ನಮ್ಮ ಮೆಟ್ರೋದಲ್ಲಿ ಕೆಲಸ ಮಾಡಬೇಕೆಂಬ ಆಸೆ ಇದ್ಯಾ? ಹಾಗಿದ್ರೆ ಇಂದು ನಿಮ್ಮಗೆ ಒಳ್ಳೆಯ ಅವಕಾಶವೆಂದೇ ಹೇಳಬಹುದು ಯಾಕೆಂದರೆ ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಈ ಹುದ್ಧೆಗೆ ಅರ್ಜಿ ಸಲ್ಲಿಸುವುದು ಹೇಗೆ ಏನೆಲ್ಲಾ ಮಾನದಂಡಗಳು ಇರಬೇಕು ನೇಮಕಾತಿ ಪ್ರಕ್ರಿಯೆ ಹೇಗೆ? ಕೆಲಸ ಸಿಕ್ಕಿದ್ರೂ ಎಷ್ಟು ಸಂಬಳ ಸಿಗುತ್ತದೆ? ವಯಸ್ಸಿನ ಮಿತಿ ಏನು? ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ...
ಹೌದು, ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ ಖಾಲಿ ಇರೋ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಈ ಹುದ್ಧೆಗೆ ಅರ್ಜಿ ಸಲ್ಲಿಸಲು ಜನವರಿ 28 ಕೊನೆಯ ದಿನಾಂಕವಾಗಿದೆ. ಹಾಗಾಗಿ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಲು ಅವಕಾಶವಿದೆ.

ಯಾವ್ಯಾವ ಹುದ್ದೆಗಳಿಗೆ ಅರ್ಜಿ ಅಹ್ವಾನ
ಸಿಸ್ಟಮ್ ಸೂಪರ್‌ವೈಸರ್, ಸಿಸ್ಟಮ್ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಅಹ್ವಾನ ಮಾಡಲಾಗಿದೆ.
ಎಷ್ಟು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ?
ಒಟ್ಟು 13 ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಕರೆಯಲಾಗಿದೆ.
ವಯಸ್ಸಿನ ಮಿತಿ ಎಷ್ಟಿರಬೇಕು?
40 ವರ್ಷಗಳು ಮಿತಿ ಇರಬೇಕು.
ಅರ್ಜಿ ಸಲ್ಲಿಕೆ ಅನ್ನು ಸಲ್ಲಿಸುವುದು ಹೇಗೆ?
ಅಂಚೆ ಕಚೇರಿಯ ಮೂಲಕ ಇಲ್ಲವೇ ಇ-ಮೇಲ್ ಮಾಡುವ ಮೂಲಕ ನೀವು ಈ ಹುದ್ಧೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ನಿಮಗೆ ಈ ಹುದ್ಧೆಯಿಂದ ಸಿಗುವ ಸ್ಯಾಲರಿ ಎಷ್ಟು?
ಈ ಹುದ್ಧೆಗೆ ನೀವು ಆಯ್ಕೆಯಾದರೆ ತಿಂಗಳಿಗೆ 46,000 ರೂ.ನಿಂದ 65,000 ರೂ.ಗಳು ಸಿಗುತ್ತದೆ.
ವಿದ್ಯಾರ್ಹತೆ ಏನಿರಬೇಕು?
ಐಟಿಐ, ಡಿಪ್ಲೊಮಾ, ಬಿಇ/ಬಿ.ಟೆಕ್ ಓದಿರಬೇಕು.
ನೇಮಕಾತಿ ಪ್ರಕ್ರಿಯೆ ಹೇಗಿರಲಿದೆ?
ನಮ್ಮ ಮೆಟ್ರೋಗೆ ಅರ್ಜಿ ಸಲ್ಲಿಸಿದವರಿಗೆ ನೇರ ಸಂದರ್ಶನವಿರುತ್ತದೆ.ಇದಕ್ಕೂ ಮುನ್ನ ಅಭ್ಯರ್ಥಿಗಳಿಗೆ ವೈದ್ಯಕೀಯ ಫಿಟ್ನೆಸ್ ಪರೀಕ್ಷೆ ನಡೆಸಲಾಗುವುದು. ಆಸಕ್ತರು ಕೂಡಲೇ ಅರ್ಜಿಯನ್ನು ದೆಹಲಿ ಮೆಟ್ರೋ ವಿಳಾಸಕ್ಕೆ ಕಳಿಸಬಹುದು ಅಥವಾ ಇಮೇಲ್ ಸಹ ಮಾಡಬಹುದು.
