ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಎಂಟು ಕಂಪನಿಗಳು ಕಳೆದ ವಾರದಲ್ಲಿ 1,90,032.06 ಕೋಟಿ ರು ಮಾರುಕಟ್ಟೆ ಮೌಲ್ಯ ಹೆಚ್ಚಿಸಿಕೊಂಡಿವೆ. ಸತತ ನಾಲ್ಕು ವಾರಗಳಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಹೆಚ್ಚು ಲಾಭ ಗಳಿಸಿದೆ. ಕಳೆದ ವಾರಕ್ಕೂ ಮುಂದಿನ ವಾರದಲ್ಲಿ ಹಿಂದೂಸ್ತಾನ್ ಯೂನಿಲಿವರ್ ಲಿ. ಹೆಚ್ಚು ಲಾಭ ಗಳಿಸಿತ್ತು. ಕಳೆದ ವಾರ ಟಿಸಿಎಸ್ ಜೊತೆಗೆ ರಿಲಯನ್ಸ್ ಇಂಡಸ್ಟ್ರೀಸ್ ಹೆಚ್ಚು ಮೌಲ್ಯವೃದ್ಧಿ ಕಂಡಿದೆ.
ಹೆಚ್ಚು ಮೌಲ್ಯ ಕಳೆದು ಕೊಂಡ ಕಂಪನಿಯಾಗಿ ಎಚ್ ಡಿ ಎಫ್ ಸಿ ಹಾಗೂ ಇನ್ಫೋಸಿಸ್ ಮಾತ್ರ ಗುರುತಿಸಿಕೊಂಡಿವೆ, ಟಿಸಿಎಸ್, ರಿಲಯನ್ಸ್, ಎಚ್ ಡಿಎಫ್ ಸಿ ಬ್ಯಾಂಕ್, ಬಜಾಜ್ ಫೈನಾನ್ಸ್ ಹಾಗೂ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಅತಿ ಹೆಚ್ಚು ಲಾಭ ಗಳಿಸಿವೆ. ಬಿಎಸ್ಇ ಸೆನ್ಸೆಕ್ಸ್ 1,159.57 ಅಂಕ ಅಥವಾ ಶೇ 2.31ರಷ್ಟು ಏರಿಕೆ ಕಂಡಿತ್ತು. ಆಗಸ್ಟ್ 8ಕ್ಕೆ ಪ್ರಕಟವಾದ ಮಾರುಕಟ್ಟೆ ಮೌಲ್ಯ ವರದಿಯಂತೆ ಬಜಾಜ್ ಫೈನಾನ್ಸ್ ಹೊರತುಪಡಿಸಿ ಮಿಕ್ಕ ಟಾಪ್ 9 ಕಂಪನಿಗಳ ಮೌಲ್ಯ ಸುಸ್ಥಿತಿಯಲ್ಲಿದ್ದವು. ಆಗಸ್ಟ್ 15ರ ವರದಿಯಲ್ಲೂ ಬಜಾಜ್ ಫೈನಾನ್ಸ್ ಹಿನ್ನಡೆ ಅನುಭವಿಸಿದೆ. ಜೊತೆಗೆ ಸ್ಟೇಟ್ ಆಫ್ ಇಂಡಿಯಾ ಕೂಡಾ ಹಿಂದೆ ಬಿದ್ದಿದೆ. ಆಗಸ್ಟ್ 22ರ ವರದಿಯಲ್ಲಿ ಏಳು ಕಂಪನಿಗಳು ಲಾಭದತ್ತ ಮುಖ ಮಾಡಿದ್ದವು.
ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಎರಡು ಕಂಪನಿಗಳು ತಮ್ಮ ಮೌಲ್ಯ ಕಳೆದುಕೊಂಡಿವೆ. ರಜೆಗಳ ನಡುವೆ ಷೇರುಪೇಟೆಯಲ್ಲಿ ಬಿಎಸ್ಇ ಬೆಂಚ್ ಮಾರ್ಕ್ ಸೆನ್ಸೆಕ್ಸ್ 795.40 ಅಂಕ ಅಥವಾ ಶೇ 1.43 ರಷ್ಟು ಏರಿಕೆ ಕಂಡಿವೆ.
