿಂಟ್ಸ್ ಏರಿಕೆಗೊಂಡು 53823.36 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ಶೇಕಡಾ 1.55ರಷ್ಟು ಅಥವಾ 245.6 ಪಾಯಿಂಟ್ಸ್‌ ಹೆಚ್ಚಳಗೊಂಡು 16130.75 ಪಾಯಿಂಟ್ಸ್‌ ಮುಟ್ಟಿದೆ.

 

ನಿಫ್ಟಿ 50 ಫೆಬ್ರವರಿ 5 ರಂದು ಮೊದಲ ಬಾರಿಗೆ 15000 ಗಡಿ ಅನ್ನು ಮುಟ್ಟಿತು ಮತ್ತು ನಂತರ ಜೂನ್ ನಿಂದ 16000 ಅನ್ನು ಮುಟ್ಟಲು ಹಲವು ಬಾರಿ ಪ್ರಯತ್ನಿಸಿತು, ಆದರೆ ಪ್ರತಿ ಬಾರಿ ವಿಫಲವಾಗಿದೆ. ಸೂಚ್ಯಂಕವು 15900-16000 ಬಳಿ ಪ್ರಬಲ ಪ್ರತಿರೋಧವನ್ನು ಎದುರಿಸಿತು, ಆದರೆ ಇದು ಮಂಗಳವಾರದಂದು( ಆಗಸ್ಟ್‌ 03) ತನ್ನ ಮಟ್ಟವನ್ನು ಮೀರಿಸುವಲ್ಲಿ ಯಶಸ್ವಿಯಾಯಿತು.

ಮೊಟ್ಟ ಮೊದಲ ಬಾರಿಗೆ 16,000 ಗಡಿ ದಾಟಿದ ನಿಫ್ಟಿ

ನಿಫ್ಟಿಯ ಈ 1000 ಪಾಯಿಂಟ್ ಗಳಿಕೆಯ ಸಮಯದಲ್ಲಿ, ನಿಫ್ಟಿ500 ನಲ್ಲಿ 29 ಷೇರುಗಳು 100 ಪ್ರತಿಶತಕ್ಕಿಂತ ಹೆಚ್ಚಾಗಿದೆ. ಇವುಗಳಲ್ಲಿ ಜೆಎಸ್‌ಡಬ್ಲ್ಯೂ ಎನರ್ಜಿ, ಶ್ರೀ ರೇಣುಕಾ, ಪ್ರಜ್ ಇಂಡಸ್ಟ್ರೀಸ್, ಲಕ್ಸ್ ಇಂಡಸ್ಟ್ರೀಸ್, ಅದಾನಿ ಟೋಟಲ್ ಗ್ಯಾಸ್, ಸಿಡಿಎಸ್‌ಎಲ್, ಕೆಪಿಐಟಿ ಟೆಕ್ನಾಲಜೀಸ್ ಮತ್ತು ಸೆಲ್ ಮುಂತಾದ ಕಂಪನಿಯ ಷೇರುಗಳು ಸೇರಿವೆ.

ಫೆಬ್ರವರಿ 2021ರಿಂದ ಶೇ. 100ಕ್ಕೂ ಹೆಚ್ಚು ಗಳಿಕೆಯ ಷೇರುಗಳು:

ಜೆಎಸ್‌ಡಬ್ಲ್ಯೂ ಎನರ್ಜಿ: 243.93%
ಶ್ರೀ ರೇಣುಕಾ ಶುಗರ್ಸ್: 240.93%
ಗುಜರಾತ್ ಫ್ಲೋರೊಕೆಮಿಕಲ್ಸ್ ಲಿಮಿಟೆಡ್: 208.50%
ಪ್ರಜ್ ಇಂಡಸ್ಟ್ರೀಸ್: 180.46:
ಎಚ್‌ಎಫ್‌ಸಿಎಲ್‌: 175.32
ಸೆಂಟ್ರಲ್ ಡೆಪಾಸಿಟರಿ ಸರ್ವೀಸ್ ಲಿ.: 174.17
ಲಕ್ಸ್‌ ಇಂಡಸ್ಟ್ರೀಸ್: 151.71
ಅದಾನಿ ಟೋಟಲ್ ಗ್ಯಾಸ್: 132.52
ಜಿಂದಾಲ್ ಸ್ಟೈನ್‌ಲೆಸ್‌(ಹಿಸಾರ್): 130.22
ಇಕ್ಲರ್ಕ್ಸ್ ಸರ್ವೀಸಸ್: 130.11
ಬರ್ಲಾಂಪುರ್ ಚಿನಿ ಮಿಲ್ಸ್‌: 129.81
ಕೆಪಿಐಟಿ ಟೆಕ್ನಾಲಜೀಸ್: 123.14
ಅಲ್ಕೈಲ್‌ ಅಮಿನಸ್ ಕೆಮಿಕಲ್ಸ್: 122.80
ಟಾಟಾ ಸ್ಟೀಲ್ ಬಿಎಸ್‌ಎಲ್‌ ಲಿ.: 118.22
ಎಚ್‌ಇಜಿ: 115.49
ಹಿಂದೂಸ್ತಾನ್ ಕಾಪರ್: 114.45
ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ: 114.45
ರೆಡಿಂಗ್ಟನ್ (ಭಾರತ): 114.05
ಕೆಪಿಆರ್‌ ಮಿಲ್‌: 112.46
ಇಂಡಿಯನ್ ಓವರ್‌ಸಿಸ್‌ ಬ್ಯಾಂಕ್: 110.04
ನವ ಭಾರತ್ ವೆಂಚರ್ಸ್: 108.39
ಬಿಎಸ್‌ಇ ಲಿಮಿಟೆಡ್: 109.36
ಡಿಸಿಎಂ ಶ್ರೀರಾಮ್: 107.85
ಜಿಂದಾಲ್ ಸ್ಟೈನ್‌ಲೆಸ್: 107.39
ಟಾಟಾ ಸ್ಟೀಲ್: 105.80
ಕೊಫೋರ್ಜ್ ಲಿಮಿಟೆಡ್: 105.80
ಗ್ರಾಫೈಟ್ ಇಂಡಿಯಾ: 104.27
ಫಸ್ಟ್‌ಸೌರ್ಸ್‌ ಸೊಲ್ಯೂಷನ್: 103.59
ದೀಪಕ್ ನೈಟ್ರೈಟ್‌: 103.56

ಮೊಟ್ಟ ಮೊದಲ ಬಾರಿಗೆ 16,000 ಗಡಿ ದಾಟಿದ ನಿಫ್ಟಿ

ಕಳೆದ ಎರಡು ತಿಂಗಳುಗಳಿಂದ, ನಿಫ್ಟಿ 15450 ರಿಂದ 15950 ರ ಅತ್ಯಂತ ಬಿಗಿಯಾದ ವ್ಯಾಪ್ತಿಯಲ್ಲಿ ಏರಿಳಿತಗೊಳ್ಳುತ್ತಿತ್ತು. ಆದರೆ ಈಗ ಸೂಚ್ಯಂಕವು ಆ ಹಂತವನ್ನು ದಾಟಿ ಮುಂದೆ ಸಾಗಿದೆ.

ನಿಫ್ಟಿ 50 ತನ್ನ 1000 ಪಾಯಿಂಟ್ ಪ್ರಯಾಣವನ್ನು ಪೂರ್ಣಗೊಳಿಸುತ್ತಿದ್ದಂತೆ, ನಿಫ್ಟಿ ಸ್ಟಾಕ್ ಹೂಡಿಕೆದಾರರ ಸಂಪತ್ತನ್ನು ದ್ವಿಗುಣಗೊಳಿಸಿದರೆ 15 ಷೇರುಗಳು 20 ಪ್ರತಿಶತಕ್ಕಿಂತ ಹೆಚ್ಚು ಏರಿಕೆಯಾಗಿದೆ. ಲೋಹದ ಜಾಗದಲ್ಲಿ ಟಾಟಾ ಸ್ಟೀಲ್ ಫೆಬ್ರವರಿ 5 ರಿಂದ 105% ಏರಿಕೆಗೊಂಡರೆ, ಅಲ್ಟ್ರಾಟೆಕ್ ಸಿಮೆಂಟ್ಸ್, ಏಷ್ಯನ್‌ ಪೇಂಟ್ಸ್, ಟೆಕ್ ಮಹೀಂದ್ರಾ ವಿಪ್ರೋ, ಯುಪಿಎಲ್, ಹಿಂಡಾಲ್ಕೊ ಮತ್ತು ಜೆಎಸ್‌ಡಬ್ಲ್ಯೂ ಸ್ಟೀಲ್ 20 ರಿಂದ 80% ರಷ್ಟು ಏರಿಕೆಯಾಗಿವೆ.

ಇದರ ಜೊತೆಗೆ ನಿಫ್ಟಿ ಮೆಟಲ್ ಸೂಚ್ಯಂಕವು ಶೇಕಡಾ 67 ರಷ್ಟು ಏರಿಕೆಯಾದರೆ, ನಂತರ ನಿಫ್ಟಿ ರಿಯಾಲ್ಟಿ (22 %), ನಿಫ್ಟಿ ಪಿಎಸ್‌ಇ (21 %), ನಿಫ್ಟಿ ಐಟಿ (21 %) ಮತ್ತು ನಿಫ್ಟಿ 500 ಇದು 12% ಗಿಂತ ಹೆಚ್ಚಾಗಿದೆ.

English summary

Market Ends At Record Closing High: Nifty50 Reached 16000 Mark

Nifty50 surpassed Mount 16K for the first time on August 3 which translates into an upside of over 14 percent so far in 2021.
Story first published: Tuesday, August 3, 2021, 16:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X