For Quick Alerts
ALLOW NOTIFICATIONS  
For Daily Alerts

1 ವರ್ಷದ ಹಿಂದೆ 460 ರೂಪಾಯಿಯ ಈ ಷೇರು ಈಗ 2,772 ರೂಪಾಯಿ!

|

ಷೇರುಪೇಟೆಯು ಹೂಡಿಕೆದಾರರನ್ನು ಕೆಲವೇ ದಿನಗಳಲ್ಲಿ ಶ್ರೀಮಂತರನ್ನಾಗಿ ಮಾಡಿಬಿಡಬಹುದು, ಅದೇ ರೀತಿಯಲ್ಲಿ ನಷ್ಟದ ತಳ ಮುಟ್ಟಿಸಬಹುದು. ಇತ್ತೀಚಿನ ಕೆಲವು ವಾರಗಳಲ್ಲಿ ಭಾರತೀಯ ಷೇರುಪೇಟೆ ಸತತ ಏರಿಕೆಯೊಂದಿಗೆ ದಾಖಲೆಯ ಮಟ್ಟದತ್ತ ದಾಪುಗಾಲಿಟ್ಟಿದೆ.

 

ಹೂಡಿಕೆದಾರರ ಸಂಪತ್ತನ್ನ ದ್ವಿಗುಣಗೊಳಿಸಿರುವ ಷೇರುಗಳು ಕಡಿಮೆ ಏನಿಲ್ಲ. ಇದೇ ಸಾಲಿನಲ್ಲಿ ಮಾಸ್ಟೆಕ್‌ನ ಷೇರು ಸೇರಿದೆ. ಕೇವಲ ಒಂದು ವರ್ಷದ ಹಿಂದೆ ಮಾಸ್ಟೆಕ್‌ನ ಷೇರು 461 ರೂಪಾಯಿನಷ್ಟಿತ್ತು. ಆದರೆ ಈಗ ಅದು ಬರೋಬ್ಬರಿ 2,772 ರೂಪಾಯಿಗೆ ಏರಿಕೆಯಾಗಿದೆ.

ಗರಿಷ್ಠ ಮಟ್ಟ ತಲುಪಿದ ಮಾಸ್ಟೆಕ್

ಗರಿಷ್ಠ ಮಟ್ಟ ತಲುಪಿದ ಮಾಸ್ಟೆಕ್

ಹೌದು ಕಳೆದ 52 ವಾರಗಳಲ್ಲಿ ಈ ಷೇರಿನ ಬೆಲೆ ಗರಿಷ್ಠ ಮಟ್ಟವನ್ನ ತಲುಪಿಬಿಟ್ಟಿದೆ. 461 ರೂ.ಗಳಿಂದ 2,772 ರೂಪಾಯಿ ತಲುಪಿರುವ ಈ ಷೇರು ಹೂಡಿಕೆದಾರರಿಗೆ ಶೇಕಡಾ 501ರಷ್ಟು ಲಾಭವನ್ನ ನೀಡಿದೆ.

1 ಲಕ್ಷ ರೂ. ಹೂಡಿಕೆ ಮಾಡಿದ್ದರೆ 5 ಲಕ್ಷ ರೂಪಾಯಿ ಆಗುತ್ತಿತ್ತು!

1 ಲಕ್ಷ ರೂ. ಹೂಡಿಕೆ ಮಾಡಿದ್ದರೆ 5 ಲಕ್ಷ ರೂಪಾಯಿ ಆಗುತ್ತಿತ್ತು!

ಮಾಸ್ಟೆಕ್‌ನಲ್ಲಿ ಹೂಡಿಕೆದಾರರು 1 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದರೆ, ಇಂದು ಅದು 6 ಲಕ್ಷ ರೂ. ತಲುಪಲಿತ್ತು. ಅಂದರೆ ನಿಮ್ಮ ಹೂಡಿಕೆಯ ಐದು ಪಟ್ಟು ಇಂದು ರಿಟರ್ನ್‌ ಸಿಗುತ್ತಿತ್ತು.

