ಮಾರುತಿ ಸುಜುಕಿಯಿಂದ ವಾರಂಟಿ, ಉಚಿತ ಸರ್ವೀಸ್ ಗಳ ಅವಧಿಯನ್ನು ಜೂನ್, 2020ರ ತನಕ ವಿಸ್ತರಿಸಲಾಗಿದೆ. ಯಾವ ಮಾಲೀಕರ ಕಾರಿನ ವಾರಂಟಿ, ಸರ್ವೀಸ್ ಅವಧಿ ಮೇ ತಿಂಗಳಿಗೆ ಕೊನೆ ಆಗುತ್ತಿತ್ತೋ ಅಂಥವರಿಗೆ ಜೂನ್ ಕೊನೆಯ ತನಕ ಅವಕಾಶ ನೀಡಲಾಗಿದೆ. ಲಾಕ್ ಡೌನ್ ಕಾರಣಕ್ಕೆ ಯಾರಿಗೆಲ್ಲ ಕಾರಿನ ಸರ್ವೀಸ್ ಮಾಡಿಸಲು ಸಾಧ್ಯವಾಗಿಲ್ಲವೋ ಅಂಥವರೋ ನಿರ್ಬಂಧ ಸಡಿಲಿಕೆ ನಂತರ ಮಾಡಿಸಬಹುದು ಎಂದು ತಿಳಿಸಲಾಗಿದೆ
ಮೊದಲ ಬಾರಿಗೆ ಮಾರ್ಚ್ 25ನೇ ತಾರೀಕು ಲಾಕ್ ಡೌನ್ ವಿಧಿಸಲಾಗಿತ್ತು. ಮಾರ್ಚ್ 15ರಿಂದ 25ರ ಮಧ್ಯೆ ವಾರಂಟಿ ಮುಗಿಯುವ ವಾಹನಗಳಿಗೆ ಜೂನ್ ತಿಂಗಳ ಕೊನೆ ತನಕ ಅವಧಿ ವಿಸ್ತರಿಸಲಾಗಿದೆ. ಅದೇ ಉಚಿತ ಸರ್ವೀಸ್ ಗಳಿಗೆ ಕೂಡ ಅನ್ವಯ ಆಗುತ್ತದೆ ಎಂದು ತಿಳಿಸಲಾಗಿದೆ.
ಎಚ್ ಡಿಎಫ್ ಸಿ ಬ್ಯಾಂಕ್ ಜತೆಗೆ ಸಹಭಾಗಿತ್ವದಲ್ಲಿ ಮಾರುತಿ ಸುಜುಕಿಯಿಂದ ಕಾರು ಖರೀದಿಗೆ ಉತ್ತಮ ಹಣಕಾಸು ಯೋಜನೆಯೊಂದಿಗೆ ಸಾಲ ನೀಡಲಾಗುತ್ತಿದೆ. ಪ್ರತಿ ವರ್ಷವೂ ಮೂರು ಇಎಂಐ ಕಡಿಮೆ ಇರುತ್ತದೆ. ಅದೇ ರೀತಿ ಶೇಕಡಾ ನೂರರಷ್ಟು ಅನ್ ರೋಡ್ ಸಾಲ ಯೋಜನೆ, ಮೊದಲ ಆರು ತಿಂಗಳಿಗೆ ಪ್ರತಿ ಲಕ್ಷ ರುಪಾಯಿಗೆ 899 ರುಪಾಯಿಯಿಂದ ಇಎಂಐ... ಈ ರೀತಿಯ ಯೋಜನೆಗಳನ್ನು ಘೋಷಿಸಿದೆ.

2010ರ ಮಟ್ಟಕ್ಕೆ ಕಾರು ಮಾರಾಟದ ಪ್ರಮಾಣವು ಕುಸಿಯಬಹುದು ಎಂದು ಕ್ರಿಸಿಲ್ ರೇಟಿಂಗ್ ತಿಳಿಸಿದೆ. ಕೊರೊನಾ ಕಾರಣಕ್ಕೆ ಘೋಷಿಸಿದ್ದ ಲಾಕ್ ಡೌನ್ ನಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಎರಡಂಕಿಯಲ್ಲಿ ಮಾರಾಟ ಪ್ರಮಾಣವು ಕುಸಿಯಲಿದೆ ಎನ್ನುವ ಅಂದಾಜು ಮಾಡಲಾಗಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications