ಚಾಲಕರಿಗೆ ಓಲಾದಿಂದ ಕಿರು ಸಾಲ ