ನವದೆಹಲಿ, ಜುಲೈ 25: ಮ್ಯಾಕ್ಸ್ ಬುಪಾ ಹೆಲ್ತ್ ಇನ್ಸುರೆನ್ಸ್ ಈಗ ನಿವಾ ಬುಪಾ ಎಂದು ಮರು ಬ್ರಾಂಡ್ ಆಗಿದೆ. ಟ್ರೂ ನಾರ್ಥ್ ಮತ್ತು ಬುಪಾ ಬೆಂಬಲ ಪಡೆದ ಮರು ರೂಪಿಸಲಾದ ಬ್ರಾಂಡ್ - ನಿವಾ ಬುಪಾ ಗ್ರಾಹಕರ ಟಚ್ ಪಾಯಿಂಟ್‍ಗಳಿಗೆ ಹೆಚ್ಚು ಆದ್ಯತೆ ನೀಡುವ ಮೂಲಕ ಮತ್ತು ಆವಿಷ್ಕಾರಕ ಉತ್ಪನ್ನಗಳ ಪರಿಚಯ ಮತ್ತು ಡಿಜಿಟಲಿ ಸನ್ನದ್ಧ ಸೇವೆಗಳ ಮೂಲಕ ಆರೋಗ್ಯವಿಮಾ ಸೇವೆಯನ್ನು ಪ್ರಜಾಸತ್ತೀಯಗೊಳಿಸಲಿದೆ. ನಿವಾ ಬುಪಾ ಹೆಲ್ತ್ ಇನ್ಸುರೆನ್ಸ್ ತನ್ನ ಗ್ರಾಹಕರಿಗೆ ಹಣಕಾಸಿನ ಭರವಸೆ ಅಲ್ಲದೆ ಆರೋಗ್ಯಸೇವಾ ಲಭ್ಯತೆಯನ್ನು ನೀಡಲಿದ್ದು ಇದರ ಉತ್ಪನ್ನದ ಆವಿಷ್ಕಾರ, ಗ್ರಾಹಕ ಕೇಂದ್ರಿಯ ಮತ್ತು ಡಿಜಿಟಲ್ ಸಾಮರ್ಥ್ಯದ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯಲಿದೆ.
ಷೇರ್ ಹೋಲ್ಡಿಂಗ್ ವಿಧಾನದಲ್ಲಿ ಬದಲಾವಣೆಯ ಹಿನ್ನೆಲೆಯಲ್ಲಿ ಮ್ಯಾಕ್ಸ್ ಇಂಡಿಯಾ ನಿರ್ಗಮನದೊಂದಿಗೆ ಮತ್ತು ಖಾಸಗಿ ಈಕ್ವಿಟಿ ಸಂಸ್ಥೆ ಟ್ರೂ ನಾರ್ಥ್ ಪ್ರವೇಶದೊಂದಿಗೆ ಮ್ಯಾಕ್ಸ್ ಬುಪಾ ಈ ಪರಿವರ್ತನೆಯ ಭಾಗವಾಗಿ ಹೊಸ ಬ್ರಾಂಡ್ ಗುರುತನ್ನು ಸೃಷ್ಟಿಸುವ ಅಗತ್ಯವಿದೆ. ಕಂಪನಿಯು ತನ್ನನ್ನು ತಾನು ಮರು ವ್ಯಾಖ್ಯಾನಿಸಿಕೊಳ್ಳಲು ಈ ಅವಕಾಶವನ್ನು ಬಳಸಲು ನಿರ್ಧರಿಸಿದೆ. ಕಠಿಣವಾದ ಗ್ರಾಹಕರ ಪರೀಕ್ಷೆ ಮತ್ತು ಒಳನೋಟಗಳ ನಂತರ ಕಂಪನಿಯು ಮ್ಯಾಕ್ಸ್ ಬುಪಾಗೆ ಹೊಸ ಹೆಸರಾಗಿ ''ನಿವಾ ಬುಪಾ'' ವನ್ನು ನಿರ್ಧರಿಸಿತು.