ಎಲ್‌ಐಸಿ ಆಧಾರ್ ಶಿಲಾ ಯೋಜನೆ: ಪ್ರತಿದಿನ 29 ರೂ. ಉಳಿತಾಯ ಮಾಡಿ, 4 ಲಕ್ಷ ರೂಪಾಯಿ ರಿಟರ್ನ್

ಕಳೆದ ಆರು ತಿಂಗಳಿನಲ್ಲಿ ಭರ್ಜರಿ ಲಾಭ
 

ಕಳೆದ ಆರು ತಿಂಗಳಿನಲ್ಲಿ ಭರ್ಜರಿ ಲಾಭ

ಮಾಸ್ಟೆಕ್ 6 ತಿಂಗಳಲ್ಲಿಯೂ ಹೂಡಿಕೆದಾರರಿಗೆ ಭಾರಿ ಆದಾಯವನ್ನು ನೀಡಿದೆ. ಕಳೆದ 6 ತಿಂಗಳಲ್ಲಿ ಈ ಷೇರು 1115 ರೂ.ಗಳಿಂದ 2772 ರೂ.ಗೆ ಏರಿದೆ. ಅಂದರೆ, ಹೂಡಿಕೆದಾರರು ಈ ಷೇರುಗಳಿಂದ 148% ಕ್ಕಿಂತ ಹೆಚ್ಚಿನ ಲಾಭವನ್ನು ನೀಡಿದ್ದಾರೆ. ಅಂದರೆ, ಮಾಸ್ಟೆಕ್ 6 ತಿಂಗಳಲ್ಲಿಯೂ ಸಹ ಹೂಡಿಕೆದಾರರ ಹಣವನ್ನು ಸುಮಾರು ಎರಡೂವರೆ ಪಟ್ಟು ಹೆಚ್ಚಿಸಿದೆ.

ಬ್ಯಾಂಕ್‌ಗಳ ಫಿಕ್ಸೆಡ್ ಡೆಪಾಸಿಟ್‌ಗಿಂತ ಹೆಚ್ಚಿನ ಬಡ್ಡಿ ಇಲ್ಲಿ ಸಿಗುತ್ತೆ: 5 ವರ್ಷಕ್ಕೆ 6 ಲಕ್ಷ ರೂ. ಬಡ್ಡಿ ಹಣ

ಮಾಸ್ಟೆಕ್‌ನ ಷೇರು 2,950 ರೂಪಾಯಿವರೆಗೆ ತಲುಪಬಹುದು!

ಮಾಸ್ಟೆಕ್‌ನ ಷೇರು 2,950 ರೂಪಾಯಿವರೆಗೆ ತಲುಪಬಹುದು!

ಮಾಸ್ಟೆಕ್‌ನ ಷೇರು 2,950 ರೂ.ಗಳವರೆಗೆ ಹೋಗಬಹುದು ಎಂದು ಷೇರುಪೇಟೆ ತಜ್ಞರು ಅಂದಾಜಿಸಲಾಗಿದೆ. ಇದು 2737 ರೂ.ಗಳ ಮಟ್ಟವನ್ನು ಮುಟ್ಟಿದ ನಂತರ ಸ್ವಲ್ಪ ಕುಸಿತದೊಂದಿಗೆ, ನಂತರ 2,950 ರೂ.ವರೆಗೆ ತಲುಪಬಹುದು.

ಮಾಸ್ಟೆಕ್‌ ಭಾರತೀಯ ತಂತ್ರಜ್ಞಾನ ಕಂಪನಿ

ಮಾಸ್ಟೆಕ್‌ ಭಾರತೀಯ ತಂತ್ರಜ್ಞಾನ ಕಂಪನಿ

ಮಾಸ್ಟೆಕ್‌ನ ಪ್ರಸ್ತುತ ಮಾರುಕಟ್ಟೆ ಬಂಡವಾಳೀಕರಣವು ಸುಮಾರು 6,915.5 ಕೋಟಿ ರೂ. ನಷ್ಟಿದೆ. ಮಾಸ್ಟೆಕ್ ಭಾರತೀಯ ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿಯಾಗಿದ್ದು, ಯುಕೆ, ಯುಎಸ್ ಮತ್ತು ಭಾರತದಲ್ಲಿನ ದೊಡ್ಡ ಖಾಸಗಿ ಮತ್ತು ಸರ್ಕಾರಿ ಉದ್ಯಮಗಳಿಗೆ ಉದ್ಯಮ ಮಟ್ಟದ ಡಿಜಿಟಲ್ ಪರಿವರ್ತನೆ ಸೇವೆಗಳು ಮತ್ತು ಸಾಫ್ಟ್‌ವೇರ್ ಅನ್ನು ನೀಡುತ್ತದೆ. ಮಾಸ್ಟೆಕ್ ಯುಕೆ, ಯುಎಸ್ ಮತ್ತು ಭಾರತದ 11 ಕಚೇರಿಗಳಲ್ಲಿ 2,200 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.

English summary

Mastek Share Price Hits New Record High: Share Price

Mastek shares hit a new life high after rallying over 4 per cent to Rs 2,600 on the BSE
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X