ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಏಳು ಕಂಪನಿಗಳು ಕಳೆದ ವಾರದಲ್ಲಿ 1,31,173.41 ಕೋಟಿ ರು ಮಾರುಕಟ್ಟೆ ಮೌಲ್ಯ ಹೆಚ್ಚಿಸಿಕೊಂಡಿವೆ. ಸತತ ಮೂರು ವಾರಗಳಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಹೆಚ್ಚು ಲಾಭ ಗಳಿಸಿದೆ. ಕಳೆದ ವಾರ ಹಿಂದೂಸ್ತಾನ್ ಯೂನಿಲಿವರ್ ಲಿ. ಕೂಡಾ ಲಾಭದತ್ತ ಹೆಚ್ಚ ಗಳಿಸಿದೆ.
ಹೆಚ್ಚು ಮೌಲ್ಯ ಕಳೆದು ಕೊಂಡ ಕಂಪನಿಯಾಗಿ ಎಚ್ ಡಿ ಎಫ್ ಸಿ ಬ್ಯಾಂಕ್, ಐಸಿಐಸಿಐ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾತ್ರ ಗುರುತಿಸಿಕೊಂಡಿವೆ, ಟಿಸಿಎಸ್, ರಿಲಯನ್ಸ್, ಇನ್ಫೋಸಿಸ್, ಬಜಾಜ್ ಫೈನಾನ್ಸ್ ಹಾಗೂ ಎಚ್ ಡಿ ಎಫ್ ಸಿ ಅತಿ ಹೆಚ್ಚು ಲಾಭ ಗಳಿಸಿವೆ. ಬಿಎಸ್ಇ ಸೆನ್ಸೆಕ್ಸ್ 1,159.57 ಅಂಕ ಅಥವಾ ಶೇ 2.31ರಷ್ಟು ಏರಿಕೆ ಕಂಡಿತ್ತು. ಆಗಸ್ಟ್ 8ಕ್ಕೆ ಪ್ರಕಟವಾದ ಮಾರುಕಟ್ಟೆ ಮೌಲ್ಯ ವರದಿಯಂತೆ ಬಜಾಜ್ ಫೈನಾನ್ಸ್ ಹೊರತುಪಡಿಸಿ ಮಿಕ್ಕ ಟಾಪ್ 9 ಕಂಪನಿಗಳ ಮೌಲ್ಯ ಸುಸ್ಥಿತಿಯಲ್ಲಿದ್ದವು. ಆಗಸ್ಟ್ 15ರ ವರದಿಯಲ್ಲೂ ಬಜಾಜ್ ಫೈನಾನ್ಸ್ ಹಿನ್ನಡೆ ಅನುಭವಿಸಿದೆ. ಜೊತೆಗೆ ಸ್ಟೇಟ್ ಆಫ್ ಇಂಡಿಯಾ ಕೂಡಾ ಹಿಂದೆ ಬಿದ್ದಿದೆ.
ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಮೂರು ಕಂಪನಿಗಳು ತಮ್ಮ ಮೌಲ್ಯ ಕಳೆದುಕೊಂಡಿವೆ. ರಜೆಗಳ ನಡುವೆ ಷೇರುಪೇಟೆಯಲ್ಲಿ 30 ಷೇರು ಬಿಎಸ್ಇ ಬೆಂಚ್ ಮಾರ್ಕ್ ಸೆನ್ಸೆಕ್ಸ್ 107.97 ಅಂಕ ಅಥವಾ ಶೇ 0.19ರಷ್ಟು ಇಳಿಕೆ ಕಂಡಿವೆ.