ಹೊಸ ಬ್ರಾಂಡ್ ಹೆಸರಿನ ನಿರ್ಧಾರವು ಪ್ರಸ್ತುತ ಇರುವ ಅಥವಾ ಮೊದಲ ಸಲದ ಆರೋಗ್ಯ ವಿಮಾ ಉತ್ಪನ್ನಗಳನ್ನು ಕೊಳ್ಳುವ ಹೊಸ ತಲೆಮಾರಿನ ಮಿಲೆನಿಯಲ್‍ಗಳು ಮತ್ತು ಮಧ್ಯ-ವಯಸ್ಸಿನ ಗ್ರಾಹಕರ ಸಮೀಕ್ಷೆ ಮತ್ತು ಆಳವಾದ ಸಂದರ್ಶನಗಳನ್ನು ಆಧರಿಸಿದೆ. ನಿವಾ ಎಂಬ ಪದವನ್ನು ಸಂಸ್ಕೃತ ಪದ ಸೂರ್ಯ'ನಿಂದ ಪಡೆಯಲಾಗಿದ್ದು ಅದರ ಅರ್ಥ ಭರವಸೆ, ಶಕ್ತಿಯ ಮೂಲ ಮತ್ತು ಸಕಾರಾತ್ಮಕತೆಯ ಸಂಕೇತವಾಗಿದೆ. ಈ ಬ್ರಾಂಡ್ ಆರೋಗ್ಯದ ಕುರಿತು ಕಾಳಜಿಯ ಉತ್ತಮ ನಾಳೆಯನ್ನು ನಿರ್ಮಿಸುವುದರಲ್ಲಿ ನಂಬಿಕೆ ಇರಿಸಿದ ಜನರಿಗಾಗಿ ತನ್ನನ್ನು ತಾನು ಮರು ರೂಪಿಸಿಕೊಂಡಿದೆ.

ಭಾರತೀಯ ಮಾರುಕಟ್ಟೆಯನ್ನು ಮತ್ತು ಗ್ರಾಹಕರ ವೈವಿಧ್ಯಮಯ ಆರೋಗ್ಯಸೇವೆಯ ಅಗತ್ಯಗಳನ್ನು ಅರ್ಥ ಮಾಡಿಕೊಂಡಿರುವುದನ್ನು ಅನುಷ್ಠಾನಗೊಳಿಸುವ ನಿವಾ ಬುಪಾ ಗ್ರಾಹಕರಲ್ಲಿ ಆರೋಗ್ಯ ವಿಮೆಯ ವಿಭಾಗವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವಂತೆ ಸರಳೀಕರಿಸುತ್ತದೆ. ಇದು ದೇಶದ ಲಕ್ಷಾಂತರ ಜನರಿಗೆ ಈ ವರ್ಗದ ಅತ್ಯುತ್ತಮ ಆರೋಗ್ಯಸೇವೆಗೆ ಲಭ್ಯತೆ ದೊರೆಯುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕಂಪನಿಯು ತನ್ನ ಗ್ರಾಹಕರನ್ನು ಡಿಜಿಟಲಿ ಬೆಂಬಲಿತ ಅರ್ಥಪೂಣ್ ಸಾಧನಗಳೊಂದಿಗೆ ಸನ್ನದ್ಧಗೊಳಿಸಲಿದ್ದು ಅವರ ಆರೋಗ್ಯ ಮತ್ತು ಸೌಖ್ಯದ ಮೇಲೆ ಹೆಚ್ಚಿನ ನಿಯಂತ್ರಣ ಸಾಧ್ಯವಾಗಿಸುತ್ತದೆ.
