ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಎಂಟು ಕಂಪನಿಗಳು ಕಳೆದ ವಾರದಲ್ಲಿ 1,60,408.24 ಕೋಟಿ ರು ಮಾರುಕಟ್ಟೆ ಮೌಲ್ಯ ಹೆಚ್ಚಿಸಿಕೊಂಡಿವೆ. ಸತತ ಎರಡು ವಾರಗಳಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) ಹೆಚ್ಚು ಲಾಭ ಗಳಿಸಿದೆ.
ಹೆಚ್ಚು ಮೌಲ್ಯ ಕಳೆದು ಕೊಂಡ ಕಂಪನಿಯಾಗಿ ಬಜಾಜ್ ಫೈನಾನ್ಸ್ ಹಾಗೂ ಸ್ಟೇಟ್ ಆಫ್ ಇಂಡಿಯಾ ಮಾತ್ರ ಗುರುತಿಸಿಕೊಂಡಿವೆ, ಟಿಸಿಎಸ್, ರಿಲಯನ್ಸ್ ಹಾಗೂ ಎಚ್ ಡಿ ಎಫ್ ಸಿ ಅತಿ ಹೆಚ್ಚು ಲಾಭ ಗಳಿಸಿವೆ. ಬಿಎಸ್ಇ ಸೆನ್ಸೆಕ್ಸ್ 1,159.57 ಅಂಕ ಅಥವಾ ಶೇ 2.31ರಷ್ಟು ಏರಿಕೆ ಕಂಡಿತ್ತು. ಆಗಸ್ಟ್ 5ರಂದು ದಾಖಲೆಯ 54,717.24 ಅಂಶಕ್ಕೇರಿತ್ತು. ಭಾರತೀಯ ಷೇರುಪೇಟೆ ಜಾಗತಿಕ ಸಕಾರಾತ್ಮಕ ಸೂಚನೆ ಬೆನ್ನಲ್ಲೆ ಕಳೆದ ಶುಕ್ರವಾರ ದಂದು ಭರ್ಜರಿ ಆರಂಭ ಪಡೆದಿತ್ತು ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಏರಿಕೆಗೊಂಡಿತ್ತು. 55,000 ಅಂಶ ಮೊದಲ ಬಾರಿಗೆ ಏರಿಕೆಯಾಗಿ ಸೂಚ್ಯಂಕ 55,487.79ಕ್ಕೇರಿತ್ತು.
ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಹೆಚ್ಚು ಕಂಪನಿಗಳು ತಮ್ಮ ಮೌಲ್ಯ ಹೆಚ್ಚಿಸಿಕೊಂಡಿವೆ. ಆಗಸ್ಟ್ 8ಕ್ಕೆ ಪ್ರಕಟವಾದ ಮಾರುಕಟ್ಟೆ ಮೌಲ್ಯ ವರದಿಯಂತೆ ಬಜಾಜ್ ಫೈನಾನ್ಸ್ ಹೊರತುಪಡಿಸಿ ಮಿಕ್ಕ ಟಾಪ್ 9 ಕಂಪನಿಗಳ ಮೌಲ್ಯ ಸುಸ್ಥಿತಿಯಲ್ಲಿದ್ದವು. ಆಗಸ್ಟ್ 15ರ ವರದಿಯಲ್ಲೂ ಬಜಾಜ್ ಫೈನಾನ್ಸ್ ಹಿನ್ನಡೆ ಅನುಭವಿಸಿದೆ. ಜೊತೆಗೆ ಸ್ಟೇಟ್ ಆಫ್ ಇಂಡಿಯಾ ಕೂಡಾ ಹಿಂದೆ ಬಿದ್ದಿದೆ.
ಹೆಚ್ಚಿನ ವಹಿವಾಟು ನಡೆಸಿದ ಕಂಪನಿಗಳು
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿ, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕ್ ಕಳೆದ ವಾರ ಲಾಭ ಗಳಿಸಿದ ಕಂಪನಿಗಳಾಗಿದ್ದು, ಹೆಚ್ಚಿನ ವಹಿವಾಟು ನಡೆಸಿವೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಕಳೆದ ಶುಕ್ರವಾರ (ಆಗಸ್ಟ್ 13) ದಂದು ಶೇ 3.33ರಷ್ಟು 111.65ರು ಏರಿಕೆಯಾಗಿ 3,463.40 ಅಂಶಕ್ಕೇರಿದೆ.
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) ಮೌಲ್ಯ
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) 56,133.1 ಕೋಟಿ ರು ಸೇರಿಸಿಕೊಂಡು 12,80,574.59 ಕೋಟಿ ರು ಮೌಲ್ಯಕ್ಕೇರಿದೆ. ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ 35,310.7 ಕೋಟಿ ರು ಹಿಗ್ಗಿ 13,59,652.06 ಕೋಟಿ ರು ಮೌಲ್ಯಕ್ಕೇರಿದೆ. ಇನ್ಫೋಸಿಸ್ ಮೌಲ್ಯ 23,521.63 ಕೋಟಿ ರು ಏರಿಕೆ ಕಂಡು 7,26,419.85 ರು ಆಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ 17,370.86 ಕೋಟಿ ರು ಸೇರಿಸಿಕೊಂಡು 8,43,703.53 ಕೋಟಿ ರು ತಲುಪಿದೆ. ಎಚ್‌ಡಿಎಫ್‌ಸಿ ಮೌಲ್ಯ 13,304.96 ಕೋಟಿ ರು ಹೆಚ್ಚಳವಾಗಿ 4,88,217.12 ಕೋಟಿ ರು ಆಗಿದೆ.
ಹಿಂದೂಸ್ತಾನ್ ಯೂನಿಲಿವರ್ ಮೌಲ್
ಹಿಂದೂಸ್ತಾನ್ ಯೂನಿಲಿವರ್ ಮೌಲ್ಯ 7,671.41ಕೋಟಿ ರು ಹಿಗ್ಗಿ 5,64,782.42 ರು ಆಗಿದೆ. ಐಸಿಐಸಿಸಿ ಬ್ಯಾಂಕ್ ಮೌಲ್ಯ 5,321.09 ಕೋಟಿ ರು ಮೇಲಕ್ಕೇರಿ 4,88,352.01 ಕೋಟಿ ರು ಆಗಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್ ಮೌಲ್ಯ 1,774.49 ಕೋಟಿ ರು ಏರಿಕೆ ಕಂಡು 3,54,482.60 ಕೋಟಿ ರು ಆಗಿದೆ.
ಮೌಲ್ಯ ಕಳೆದುಕೊಂಡ ಸಂಸ್ಥೆಗಳು
ಮೌಲ್ಯ ಕಳೆದುಕೊಂಡ ಸಂಸ್ಥೆಗಳು: ಬಜಾಜ್ ಫೈನಾನ್ಸ್ 4,288.54 ಕೋಟಿ ರು ಕಳೆದುಕೊಂಡು 3,71,340.29 ಕೋಟಿ ರುಗೆ ಕುಸಿದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 3,837.58 ಕೋಟಿ ರು ಏರಿಕೆಯಾಗಿ 3,84,963.12 ಕೋಟಿ ರು ಆಗಿದೆ.
ಟಾಪ್ 10 ಕಂಪನಿಗಳು
ಒಟ್ಟಾರೆ, ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿ, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಜಾಜ್ ಫೈನಾನ್ಸ್ ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕ್.


Click it and Unblock the Notifications