ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಆರು ಕಂಪನಿಗಳು 76,640.54 ಕೋಟಿ ರು ಮಾರುಕಟ್ಟೆ ಮೌಲ್ಯ ಕಳೆದುಕೊಂಡಿವೆ. ಕಳೆದ ವಾರದಲ್ಲಿ ಎಚ್‌ಡಿಎಫ್‌ಸಿ ಹೆಚ್ಚು ನಷ್ಟ ಅನುಭವಿಸಿದೆ.
ಹೆಚ್ಚು ಮೌಲ್ಯ ಕಳೆದು ಕೊಂಡ ಕಂಪನಿಗಳು: ಎಚ್‌ಡಿಎಫ್‌ಸಿ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ಎಚ್‌ಡಿಎಫ್‌ಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕ್.
ಎಚ್‌ಡಿಎಫ್‌ಸಿ ಬ್ಯಾಂಕ್ 43, 578.18 ಕೋಟಿ ರು ಕಳೆದುಕೊಂಡು 7,97, 422.67 ಕೋಟಿ ರು ತಲುಪಿದೆ.

ಹಿಂದೂಸ್ತಾನ್ ಯೂನಿಲಿವರ್ ಮೌಲ್ಯ 13,004.97ಕೋಟಿ ರು ತಗ್ಗಿ 5,54,326.97 ರು ಆಗಿದೆ. ಎಚ್‌ಡಿಎಫ್‌ಸಿ ಮಾರುಕಟ್ಟೆ ಮೌಲ್ಯ 9.543.39 ಕೋಟಿ ರು ತಗ್ಗಿ 4,48,566.27 ಕೋಟಿ ರು ಆಗಿದೆ.
ಕೋಟಕ್ ಮಹೀಂದ್ರಾ ಬ್ಯಾಂಕ್ ಮೌಲ್ಯ 5,392.88 ಕೋಟಿ ರು ಇಳಿಕೆ ಕಂಡು 3,41,634.86ಕೋಟಿ ರು ಆಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ 4,184.03ಕೋಟಿ ರು ಕಳೆದುಕೊಂಡು 13,34,579.57ಕೋಟಿ ರು ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 937.09 ಕೋಟಿ ರು ಇಳಿಕೆಯಾಗಿ 3,82,999.70 ಕೋಟಿ ರು ಆಗಿದೆ.
ಇನ್ಫೋಸಿಸ್ ಮೌಲ್ಯ 15,055.86 ಕೋಟಿ ರು ಏರಿಕೆ ಕಂಡು 6,77,343.70 ರು ಆಗಿದೆ. ಐಸಿಐಸಿಸಿ ಬ್ಯಾಂಕ್ ಮೌಲ್ಯ 11,370.14 ಕೋಟಿ ರು ಮೇಲಕ್ಕೇರಿ 4,68,639.08 ಕೋಟಿ ರು ಆಗಿದೆ.
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ 6,436.35 ಕೋಟಿ ರು ಸೇರಿಸಿಕೊಂಡು 11,88,153.80 ಕೋಟಿ ರು ಆಗಿದೆ. ಬಜಾಜ್ ಫೈನಾನ್ಸ್ 3,190 ಕೋಟಿ ರು ಮೇಲಕ್ಕೇರಿ 3,73,000.18 ಕೋಟಿ ರು ಆಗಿದೆ.
ಒಟ್ಟಾರೆ, ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿ, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಜಾಜ್ ಫೈನಾನ್ಸ್ ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕ್.


Click it and Unblock the Notifications