ಪ್ರಮುಖ ಕಂಪನಿಗಳಿಗೆ ಒಂದೇ ವಾರದಲ್ಲಿ 2.85 ಕೋಟಿ ರು ನಷ್ಟ!

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಅನೇಕ ಕಂಪನಿಗಳು ಒಟ್ಟಾರೆ 2,85,251.65 ಕೋಟಿ ರು ಮೌಲ್ಯ ಕಳೆದುಕೊಂಡಿವೆ. ರಷ್ಯಾ- ಉಕ್ರೇನ್ ಯುದ್ಧದ ನಡುವೆ ಜಾಗತಿಕ ಮಾರುಕಟ್ಟೆ ಏರಿಳಿತ ಕಾಣುತ್ತಿದ್ದು, ಇದರ ಪರಿಣಾಮ ಸ್ಥಳೀಯ ಮಾರುಕಟ್ಟೆಯಲ್ಲಿ ಭಾರಿ ವ್ಯತ್ಯಾಸ ಕಂಡಿವೆ. ಕಳೆದ ವಾರ ರಿಲಯನ್ಸ್ ಭಾರಿ ನಷ್ಟ ಅನುಭವಿಸಿದೆ.

ಜಾಗತಿಕ ವಿದ್ಯಮಾನ, ವಿದೇಶಿ ಫಂಡ್ ಹರಿವು, ಎಲ್ಐಸಿ ಐಪಿಒ, ಆರ್ ಬಿಐ ರೆಪೋ ದರ ಏರಿಕೆ ನಂತರದ ಬದಲಾವಣೆಗಳು ಹೆಚ್ಚಿನ ವಹಿವಾಟು ಕಾಣದಂತೆ ಮಾಡಿವೆ. ಕಳೆದ ವಾರ ಟಿಸಿಎಸ್, ಇನ್ಫೋಸಿಸ್ ಭಾರಿ ಲಾಭ ಗಳಿಸಿದರೆ, ಐಸಿಐಸಿಸಿ ಮಾತ್ರ ನಷ್ಟ ಅನುಭವಿಸಿದೆ.

ಕಳೆದ ವಾರ, ಸೆನ್ಸೆಕ್ಸ್ 2,225.29 ಪಾಯಿಂಟ್ ಅಥವಾ 3.89 ಶೇಕಡಾ ಕುಸಿದರೆ, ನಿಫ್ಟಿ 691.30 ಪಾಯಿಂಟ್ ಅಥವಾ 4.04 ಶೇಕಡಾವನ್ನು ಕಳೆದುಕೊಂಡಿತು.

ಕೊರೊನಾವೈರಸ್ ಹೊಸ ರೂಪಾಂತರಿ ಅಲೆಯಿಂದ ಷೇರುಪೇಟೆ ವಹಿವಾಟು ಭಾರಿ ನಷ್ಟ ಅನುಭವಿಸಿದ್ದವು, ಟಾಪ್ ಕಂಪನಿಗಳು ಭಾರಿ ನಷ್ಟ ಅನುಭವಿಸಿದ್ದವು. ಯಾವ ಕಂಪನಿ ಮೌಲ್ಯ ಎಷ್ಟಾಗಿದೆ ಎಂಬ ವಿವರ ಮುಂದೆ ಓದಿ..

ರಿಲಯನ್ಸ್ ಮೌಲ್ಯ ಕುಸಿತ

ರಿಲಯನ್ಸ್ ಮೌಲ್ಯ ಕುಸಿತ

ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ 1,14, 767.5 ಕೋಟಿ ರು ಕಳೆದುಕೊಂಡು 17, 73, 196.68 ಕೋಟಿ ರು ಮೌಲ್ಯ ತಲುಪಿದೆ. ಟಾಪ್ 10 ಮೌಲ್ಯಯುತ ಕಂಪನಿಗಳ ಪೈಕಿ ರಿಲಯನ್ಸ್ ಅತಿ ಹೆಚ್ಚು ನಷ್ಟ ಅನುಭವಿಸಿದೆ. ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ 42, 847.49 ಕೋಟಿ ರು ಕಳೆದುಕೊಂಡು 12,56,152.34 ಕೋಟಿ ರು ಮೌಲ್ಯಕ್ಕೆ ಏರಿದೆ.

ಎಚ್ ಡಿ ಎಫ್ ಸಿ ಬ್ಯಾಂಕ್ ಕುಸಿತ

ಎಚ್ ಡಿ ಎಫ್ ಸಿ ಬ್ಯಾಂಕ್ ಕುಸಿತ

ಇದೇ ವೇಳೆ ಎಚ್‌ಡಿಎಫ್‌ಸಿ ಬ್ಯಾಂಕ್ 36,984.46 ಕೋಟಿ ರು ಮೌಲ್ಯ ಏರಿಕೆ ಕಂಡು 7,31,068.41 ಕೋಟಿ ರು ತಲುಪಿದೆ. ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ 20,558.92 ಕೋಟಿ ರು ಏರಿಕೆ ಕಂಡು 5,05,068.14 ಕೋಟಿ ರು ಮೌಲ್ಯ ಉಳಿಸಿಕೊಂಡಿದೆ.

ಇನ್ಫೋಸಿಸ್

ಇನ್ಫೋಸಿಸ್

ಎಚ್‌ಡಿಎಫ್‌ಸಿ 13,924.03 ಕೋಟಿ ರು ಏರಿಕೆ ಕಂಡು 3,90,045.06 ಕೋಟಿ ರು ತಲುಪಿದೆ. ಇದೇ ವೇಳೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 10,843.4 ಕೋಟಿ ರು ಮೌಲ್ಯ ಏರಿಕೆ ಕಂಡು 4,32,263.56 ಕೋಟಿ ರು ತಲುಪಿದೆ. ದೇಶದ ಎರಡನೇ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ 10,285.69 ಕೋಟಿ ರು ಕುಸಿತ ಕಂಡು 6,49,302.28 ಕೋಟಿ ರು ತಲುಪಿದೆ. ಅದಾನಿ ಗ್ರೀನ್ ಎನರ್ಜಿ 2,322.56 ಕೋಟಿ ರು ಕಳೆದುಕೊಂಡು 4,49, 255.28 ಕೋಟಿ ರು ತಲುಪಿದೆ.

ಟಾಪ್ 10 ಕಂಪನಿಗಳು

ಟಾಪ್ 10 ಕಂಪನಿಗಳು

ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ಐಸಿಐಸಿಐ ಬ್ಯಾಂಕ್, ಅದಾನಿ ಗ್ರೀನ್ ಎನರ್ಜಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಭಾರ್ತಿ ಏರ್ ಟೆಲ್ ಹಾಗೂ ಎಚ್‌ಡಿಎಫ್‌ಸಿ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+