ಹೊಸ ಬ್ರಾಂಡ್ ಗುರುತಿನ ಕುರಿತು ಮಾತನಾಡಿದ ನಿವಾ ಬುಪಾದ ಎಂ.ಡಿ. ಮತ್ತು ಸಿಇಒ ಶ್ರೀ ಕೃಷ್ಣನ್ ರಾಮಚಂದ್ರನ್, ''ನಮ್ಮ ಪ್ರಗತಿಯ ಪ್ರಯಾಣದಲ್ಲಿ ಹೊಸ ಮತ್ತು ಉತ್ಸಾಹಕರ ಅಧ್ಯಾಯ ಪ್ರಾರಂಭಿಸಲು ಬಹಳ ಥ್ರಿಲ್ ಆಗಿದ್ದೆವೆ. 2019ರಲ್ಲಿ ಮ್ಯಾಕ್ಸ್ ಇಂಡಿಯಾದಿಂದ ಟ್ರೂ ನಾರ್ಥ್‍ಗೆ ಮ್ಯಾಕ್ಸ್ ಬುಪಾ ಷೇರುದಾರರ ಬದಲಾವಣೆಯ ಹಿನ್ನೆಲೆಯಲ್ಲಿ ನಾವು ಈಗ ನಿವಾ ಬುಪಾ ಎಂದು ಹೊಸ ಬ್ರಾಂಡ್ ಗುರುತಿನೊಂದಿಗೆ ಸನ್ನದ್ಧವಾಗಿದ್ದೇವೆ. ಹೊಸ ಬ್ರಾಂಡ್ ಭಾರತದಲ್ಲಿ ಲಕ್ಷಾಂತರ ಮಂದಿಯ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ಪೂರೈಸುವ ಹಣಕಾಸು ಸೇವೆಗಳು ಮತ್ತು ಆರೋಗ್ಯಸೇವೆಗಳ ಛೇದನದಲ್ಲಿ ದೃಢವಾಗಿ ನಿಂತಿದ್ದೇವೆ. ಆರೋಗ್ಯವಿಮಾ ಕ್ಷೇತ್ರವು ಮಹತ್ತರ ಪ್ರಗತಿಗೆ ಸನ್ನದ್ಧವಾಗಿದೆ ಮತ್ತು ನಾವು ನಮ್ಮ ಗ್ರಾಹಕರಿಗೆ ರಕ್ಷಣೆ ಮತ್ತು ಆರೈಕೆಯ ನವೀಕರಿಇದ ಭರವಸೆಯೊಂದಿಗೆ ಹೊಸ ಬ್ರಾಂಡ್ ಗುರುತನ್ನು ಪಡೆಯುತ್ತಿದ್ದೇವೆ. ನಿವಾ ಬುಪಾ ಆಗಿ ನಾವು ಗ್ರಾಹಕರ ಕೇಂದ್ರಿತತೆಯ ನಮ್ಮ ಪ್ರಮುಖ ಬ್ರಾಂಡ್ ತತ್ವಗಳನ್ನು ಮತ್ತಷ್ಟು ಸದೃಢಗೊಳಿಸಲು ಎದುರು ನೋಡುತ್ತಿದ್ದೇವೆ,'' ಎಂದರು.
ಶ್ರೀ ಕೃಷ್ಣನ್, "ನಾವು ಸದಾ ನಮ್ಮ ಗ್ರಾಹಕರಿಗೆ ವಿಶ್ವಾಸಾರ್ಹ ಆರೋಗ್ಯದ ಪಾಲುದಾರರಾಗಲು ಶ್ರಮಿಸುತ್ತಿದ್ದೇವೆ. ನಮ್ಮ ಹೊಸ ಬ್ರಾಂಡ್ ನಿವಾ ಬುಪಾದ ಅಡಿಯಲ್ಲಿ ನಾವು ನಮ್ಮ ಡಿಜಿಟಲ್ ಮತ್ತು ನೆಟ್‍ವರ್ಕ್ ವ್ಯಾಪ್ತಿಯನ್ನು ವಿಸ್ತರಿಸುವುದನ್ನು ಮುಂದುವರಿಸುತ್ತೇವೆ ಅದು ಯಾವುದೇ ಸಮಯದಲ್ಲಿ, ಎಲ್ಲಿಯೇ ಆಗಲಿ ನಮ್ಮ ಉದ್ಯಮದ ಮುಂಚೂಣಿಯ ಉತ್ಪನ್ನಗಳನ್ನು ಮತ್ತು ಈ ವರ್ಗದ ಅತ್ಯುತ್ತಮ ಸೇವೆಗಳನ್ನು ಪಡೆಯಲು ಅವಕಾಶ ಕಲ್ಪಿಸುತ್ತದೆ" ಎಂದರು.
