ಟಾಪ್ 10 ಕಂಪನಿ ವಾರದ ಮೌಲ್ಯ: ರಿಲಯನ್ಸ್ ಸಂಸ್ಥೆಗೆ ಮತ್ತೆ ಲಾಭ
ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಐದು ಕಂಪನಿಗಳು ಕಳೆದ ವಾರದಲ್ಲಿ62,508.32 ಕೋಟಿ ರು ಮಾರುಕಟ್ಟೆ ಮೌಲ್ಯ ಹೆಚ್ಚಿಸಿಕೊಂಡಿವೆ. ಸತತ ನಾಲ್ಕು ವಾರಗಳಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಹೆಚ್ಚು ಲಾಭ ಗಳಿಸಿತ್ತು. ಕಳೆದ ಎರಡು ವಾರದಲ್ಲಿ ಹಿಂದೂಸ್ತಾನ್ ಯೂನಿಲಿವರ್ ಲಿ. ಹೆಚ್ಚು ಲಾಭ ಗಳಿಸಿತ್ತು. ಸತತವಾಗಿ ರಿಲಯನ್ಸ್ ಇಂಡಸ್ಟ್ರೀಸ್ ಅತಿ ಹೆಚ್ಚು ಮೌಲ್ಯವೃದ್ಧಿ ಕಂಡಿದೆ.
ಹೆಚ್ಚು ಮೌಲ್ಯ ಕಳೆದು ಕೊಂಡ ಕಂಪನಿಗಳಲ್ಲಿ ಟಿಸಿಎಸ್, ಎಚ್ಡಿಎಫ್ಸಿ ಬ್ಯಾಂಕ್, ಬಜಾಜ್ ಫೈನಾನ್ಸ್, ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್ ಗುರುತಿಸಿಕೊಂಡಿವೆ, ರಿಲಯನ್ಸ್, ಭಾರ್ತಿ ಏರ್ ಟೆಲ್, ಎಚ್ಡಿಎಫ್ಸಿ, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅತಿ ಹೆಚ್ಚು ಲಾಭ ಗಳಿಸಿವೆ. ಬಿಎಸ್ಇಯಲ್ಲಿ 30 ಷೇರುಗಳು ಸೆನ್ಸೆಕ್ಸ್ 175.12ಅಂಕ ಅಥವಾ ಶೇ 0.30 ರಷ್ಟು ಏರಿಕೆ ಕಂಡಿತ್ತು. ಕಳೆದ ವಾರ ಎಚ್ ಡಿ ಎಫ್ ಸಿ ಹಾಗೂ ಇನ್ಫೋಸಿಸ್ ಮೌಲ್ಯ ಕಳೆದುಕೊಂಡಿದ್ದವು.
ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಹೆಚ್ಚು ಕಂಪನಿ ಮೌಲ್ಯ ಕಳೆದುಕೊಂಡಿದೆ. ರಜೆಗಳ ನಡುವೆ ಷೇರುಪೇಟೆಯಲ್ಲಿ ಹೆಚ್ಚು ವಹಿವಾಟು ಕಂಡು ಬಂದಿವೆ..
ಹೆಚ್ಚಿನ ವಹಿವಾಟು ನಡೆಸಿದ ಕಂಪನಿಗಳು
ರಿಲಯನ್ಸ್, ಭಾರ್ತಿ ಏರ್ ಟೆಲ್, ಎಚ್ಡಿಎಫ್ಸಿ, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಳೆದ ವಾರ ಲಾಭ ಗಳಿಸಿದ ಕಂಪನಿಗಳಾಗಿದ್ದು, ಹೆಚ್ಚಿನ ವಹಿವಾಟು ನಡೆಸಿವೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಳೆದ ಶುಕ್ರವಾರ (ಸೆಪ್ಟೆಂಬರ್ 09) ದಂದು ಶೇ 0.24ರಷ್ಟು 5.75ರು ಇಳಿಕೆಯಾಗಿ 2,425.60 ಅಂಶಕ್ಕೇರಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಟಾಪ್
ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ 23,582.73 ಕೋಟಿ ರು ಹಿಗ್ಗಿ 15,37,600.23 ಕೋಟಿ ರು ಮೌಲ್ಯಕ್ಕೇರಿದೆ. ಕಳೆದ ವಾರ ಮಾರುಕಟ್ಟೆ ಮೌಲ್ಯ ಕೂಡಾ 15 ಲಕ್ಷ ಕೋಟಿ ರು ಗೇರಿದ ಮೊದಲ ದೇಶಿ ಕಂಪನಿ ಎನಿಸಿಕೊಂಡಿತ್ತು. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) 18,347.3 ಕೋಟಿ ರು ಕಳೆದುಕೊಂಡು 14,02,587.80 ಕೋಟಿ ರು ಮೌಲ್ಯಕ್ಕೇರಿದೆ. ಭಾರ್ತಿ ಏರ್ ಟೆಲ್ 15,377.67ಕೋಟಿ ರು ಸೇರಿಸಿಕೊಂಡು 3,76,917.83ಕೋಟಿ ರು ತಲುಪಿದೆ. ಬಜಾಜ್ ಫೈನಾನ್ಸ್ 5,824.68 ಕೋಟಿ ರು ಕಳೆದುಕೊಂಡು 4,48,383.08 ಕೋಟಿ ರುಗೆ ಕುಸಿದಿದೆ.
ಐಸಿಐಸಿಸಿ ಬ್ಯಾಂಕ್ ಕುಸಿತ
ಹಿಂದೂಸ್ತಾನ್ ಯೂನಿಲಿವರ್ ಮೌಲ್ಯ 9,997.52 ಕೋಟಿ ರು ಹಿಗ್ಗಿ 6,59,941.45 ರು ಆಗಿದೆ. ಐಸಿಐಸಿಸಿ ಬ್ಯಾಂಕ್ ಮೌಲ್ಯ 3,013.49 ಕೋಟಿ ರು ಕೆಳಕ್ಕಿಳಿದು 4,99,218.97 ಕೋಟಿ ರು ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 713.97 ಕೋಟಿ ರು ಏರಿಕೆಯಾಗಿ 3,85,721.71 ಕೋಟಿ ರು ಆಗಿದೆ. ಎಚ್ಡಿಎಫ್ಸಿ ಬ್ಯಾಂಕ್ 4,429.22ಕೋಟಿ ರು ಕಳೆದುಕೊಂಡು 8,67,933.20 ಕೋಟಿ ರು ತಲುಪಿದೆ. ಎಚ್ಡಿಎಫ್ಸಿ 12,836.43 ಕೋಟಿ ರು ಸೇರಿಸಿಕೊಂಡು 5,11,126.48 ಕೋಟಿ ರು ತಲುಪಿದೆ.
ಒಟ್ಟಾರೆ, ಟಾಪ್ 10 ಕಂಪನಿಗಳು
ಒಟ್ಟಾರೆ, ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್ಡಿಎಫ್ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿ,ಎಚ್ಡಿಎಫ್ಸಿ, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹಾಗೂ ಭಾರ್ತಿ ಏರ್ ಟೆಲ್. ಕಳೆದ ವಾರ ಮೌಲ್ಯ ಕಳೆದುಕೊಂಡ ಏಕೈಕ ಕಂಪನಿ ಇನ್ಫೋಸಿಸ್ ಮೌಲ್ಯ 3,457.12 ಕೋಟಿ ರು ಇಳಿಕೆ ಕಂಡು 7,21,244.78 ರು ಆಗಿದೆ.