ಯಶಸ್ಸಿನ ಮೆಟ್ಟಿಲನ್ನು ಒಂದೊಂದಾಗಿ ಏರುತ್ತಾ ಬಂದ ಬೆಂಗಳೂರಿನ ಕ್ಷೌರಿಕ ರಮೇಶ್ ಬಾಬು ಅವರನ್ನು 'ಬಿಲಿಯನೇರ್ ಕ್ಷೌರಿಕ' ಎಂದು ಖ್ಯಾತರಾಗಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಐಷಾರಾಮಿ ಕಾರುಗಳ ಮಾಲೀಕರಾಗಿರುವ ರಮೇಶ್ ಬಾಬು ಅವರು ರೋಲ್ಸ್ ರಾಯ್ಸ್, ಮರ್ಸಿಡಿಸ್ ಮೇಬ್ಯಾಚ್, ರೇಂಜ್ ರೋವರ್ಸ್ ಮತ್ತು ಬೆಂಟ್ಲೀಸ್ ಸೇರಿದಂತೆ ಸುಮಾರು 400ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಒಡೆಯರಾಗಿದ್ದಾರೆ.
ರಮೇಶ್ ಬಾಬು ಅವರಿಗೆ ಕೇವಲ 7 ವರ್ಷ ವಯಸ್ಸಿರುವಾಗ ಅವರ ತಂದೆ ನಿಧನರಾದರು. ರಮೇಶ್ ತಂದೆ ಕ್ಷೌರಿಕರಾಗಿದ್ದರು. ರಮೇಶ್ ಬಾಬುರ ತನ್ನ ತಂದೆಯು ಅನಿರೀಕ್ಷಿತವಾಗಿ ಮೃತಪಟ್ಟಾಗ, ತಾಯಿಯು ಅನಿವಾರ್ಯವಾಗಿ 5 ರೂಪಾಯಿಗೆ ಸಲೂನ್ ಅನ್ನು ಅಂಕಲ್‌ಗೆ ಅಡವಿರಿಸಬೇಕಾಗಿ ಬಂತು. ಪ್ರತೀ ದಿನ 5 ರೂಪಾಯಿ ಕೊಡುವ ಒಪ್ಪಂದದಂತೆ ಅವರ ಅಂಗಡಿಯನ್ನು ಚಿಕ್ಕಪ್ಪನವರು ವಹಿಸಿಕೊಳ್ಳುತ್ತಾರೆ.

ಅವರು ಕೊಡುವ ಐದು ರೂಪಾಯಿಗಳಲ್ಲಿ ರಮೇಶ್ ಅವರ ತಾಯಿ, ಸಹೋದರ ಮತ್ತು ಸಹೋದರಿಯರ ದೈನಂದಿನ ಅವಶ್ಯಕತೆಗಳು ಮತ್ತು ವಿದ್ಯಾಭ್ಯಾಸಕ್ಕೆ ಸಾಲುತ್ತಿರಲಿಲ್ಲವಾದ್ದರಿಂದ ಅವರ ತಾಯಿಯವರು ನಾಲ್ಕಾರು ಮನೆಗಳಲ್ಲಿ ಮನೆಗೆಲಸ ಮಾಡಬೇಕಾಗಿ ಬಂತು. ಬಳಿಕ ರಮೇಶ್ ಬಾಬು ಕುಟುಂಬದ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಪತ್ರಿಕೆ ಮಾರಾಟ ಸೇರಿದಂತೆ ಹಲವಾರು ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು.
ಒಂದು ಕಾಲದಲ್ಲಿ ರಮೇಶ್ ಬಾಬು ಕುಟುಂಬಸ್ಥರಿಗೆ ಒಂದು ಹೊತ್ತಿನ ಆಹಾರಕ್ಕೂ ಹಣವಿಲ್ಲದೇ, ಹಸಿವಿನಿಂದಲೇ ಪರದಾಡುವ ಪರಿಸ್ಥಿತಿ ಇತ್ತು. ಕೆಲವೊಮ್ಮೆ ಹಸಿವಿನಿಂದ ಉಪವಾಸ ಮಲಗಬೇಕಾಗುತ್ತಿತ್ತು. ಆದರೆ ರಮೇಶ್ ಬಾಬು ನಂತರ 1990 ರ ದಶಕದಲ್ಲಿ ಸಲೂನ್ ಉದ್ಯಮವನ್ನು ಪ್ರಾರಂಭಿಸಿದ್ದು, ಈ ಉದ್ಯಮದಲ್ಲೇ ರಮೇಶ್ ಬಾಬು ಉತ್ತಮ ಹಣ ಸಂಪಾದನೆ ಮಾಡಲಾರಂಭಿಸಿದರು.