ನಿವಾ ಬುಪಾ ಹೆಲ್ತ್ ಇನ್ಷೂರೆನ್ಸ್ ಮಾರುಕಟ್ಟೆಯಲ್ಲಿ ಸದೃಢ ಪ್ರಗತಿ ಕಾಪಾಡಿಕೊಳ್ಳುವುದನ್ನು ಮುಂದುವರಿಸಲಿದೆ ಮತ್ತು 2021-22ರ ಹಣಕಾಸು ವರ್ಷದಲ್ಲಿ ರೂ.2,500 ಕೋಟಿಯ ಕಂಪನಿಯಾಗುವ ಗುರಿ ಹೊಂದಿದೆ. ಕಂಪನಿಯು 2025ರ ಹಣಕಾಸು ವರ್ಷಕ್ಕೆ ಭಾರತದಲ್ಲಿ 12 ಮಿಲಿಯನ್ ಜನರನ್ನು ಆರೋಗ್ಯವಿಮೆಯ ವ್ಯಾಪ್ತಿಗೆ ತರಲಿದೆ.
''ನಮ್ಮ ಹೆಸರನ್ನು ಮ್ಯಾಕ್ಸ್ ಬುಪಾ ಹೆಲ್ತ್ ಇನ್ಸುರೆನ್ಸ್ ಕಂಪನಿ ಲಿಮಿಟೆಡ್‍ನಿಂದ ನಿವಾ ಬುಪಾ ಹೆಲ್ತ್ ಇನ್ಸುರೆನ್ಸ್ ಕಂಪನಿ ಲಿಮಿಟೆಡ್ ಆಗಿ ಜುಲೈ 5, 2021ರಿಂದ ಬದಲಾಗಿದೆ. ಮುಂದಿನ ಹೆಜ್ಜೆಗಳಾಗಿ ನಾವು ವರ್ಷಾಂತ್ಯಕ್ಕೆ ನಮ್ಮ ಬ್ರಾಂಡ್ ಪರಿವರ್ತನೆ ಪೂರ್ಣಗೊಳಿಸಲು ನಮ್ಮ ಎಲ್ಲ ಗ್ರಾಹಕರು ಮತ್ತು ವಿವಿಧ ಪಾಲುದಾರರೊಂದಿಗೆ ಕೆಲಸ ಮಾಡಲಿದ್ದೇವೆ. ಇದು ನಮ್ಮ ಎಲ್ಲ ಗ್ರಾಹಕ ಮತ್ತು ಪಾಲುದಾರರ ಹೊಣೆಗಾರಿಕೆಗಳಲ್ಲಿ ಪ್ರತಿಫಲನಗೊಳ್ಳಲಿದೆ. ನಮ್ಮ ಉದ್ಯಮದ ಮೂಲಭೂತ ಅಂಶಗಳು ಬದಲಾಗುವುದಿಲ್ಲ ಮತ್ತು ಈ ಪರಿವರ್ತನೆಯು ನಮ್ಮ ಗ್ರಾಹಕರು ಹಾಗೂ ಪಾಲುದಾರರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಾವು ಬದಲಾವಣೆಯನ್ನು ಅಪ್ಪಿಕೊಳ್ಳಲು ಸಿದ್ಧವಾಗಿದ್ದೇವೆ ಮತ್ತು ಈ ವಿಭಾಗಕ್ಕೆ ಹೊಸ ದೃಷ್ಟಿಕೋನ ಮತ್ತು ಹೊಸ ಹೊರನೋಟ ತರಲು ಸಜ್ಜಾಗಿದ್ದೇವೆ'' ಎಂದರು.


Click it and Unblock the Notifications