ಹೆಚ್ಚಿನ ವಹಿವಾಟು ನಡೆಸಿದ ಕಂಪನಿಗಳು
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ರಿಲಯನ್ಸ್ ಇಂಡಸ್ಟ್ರೀಸ್ , ಎಚ್ ಡಿಎಫ್ ಸಿ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್ ಲಿ,ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ, ಬಜಾಜ್ ಫೈನಾನ್ಸ್, ವಿಪ್ರೋ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಳೆದ ವಾರ ಲಾಭ ಗಳಿಸಿದ ಕಂಪನಿಗಳಾಗಿದ್ದು, ಹೆಚ್ಚಿನ ವಹಿವಾಟು ನಡೆಸಿವೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಕಳೆದ ಶುಕ್ರವಾರ (ಆಗಸ್ಟ್ 27) ದಂದು ಶೇ 1.32ರಷ್ಟು 48.30ರು ಏರಿಕೆಯಾಗಿ 3,720.15 ಅಂಶಕ್ಕೇರಿದೆ.
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) ಟಾಪ್
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) 60,183.57 ಕೋಟಿ ರು ಸೇರಿಸಿಕೊಂಡು 13,76,102.60 ಕೋಟಿ ರು ಮೌಲ್ಯಕ್ಕೇರಿದೆ. ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ51,064.22 ಕೋಟಿ ರು ಹಿಗ್ಗಿ 14,11,635.50 ಕೋಟಿ ರು ಮೌಲ್ಯಕ್ಕೇರಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ 19,651.18 ಕೋಟಿ ರು ಸೇರಿಸಿಕೊಂಡು 8,57,407.68 ಕೋಟಿ ರು ತಲುಪಿದೆ. ಬಜಾಜ್ ಫೈನಾನ್ಸ್ 18,518.27 ಕೋಟಿ ರು ಕಳೆದುಕೊಂಡು 4,20,300.85 ಕೋಟಿ ರುಗೆ ಕುಸಿದಿದೆ.
ಹಿಂದೂಸ್ತಾನ್ ಯೂನಿಲಿವರ್ ಮೌಲ್ಯ
ಹಿಂದೂಸ್ತಾನ್ ಯೂನಿಲಿವರ್ ಮೌಲ್ಯ 14,215.01 ಕೋಟಿ ರು ಹಿಗ್ಗಿ 6,29,231.64 ರು ಆಗಿದೆ. ಐಸಿಐಸಿಸಿ ಬ್ಯಾಂಕ್ ಮೌಲ್ಯ 13,361.63ಕೋಟಿ ರು ಮೇಲಕ್ಕೇರಿ 4,84,858.91 ಕೋಟಿ ರು ಆಗಿದೆ. ವಿಪ್ರೋ ಸಂಸ್ಥೆ ಮಾರುಕಟ್ಟೆ ಮೌಲ್ಯ 8,218.89 ಕೋಟಿ ರು 3,47,851 ಕೋಟಿ ರು ಗೇರಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 4,819.29 ಕೋಟಿ ರು ಏರಿಕೆಯಾಗಿ 3,68,006.36 ಕೋಟಿ ರು ಆಗಿದೆ.
ಒಟ್ಟಾರೆ, ಟಾಪ್ 10 ಕಂಪನಿಗಳು
ಒಟ್ಟಾರೆ, ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿ, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹಾಗೂ ವಿಪ್ರೋ.
ಇನ್ಫೋಸಿಸ್ ಮೌಲ್ಯ 10,053.22 ಕೋಟಿ ರು ಇಳಿಕೆ ಕಂಡು 7,24,701.90 ರು ಆಗಿದೆ. ಎಚ್‌ಡಿಎಫ್‌ಸಿ ಮೌಲ್ಯ 738.75 ಕೋಟಿ ರು ಹೆಚ್ಚಳವಾಗಿ 4,90,991.24 ಕೋಟಿ ರು ಆಗಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications