ಷೇರುಪೇಟೆಯಲ್ಲಿಂದು: ಕಳೆದ ವಾರದ ಟಾಪ್ 10 ಕಂಪನಿಗಳ ಏರಿಳಿತ ಹೇಗಿತ್ತು?

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಕಳೆದ ವಾರ (ಜುಲೈ 31 ತನಕ) ಬಜಾಜ್ ಫೈನಾನ್ಸ್ ಹಾಗೂ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಅತಿ ಹೆಚ್ಚು ಗಳಿಕೆ ಕಂಡಿವೆ. ಸೋಮವಾರದಂದು ಷೇರುಪೇಟೆ ಉತ್ತಮ ಆರಂಭ ಪಡೆದುಕೊಂಡಿದ್ದು, ಟಾಪ್ 10 ಕಂಪನಿಗಳ ಮೌಲ್ಯ ಹಾಗೂ ಷೇರುಗಳ ಏರಿಳಿತ ಆಗಸ್ಟ್ 1ರಂದು ಹೇಗಿತ್ತು ಎಂಬ ವಿವರ ಇಲ್ಲಿದೆ...

ಕಳೆದ ವಾರ ಎಲ್ಲಾ ಟಾಪ್ 10 ಕಂಪನಿಗಳಿಂದ ಒಟ್ಟಾರೆ 1,91,622.95ಕೋಟಿ ರು ಮೌಲ್ಯ ಹೆಚ್ಚಳವಾಗಿದೆ. ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ(LIC) ಹಾಗೂ ಹಿಂದೂಸ್ತಾನ್ ಯೂನಿಲಿವರ್ ಹೆಚ್ಚು ನಷ್ಟ ಅನುಭವಿಸಿದೆ.

ಈ ವಾರದ ಆರಂಭದ ದಿನದ ಅಂತ್ಯಕ್ಕೆ ಟಾಪ್ 10 ಕಂಪನಿಗಳ ಷೇರುಗಳು ಮೇಲಕ್ಕೇರಿತ್ತಾ? ಅಥವಾ ನೆಲಕಚ್ಚಿತ್ತಾ? ಎಂಬುದರ ವಿವರ ಇಲ್ಲಿ ಕಾಣಬಹುದು. ಆಗಸ್ಟ್ 1ರ ವಹಿವಾಟು ಅಂತ್ಯಕ್ಕೆ ಬಹುತೇಕ ಕಂಪನಿಗಳ ಷೇರು ಮೌಲ್ಯ ಏರುಪೇರಾಗಿವೆ.

ಕಳೆದ ವಾರದಲ್ಲಿ ಹೂಡಿಕೆದಾರರು ಸುರಕ್ಷೆಯ ವಿಧಾನ ಅನುಸರಿಸಿ, ಹೆಚ್ಚಿನ ಹೂಡಿಕೆಗೆ ಮುಂದಾದರು. ಯಾವ ಕಂಪನಿ ಮೌಲ್ಯ ಎಷ್ಟಾಗಿದೆ ಎಂಬ ವಿವರ ಮುಂದೆ ಓದಿ...

ಟಾಟಾ ಕನ್ಸಲ್ಟೆನ್ಸಿ ಸರ್ವೀಸ್

ಟಾಟಾ ಕನ್ಸಲ್ಟೆನ್ಸಿ ಸರ್ವೀಸ್

ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ 47,494.49 ಕೋಟಿ ರು ಏರಿಕೆ ಕಂಡು 12,07,779.68 ಕೋಟಿ ರು ಮೌಲ್ಯಕ್ಕೇರಿದೆ. ಆಗಸ್ಟ್ 1ರಂದು ಬಿಎಸ್ಇಯಲ್ಲಿ ಟಿಸಿಎಸ್ ಷೇರುಗಳು 1.60 ರು ಕಳೆದುಕೊಂಡು 3,299 ರು ಹಾಗೂ ಎನ್ಎಸ್ಇಯಲ್ಲಿ 3.10 ರು ಕಳೆದುಕೊಂಡು 3,298.80 ರು ತಲುಪಿದೆ.

ಬಜಾಜ್ ಫೈನಾನ್ಸ್ ಮೌಲ್ಯ 57,673.19 ಕೋಟಿ ರು ಏರಿಕೆ ಕಂಡು 4,36,447.88 ಕೋಟಿ ರು ಗೇರಿದೆ. ಅ.1ರಂದು ಬಿಎಸ್ಇಯಲ್ಲಿ 51.55 ರು ಏರಿಕೆ ಕಂಡು 7,260.45 ರು ಹಾಗೂ ಎನ್ಎಸ್ಇಯಲ್ಲಿ 51.90 ರು ಹೆಚ್ಚಳ ಕಂಡು 7,261ರು ಆಗಿದೆ.

 

ಇನ್ಫೋಸಿಸ್ ಸಂಸ್ಥೆ

ಇನ್ಫೋಸಿಸ್ ಸಂಸ್ಥೆ

ಎಚ್ ಡಿ ಎಫ್ ಸಿ ಬ್ಯಾಂಕ್ ಮೌಲ್ಯ 23,481.09 ಕೋಟಿ ರು ಕುಗ್ಗಿ 7,97,251.18 ಕೋಟಿ ರು ಆಗಿದೆ. ಆಗಸ್ಟ್ 1ರಂದು ಬಿಎಸ್ಇಯಲ್ಲಿ ಸಂಸ್ಥೆ ಷೇರುಗಳು 10.70 ರು ಹೆಚ್ಚಳಕೊಂಡು 1,445.15 ರು ಹಾಗೂ ಎನ್ಎಸ್ಇಯಲ್ಲಿ 11.95 ರು ಏರಿಕೆಕೊಂಡು 1,446.15 ರು ತಲುಪಿದೆ.


ದೇಶದ ಎರಡನೇ ಅತಿ ದೊಡ್ಡ ಸಂಸ್ಥೆ ಇನ್ಫೋಸಿಸ್ ಸಂಸ್ಥೆ 18,219 ಕೋಟಿ ರು ಏರಿಕೆ ಕಂಡು 6,52,012.91 ಕೋಟಿ ರು ಮೌಲ್ಯ ತಲುಪಿದೆ. ಆಗಸ್ಟ್ 1ರಂದು ಬಿಎಸ್ಇಯಲ್ಲಿಇನ್ಫಿ ಷೇರುಗಳು 1 ರು ಹೆಚ್ಚಳಕೊಂಡು 1,550.60 ರು ಹಾಗೂ ಎನ್ಎಸ್ಇಯಲ್ಲಿ 1.35 ರು ಏರಿಕೆಕೊಂಡು 1,551.05 ರು ತಲುಪಿದೆ.

 

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಖಾಸಗಿ ವಲಯದ ಪ್ರಮುಖ ಹಣಕಾಸು ಸಂಸ್ಥೆ ಎಚ್ ಡಿ ಎಫ್ ಸಿ 14,978.42 ಕೋಟಿ ರು ಏರಿಕೆ ಕಂಡು 4,31,679.65 ಕೋಟಿ ರು ತಲುಪಿದೆ. ಆಗಸ್ಟ್ 1ರಂದು ಬಿಎಸ್ಇಯಲ್ಲಿ ಎಚ್ ಡಿ ಎಫ್ ಸಿ ಷೇರುಗಳು 2.90 ರು ಹೆಚ್ಚಳಕೊಂಡು 2382 ರು ಹಾಗೂ ಎನ್ಎಸ್ಇಯಲ್ಲಿ 5.95 ರು ಏರಿಕೆಕೊಂಡು 2,383.75 ರು ತಲುಪಿದೆ.


ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) 12,940.69 ಕೋಟಿ ರು ವ್ಯತ್ಯಾಸ ಕಂಡು 4,71,397.99 ಕೋಟಿ ರು ಗೇರಿದೆ. ಆಗಸ್ಟ್ 1ರಂದು ಬಿಎಸ್ಇಯಲ್ಲಿ ಎಸ್ ಬಿಐ ಷೇರುಗಳು 5.40 ರು ಹೆಚ್ಚಳಕೊಂಡು 533.60 ರು ಹಾಗೂ ಎನ್ಎಸ್ಇಯಲ್ಲಿ 5.40 ರು ಏರಿಕೆಕೊಂಡು 533.75 ರು ತಲುಪಿದೆ.

 

ರಿಲಯನ್ಸ್ ಇಂಡಸ್ಟ್ರೀಸ್

ರಿಲಯನ್ಸ್ ಇಂಡಸ್ಟ್ರೀಸ್

ಐಸಿಐಸಿಐ ಬ್ಯಾಂಕ್ ಮೌಲ್ಯ 12,873.62 ಕೋಟಿ ರು ಕುಗ್ಗಿ 5,69,400.43 ಕೋಟಿ ರು ಆಗಿದೆ. ಆಗಸ್ಟ್ 1ರಂದು ಬಿಎಸ್ಇಯಲ್ಲಿ ಐಸಿಐಸಿಐ ಷೇರುಗಳು 4.80 ರು ಹೆಚ್ಚಳಕೊಂಡು 823.30 ರು ಹಾಗೂ ಎನ್ಎಸ್ಇಯಲ್ಲಿ 4.80 ರು ಏರಿಕೆಕೊಂಡು 823.49 ರು ತಲುಪಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಮೌಲ್ಯ 3,962.45 ಕೋಟಿ ರು ಏರಿಕೆ ಕಂಡು 16,97,208.18 ಕೋಟಿ ರು ತಲುಪಿದೆ. ಆಗಸ್ಟ್ 1ರಂದು ಬಿಎಸ್ಇಯಲ್ಲಿ ಆರ್ ಐಎಲ್ ಷೇರುಗಳು 66.35 ರು ಹೆಚ್ಚಳಕೊಂಡು 2575.10 ರು ಹಾಗೂ ಎನ್ಎಸ್ಇಯಲ್ಲಿ 65.40 ರು ಏರಿಕೆಕೊಂಡು 2574.85 ರು ತಲುಪಿದೆ.

ಭಾರತೀಯ ಜೀವ ವಿಮಾ ನಿಗಮ

ಭಾರತೀಯ ಜೀವ ವಿಮಾ ನಿಗಮ

ಹಿಂದೂಸ್ತಾನ್ ಯೂನಿಲಿವರ್ ಮೌಲ್ಯ 810.61 ಕೋಟಿ ರು ಕುಗ್ಗಿ 6,19,551.97 ಕೋಟಿ ರು ಆಗಿದೆ. ಆಗಸ್ಟ್ 1ರಂದು ಬಿಎಸ್ಇಯಲ್ಲಿ ಎಚ್ ಯುಎಲ್ ಷೇರುಗಳು 38.20 ರು ಇಳಿಕೆಗೊಂಡು 2598.65 ರು ಹಾಗೂ ಎನ್ಎಸ್ಇಯಲ್ಲಿ 44.40 ರು ಏರಿಕೆಕೊಂಡು 2593 ರು ತಲುಪಿದೆ.

ಇದೇ ವೇಳೆ ಭಾರತೀಯ ಜೀವ ವಿಮಾ ನಿಗಮ(ಎಲ್ಐಸಿ) ದ ಮೌಲ್ಯ 7,020.75 ಕೋಟಿ ರು ಇಳಿಕೆಯಾಗಿ 4,28,739.97 ಕೋಟಿ ರು ತಲುಪಿದೆ. ಆಗಸ್ಟ್ 1ರಂದು ಬಿಎಸ್ಇಯಲ್ಲಿ ಎಲ್ಐಸಿ ಷೇರುಗಳು 5.40 ರು ಹೆಚ್ಚಳಕೊಂಡು 683.25 ರು ಹಾಗೂ ಎನ್ಎಸ್ಇಯಲ್ಲಿ 5.10 ರು ಏರಿಕೆಕೊಂಡು 682.90 ರು ತಲುಪಿದೆ.

ಟಾಪ್ 10 ಕಂಪನಿಗಳು

ಟಾಪ್ 10 ಕಂಪನಿಗಳು

ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್ ಮತ್ತೊಮ್ಮೆ ಅತಿ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ಸಂಸ್ಥೆ ಎನಿಸಿಕೊಂಡಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್ ಡಿಎಫ್ ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಜಾಜ್ ಫೈನಾನ್ಸ್, ಎಚ್ ಡಿ ಎಫ್ ಸಿ ಹಾಗೂ ಎಲ್ಐಸಿ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+