7 ಕಂಪನಿಗಳಿಗೆ 1.16 ಟ್ರಿಲಿಯನ್ ನಷ್ಟ!, ರಿಲಯನ್ಸ್ ಮೌಲ್ಯ ಕುಸಿತ

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಕಳೆದ ವಾರ(ಅ.2ರ ತನಕ) 7 ಕಂಪನಿಗಳ ಮೌಲ್ಯ ಭಾರಿ ಕುಸಿತ ಕಂಡಿದ್ದು, 3 ಕಂಪನಿಗಳು ಮೌಲ್ಯ ಹೆಚ್ಚಿಸಿಕೊಂಡಿವೆ. 7 ಕಂಪನಿಗಳು 1,16,053.13 ಕೋಟಿ ರು ಕಳೆದುಕೊಂಡಿವೆ. ದೇಶದ ಅತಿದೊಡ್ಡ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್ ಕಳೆದ ವಾರ ಭಾರಿ ನಷ್ಟ ಅನುಭವಿಸಿದ ಸಂಸ್ಥೆ ಎನಿಸಿಕೊಂಡಿದೆ.

ಕಳೆದ ವಾರ, ಬೆಂಚ್‌ಮಾರ್ಕ್ 30 ಷೇರು ಬಿಎಸ್‌ಇ ಸೆನ್ಸೆಕ್ಸ್ 741.87 ಪಾಯಿಂಟ್‌ಗಳು ಅಥವಾ ಶೇಕಡಾ 1.26 ಇಳಿಕೆ ಕಂಡಿದೆ. ಸೆನ್ಸೆಕ್ಸ್ 672 ಅಂಕಗಳು ಅಥವಾ ಶೇ 1.15 ಅಂಕಗಳು ಕಡಿಮೆಯಾಗಿದೆ. ಹಿಂದೂಸ್ತಾನ್ ಯೂನಿ ಲಿವರ್ ಲಿಮಿಟೆಡ್, ಇನ್ಫೋಸಿಸ್ ಹಾಗೂ ಟಿಸಿಎಸ್ ಹೊರತಪಡಿಸಿ ಟಾಪ್ 10 ಪಟ್ಟಿಯಲ್ಲಿರುವ ಮಿಕ್ಕ ಎಲ್ಲಾ ಸಂಸ್ಥೆಗಳ ಮಾರುಕಟ್ಟೆ ಮೌಲ್ಯ ಭಾರಿ ಕುಸಿತ ಕಂಡಿದೆ.

ಕಳೆದ ವಾರದಲ್ಲಿ ಹೂಡಿಕೆದಾರರು ಸುರಕ್ಷೆಯ ವಿಧಾನ ಅನುಸರಿಸಿ, ಹೆಚ್ಚಿನ ಹೂಡಿಕೆಗೆ ಮುಂದಾಗಿಲ್ಲದ ಕಾರಣ 7 ಕಂಪನಿಗಳು ನಷ್ಟ ಅನುಭವಿಸಿವೆ. ಯಾವ ಕಂಪನಿ ಮೌಲ್ಯ ಎಷ್ಟಾಗಿದೆ ಎಂಬ ವಿವರ ಮುಂದೆ ಓದಿ..

ಯಾವ ಕಂಪನಿ ಟಾಪ್ 10ರಿಂದ ಹೊರಕ್ಕೆ

ಯಾವ ಕಂಪನಿ ಟಾಪ್ 10ರಿಂದ ಹೊರಕ್ಕೆ

ರಷ್ಯಾ- ಉಕ್ರೇನ್ ಯುದ್ಧದ ನಡುವೆ ಜಾಗತಿಕ ಮಾರುಕಟ್ಟೆ ಏರಿಳಿತ ಕಾಣುತ್ತಿದ್ದು, ಜಾಗತಿಕವಾಗಿ ಅನೇಕ ದೇಶಗಳಲ್ಲಿನ ಬ್ಯಾಂಕ್ ಬಡ್ಡಿದರ ಏರಿಕೆ, ಆಮದು -ರಫ್ತು ನಿರ್ಬಂಧ ಮುಂತಾದ ವಿದ್ಯಮಾನ ಎಲ್ಲದರ ಪರಿಣಾಮ ಸ್ಥಳೀಯ ಮಾರುಕಟ್ಟೆಯಲ್ಲಿ ಭಾರಿ ವ್ಯತ್ಯಾಸ ಕಂಡಿವೆ. ರಿಲಯನ್ಸ್ ಇಂಡಸ್ಟ್ರೀಸ್, ಎಚ್ ಡಿ ಎಫ್ ಸಿ, ಐಸಿಐಸಿಐ ಬ್ಯಾಂಕ್, ಎಸ್ ಬಿಐ, ಭಾರ್ತಿ ಏರ್ ಟೆಲ್, ಬಜಾಜ್ ಫೈನಾನ್ಸ್ ಹಾಗೂ ಎಚ್ ಡಿ ಎಫ್ ಸಿ ಭಾರಿ ನಷ್ಟ ಅನುಭವಿಸಿವೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಮೌಲ್ಯ 41, 706.05ಕೋಟಿ ರು ಕುಸಿತ ಕಂಡು 16,08,601.0 ಕೋಟಿ ರು ತಲುಪಿದೆ. ಇದೇ ವೇಳೆ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) 17,313.74 ಕೋಟಿ ರು ವ್ಯತ್ಯಾಸ ಕಂಡು 4,73,941.51 ಕೋಟಿ ರು ತಲುಪಿದೆ. ಐಸಿಐಸಿಐ ಬ್ಯಾಂಕ್ 13,806.39 ಕೋಟಿ ರು ಕುಸಿತ ಕಂಡು 6,01,156.60 ಕೋಟಿ ರು ತಲುಪಿದೆ

ಎಚ್ ಡಿ ಎಫ್ ಸಿ ಬ್ಯಾಂಕ್

ಎಚ್ ಡಿ ಎಫ್ ಸಿ ಬ್ಯಾಂಕ್

ಎಚ್ ಡಿ ಎಫ್ ಸಿ ಬ್ಯಾಂಕ್ 13,423.6 ಕೋಟಿ ರು ಇಳಿಕೆ ಕಂಡು 7,92,270.97 ಕೋಟಿ ರು ತಲುಪಿದೆ. ಎಚ್ ಡಿ ಎಫ್ ಸಿ 10,830.97 ಕೋಟಿ ರು ಇಳಿಕೆ ಕಂಡು 4,16,077.03 ಕೋಟಿ ರು ತಲುಪಿದೆ.

ಭಾರ್ತಿ ಏರ್ ಟೆಲ್

ಭಾರ್ತಿ ಏರ್ ಟೆಲ್

ಬಜಾಜ್ ಫೈನಾನ್ಸ್ ಸಂಸ್ಥೆ 10,240.83 ಕೋಟಿ ರು ಇಳಿಕೆ ಕಂಡು 4,44,236.73 ಕೋಟಿ ರು ಮುಟ್ಟಿದೆ. ಭಾರ್ತಿ ಏರ್ ಟೆಲ್ ಮೌಲ್ಯ 8,731.55 ಕೋಟಿ ರು ಕುಸಿತ ಕಂಡು 4,44,919.45 ಕೋಟಿ ರು ಆಗಿದೆ.

ಇನ್ಫೋಸಿಸ್ ಮೌಲ್ಯ

ಇನ್ಫೋಸಿಸ್ ಮೌಲ್ಯ

ದೇಶದ ಎರಡನೇ ಅತಿದೊಡ್ಡ ಐಟಿ ಸಂಸ್ಥೆ ಇನ್ಫೋಸಿಸ್ ಮೌಲ್ಯ 20,144.57 ಕೋಟಿ ರು ಏರಿಕೆ ಕಂಡು 5,94,608.11ಕೋಟಿ ರು ಮುಟ್ಟಿದೆ. ದೇಶದ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮೌಲ್ಯ 7,976.74 ಕೋಟಿ ರು ಹೆಚ್ಚಳ ಕಂಡು 10,99,398.58ಕೋಟಿ ರು ಮುಟ್ಟಿದೆ

ಹಿಂದೂಸ್ತಾನ್ ಯೂನಿಲಿವರ್

ಹಿಂದೂಸ್ತಾನ್ ಯೂನಿಲಿವರ್

ಹಿಂದೂಸ್ತಾನ್ ಯೂನಿಲಿವರ್ ಸಂಸ್ಥೆ ಮೌಲ್ಯ 4,123.53 ಕೋಟಿ ರು ಏರಿಕೆ ಕಂಡು 6,33,649.52 ಕೋಟಿ ರು ತಲುಪಿದೆ. ಆಗಸ್ಟ್ 30ರಂದು ಷೇರುಪೇಟೆಗೆ ಎಂಟ್ರಿ ಕೊಟ್ಟ ಅದಾನಿ ಟ್ರಾನ್ಸ್ ಮಿಷನ್ ಟಾಪ್ 10 ಅತಿ ಹೆಚ್ಚು ಮೌಲ್ಯಯುತ ಕಂಪನಿಗಳ ಪಟ್ಟಿಯಿಂದ ಹೊರಗುಳಿದಿದೆ.

ಟಾಪ್ 10 ಕಂಪನಿಗಳು

ಟಾಪ್ 10 ಕಂಪನಿಗಳು

ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್ ಮತ್ತೊಮ್ಮೆ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್ ಡಿ ಎಫ್ ಸಿ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್, ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಭಾರ್ತಿ ಏರ್ ಟೆಲ್, ಬಜಾಜ್ ಫೈನಾನ್ಸ್ ಹಾಗೂ ಎಚ್ ಡಿ ಎಫ್ ಸಿ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+