ಕೊರೊನಾಗೆ ಗಿರಗಿರ; 10 ಗ್ರಾಮ್ ಚಿನ್ನಕ್ಕೆ ರು. 43,036, ಬೆಳ್ಳಿಯೂ ದುಬಾರಿ

ದುರ್ಬಲ ರುಪಾಯಿ ಹಾಗೂ ಜಾಗತಿಕ ದರದಲ್ಲಿ ತೀಕ್ಷ್ಣ ಏರಿಕೆ ಪರಿಣಾಮವಾಗಿ ಸೋಮವಾರ ಚಿನ್ನದ ಬೆಲೆಯು ಹೊಸ ಎತ್ತರಕ್ಕೆ ಏರಿದೆ. ಎಂಸಿಎಕ್ಸ್ ನಲ್ಲಿ ಚಿನ್ನದ ಫ್ಯೂಚರ್ಸ್ 0.9% ಏರಿಕೆ ಕಂಡು, 10 ಗ್ರಾಮ್ ಚಿನ್ನಕ್ಕೆ 43,036 ರುಪಾಯಿ ತಲುಪಿದೆ. ಕಳೆದ ವಾರದಲ್ಲಿ 10 ಗ್ರಾಮ್ ಚಿನ್ನಕ್ಕೆ 1800 ರುಪಾಯಿಗೂ ಹೆಚ್ಚು ಏರಿಕೆ ಆಗಿದೆ.

ಇದೇ ವೇಳೆ ಚಿನ್ನದ ಬೆಲೆಯನ್ನು ಅನುಸರಿಸಿ ಬೆಳ್ಳಿ ದರದಲ್ಲೂ ಏರಿಕೆಯಾಗಿದೆ. ಅಮೆರಿಕದ ಡಾಲರ್ ವಿರುದ್ಧ ರುಪಾಯಿ ಮೌಲ್ಯ 71.89ಕ್ಕೆ ಕುಸಿದಿದೆ. ಏಷ್ಯಾದ ಇತರ ದೇಶಗಳ ಮೌಲ್ಯದಂತೆಯೇ ಭಾರತದ ರುಪಾಯಿ ಮೌಲ್ಯ ಕೂಡ ದುರ್ಬಲವಾಗಿದೆ. ಯಾವಾಗ ರುಪಾಯಿ ಮೌಲ್ಯ ಕುಸಿಯುತ್ತದೋ ಆಗ ಭಾರತಕ್ಕೆ ಆಮದಾಗುವ ಚಿನ್ನದ ವೆಚ್ಚ ಹೆಚ್ಚಾಗುತ್ತದೆ. ಏಕೆಂದರೆ ಭಾರತಕ್ಕೆ ಅಗತ್ಯ ಇರುವ ಚಿನ್ನದ ಬಹುಪಾಲು ಪ್ರಮಾಣವನ್ನು ಆಮದು ಮಾಡಿಕೊಳ್ಳಲಾಗುತ್ತದೆ.

ಸ್ಥಳೀಯವಾಗಿ ಚಿನ್ನದ ಬೆಲೆ ನಿರ್ಧರಿಸುವಾಗ ಅದಕ್ಕೆ 12.5% ಆಮದು ಸುಂಕ ಹಾಗೂ 3% ಜಿಎಸ್ ಟಿ ಸೇರಿಕೊಳ್ಳುತ್ತದೆ. ಇನ್ನು ಬೆಳ್ಳಿ ಫ್ಯೂಚರ್ಸ್ ನಲ್ಲೂ ಎಂಸಿಎಕ್ಸ್ ನಲ್ಲಿ 0.64% ಏರಿಕೆಯಾಗಿ, ಒಂದು ಕೇಜಿ ಬೆಳ್ಳಿ ದರವು 48,615 ರುಪಾಯಿ ಮುಟ್ಟಿದೆ.

ಕೊರೊನಾಗೆ ಗಿರಗಿರ; 10 ಗ್ರಾಮ್ ಚಿನ್ನಕ್ಕೆ ರು. 43,036

ಜಾಗತಿಕ ಮಾರುಕಟ್ಟೆಯಲ್ಲೇ ಇಂದಿನ ದರವು 2 ಪರ್ಸೆಂಟ್ ಗೂ ಹೆಚ್ಚಾಗಿ, ಏಳು ವರ್ಷದಲ್ಲೇ ಗರಿಷ್ಠ ಮಟ್ಟದಲ್ಲಿ ಚಿನ್ನದ ವಹಿವಾಟು ನಡೆಯುತ್ತಿದೆ. ಚೀನಾವನ್ನು ಹೊರತುಪಡಿಸಿದಂತೆ ಇತರ ದೇಶಗಳಲ್ಲೂ ಕೊರೊನಾ ವೈರಾಣು ವ್ಯಾಪಿಸುತ್ತಿರುವಂತೆಯೇ ಹೂಡಿಕೆದಾರರ ಪಾಲಿಗೆ ಚಿನ್ನದ ಮೇಲೆ ಹೂಡಿಕೆ ಮಾಡುವುದು ಸುರಕ್ಷಿತ ಎಂಬ ಭಾವನೆ ಮೂಡಿದೆ.

ಚಿನ್ನದ ಇಟಿಎಫ್ (ಎಕ್ಸ್ ಚೇಂಜ್ ಟ್ರೇಡೆಡ್ ಫಂಡ್ಸ್) ಸತತವಾಗಿ ಇಪ್ಪತ್ತೆರಡು ದಿನ ಏರಿಕೆ ಕಂಡಿದೆ. ಇದು ಅತ್ಯಂತ ದೀರ್ಘಾವಧಿಗೆ ಸತತ ಏರಿಕೆ ಕಂಡಂತೆ ಆಗಿದೆ. ಅಲ್ಪಾವಧಿಯಲ್ಲಿ ಚಿನ್ನದ ಬೆಲೆ ಇನ್ನಷ್ಟು ಏರಿಕೆ ಆಗಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+