ರಮೇಶ್ ಬಾಬು ಬಳಿಕ ಹಣ ಉಳಿತಾಯವನ್ನು ಮಾಡಿ, ಮಾರುತಿ ಓಮ್ನಿ ಕಾರನ್ನು ಪಡೆದು ಬಾಡಿಗೆ ನೀಡಲು ಪ್ರಾರಂಭಿಸಿದರು. ಅನಂತರದಲ್ಲಿ ರಮೇಶ್ ಬಾಬು ಅವರು "ರಮೇಶ್ ಟೂರ್ಸ್ ಅಂಡ್ ಟ್ರಾವೆಲ್ಸ್ "ಎಂಬ ಕಾರು ಬಾಡಿಗೆ ಹಾಗೂ ಸೆಲ್ಫ್ ಡ್ರೈವ್ ವೆಂಚರ್ ಅನ್ನು ಪ್ರಾರಂಭಿಸಿದರು. ಕೆಲ ತಿಂಗಳ ಬಳಿಕ ಮರ್ಸಿಡಿಸ್ ಇ ಕ್ಲಾಸ್ ಸೆಡಾನ್ ಖರೀಸುವ ಮೂಲಕ ಬೆಂಗಳೂರು ನಗರದಲ್ಲಿ ಐಷಾರಾಮಿ ಕಾರುಗಳನ್ನು ಬಾಡಿಗೆ ನೀಡುವ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡರು.
ಮುಂದೆ ರಮೇಶ್ ಬಾಬು ಅವರು 3 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಖರೀದಿಸಿದರು. ಇದರ ಜೊತೆಗೆ BMW, ಜಾಗ್ವಾರ್, ಬೆಂಟ್ಲಿ ಲಕ್ಸುರಿ ಸೆಡಾನ್ಸ್ ನಂತಹ ಐಷಾರಾಮಿ ಕಾರುಗಳನ್ನು ಬಾಡಿಗೆ ನೀಡಲು ಪ್ರಾರಂಭಿಸಿದರು. 2017ರಲ್ಲಿ, ರಮೇಶ್ ಬಾಬು ಅವರು 2.6 ಕೋಟಿಯ ರೂಪಾಯಿ ಮೌಲ್ಯದ ಮೇಬ್ಯಾಚ್ S600 ಕಾರು ಖರೀದಿಸುವ ಮೂಲಕ ಸುದ್ದಿಯಾದರು.
ರಮೇಶ್ ಬಾಬು ಅವರ ಬಾಡಿಗೆ ಕಾರುಗಳ ಸೇವೆಯನ್ನು ಖ್ಯಾತ ತಾರೆಯರಾದ ಅಮಿತಾಬ್ ಬಚ್ಚನ್, ಐಶ್ವರ್ಯಾ ರೈ ಬಚ್ಚನ್, ಅಮೀರ್ ಖಾನ್ , ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಬಳಕೆ ಮಾಡಲು ಪ್ರಾರಂಭಿಸಿದರು. ಇಂದಿಗೂ ರಮೇಶ್ ಬಾಬು ಮೊದಲ ಬಾರಿಗೆ ಖರೀದಿಸಿದ ಮಾರುತಿ ವ್ಯಾನ್ ಚಲಾಯಿಸುವ ಸುಸ್ಥಿತಿಯಲ್ಲಿದೆ. ಬಿಲಿಯನೇರ್ ಅದರೂ ರಮೇಶ್ ತಮ್ಮ ದಿನದ ಕಾಲು ಭಾಗವನ್ನು ತಮ್ಮ ಸೆಲೂನ್‌ನಲ್ಲಿಯೇ ಕಳೆಯುತ್ತಾರೆ ಎಂಬುವುದು ವಿಶೇಷ.


Click it and Unblock the Notifications