ಫೆ.1 ರಿಂದ ಮೆಟ್ರೋ ಪ್ರಯಾಣ ದರ ಏರಿಕೆ ಜಾರಿ?
ಬೆಂಗಳೂರಿಗರೇ ಇಲ್ಲಿ ಕೇಳಿ.. ಇನ್ನುಂದೆ ಮಟ್ರೋ ಪ್ರಯಾಣ ದುಬಾರಿಯಾಗಲಿದೆ. ಹೌದು,ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಮುಂಬರುವ ಪ್ರಯಾಣ ದರ ಏರಿಕೆಯನ್ನು ಮಾಡಲು ಈಗಲೇ ಸರ್ಕಾರಕ್ಕೆ ಶಿಫಾರಸ್ಸು ಮಾಡಿತು. ಬೆಲೆ ಏರಿಕೆಯನ್ನು ಎಷ್ಟೇ ಗೌಪ್ಯವಾಗಿಟ್ಟಿದ್ದರೂ ಕೂಡ ಫೆಬ್ರುವರಿ 1 ರಿಂದ ದರ ಏರಿಕೆಯಾಗಲಿದೆ ಎಂಬ ಮಾಹಿತಿಯನ್ನು ತಿಳಿಸಿವೆ.
ಪ್ರಯಾಣ ದರ ಶೇ. 41 ರಷ್ಟು ಏರಿಕೆ
ಇನ್ಮಂದೆ ಪ್ರಯಾಣ ದರ ಶೇ. 41 ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ.ದರ ಪರಿಷ್ಕರಣೆ ಸಮಿತಿ ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ ಕಾಯ್ಕೆ 2002ರ ಅಡಿಯಲ್ಲಿ ಶೇ. 41 ರಷ್ಟು ಪ್ರಯಾಣ ದರ ಹೆಚ್ಚಳಕ್ಕೆ ಶಿಫಾರಸು ಮಾಡಿತು. ದರ ಪರಿಷ್ಕರಿಸಲು ರಚಿಸಲಾದ ಸಮಿತಿಯು ಶೇ. 41 ರಷ್ಟು ಹೆಚ್ಚಳವನ್ನು ಪ್ರಸ್ತಾಪ ಸಹ ಇದೆ. ಈಗ ಮೆಟ್ರೋ ಟೋಕನ್ ದರ ರೂ. 10 ರಿಂದ 60 ರ ನಡುವೆ ಇದ್ದು, ಮೆಟ್ರೋ ಕಾರ್ಡ್‌ಗಳ ಮೇಲೆ ಶೇ. 5 ರಷ್ಟು ರಿಯಾಯಿತಿ ಸಹ ಇದೆ.
ಇವರೇ ಶುಲ್ಕ ನಿಗದಿ ಸಮಿತಿಯಲ್ಲಿದ್ದವರು!
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) - ಆರ್ ಥರಾಣಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸತೀಂದರ್ ಪಾಲ್ ಸಿಂಗ್ ಕರ್ನಾಟಕದ ನಿವೃತ್ತ IAS ಅಧಿಕಾರಿ ಇವಿ ರಮಣ ರೆಡ್ಡಿ ಮೆಟ್ರೋ ಬೆಲೆ ಏರಿಕೆಯ ಕುರಿತು ಸಮಿತಿಯು ಅಕ್ಟೋಬರ್ 2, 28, 2024 ರ ನಡುವೆ ಸಾರ್ವಜನಿಕ ಪ್ರತಿಕ್ರಿಯೆಯನ್ನು ಸಂಗ್ರಹ ಮಾಡಿತು. ಡಿಸೆಂಬರ್ 16 ರಂದು ಸಾರ್ವಜನಿಕ ಪ್ರತಿಕ್ರಿಯೆಗಳ ಕೋರಿಕೆಯೂ ಮುಕ್ತಾಯವಾಗಿತು.


Click it and Unblock the Notifications