ಹೆಚ್ಚಿನ ವಹಿವಾಟು ನಡೆಸಿದ ಕಂಪನಿಗಳು
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಹಿಂದೂಸ್ತಾನ್ ಯೂನಿಲಿವರ್ ಲಿ, ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ, ಬಜಾಜ್ ಫೈನಾನ್ಸ್ ಹಾಗೂ ವಿಪ್ರೋ, ಇನ್ಫೋಸಿಸ್ ಕಳೆದ ವಾರ ಲಾಭ ಗಳಿಸಿದ ಕಂಪನಿಗಳಾಗಿದ್ದು, ಹೆಚ್ಚಿನ ವಹಿವಾಟು ನಡೆಸಿವೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಕಳೆದ ಶುಕ್ರವಾರ (ಆಗಸ್ಟ್ 20) ದಂದು ಶೇ 0.03ರಷ್ಟು 1.05ರು ಇಳಿಕೆಯಾಗಿ 3,559.50 ಅಂಶಕ್ಕೇರಿದೆ.
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) ಮೌಲ್ಯ ಏರಿಕೆ
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) 35,344.44 ಕೋಟಿ ರು ಸೇರಿಸಿಕೊಂಡು 13,15,919.03 ಕೋಟಿ ರು ಮೌಲ್ಯಕ್ಕೇರಿದೆ. ಹಿಂದೂಸ್ತಾನ್ ಯೂನಿಲಿವರ್ ಮೌಲ್ಯ 50,234.21 ಕೋಟಿ ರು ಹಿಗ್ಗಿ 6,15,016.63 ರು ಆಗಿದೆ. ಬಜಾಜ್ ಫೈನಾನ್ಸ್ 30,442.29 ಕೋಟಿ ರು ಕಳೆದುಕೊಂಡು 4,01,782.58 ಕೋಟಿ ರುಗೆ ಕುಸಿದಿದೆ. ಇನ್ಫೋಸಿಸ್ ಮೌಲ್ಯ 8,335.27 ಕೋಟಿ ರು ಏರಿಕೆ ಕಂಡು 7,34,755.12 ರು ಆಗಿದೆ.
ಎಚ್‌ಡಿಎಫ್‌ಸಿ ಕಂಪನಿ ಮೌಲ್ಯ ಏರಿಕೆ
ಎಚ್‌ಡಿಎಫ್‌ಸಿ ಮೌಲ್ಯ 3,512.87 ಕೋಟಿ ರು ಹೆಚ್ಚಳವಾಗಿ 4,91,729.99 ಕೋಟಿ ರು ಆಗಿದೆ. ವಿಪ್ರೋ ಸಂಸ್ಥೆ ಮಾರುಕಟ್ಟೆ ಮೌಲ್ಯ 2,385.11 ಕೋಟಿ ರು 3,39,632.11 ಕೋಟಿ ರು ಗೇರಿದೆ. ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ 919.22 ಕೋಟಿ ರು ಹಿಗ್ಗಿ 13,60,571.28 ಕೋಟಿ ರು ಮೌಲ್ಯಕ್ಕೇರಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್ ಮೌಲ್ಯ 1,774.49 ಕೋಟಿ ರು ಏರಿಕೆ ಕಂಡು 3,54,482.60 ಕೋಟಿ ರು ಆಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೌಲ್ಯ ಇಳಿಕೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 21,776.05 ಕೋಟಿ ರು ಏರಿಕೆಯಾಗಿ 3,63,187.07 ಕೋಟಿ ರು ಆಗಿದೆ. ಐಸಿಐಸಿಸಿ ಬ್ಯಾಂಕ್ ಮೌಲ್ಯ 16,854.73 ಕೋಟಿ ರು ಮೇಲಕ್ಕೇರಿ 4,71,497.28 ಕೋಟಿ ರು ಆಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ 5,947.03ಕೋಟಿ ರು ಸೇರಿಸಿಕೊಂಡು 8,37,756.50 ಕೋಟಿ ರು ತಲುಪಿದೆ.
ಟಾಪ್ 10 ಕಂಪನಿಗಳು
ಒಟ್ಟಾರೆ, ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿ, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕ್.


Click it and Unblock the Notifications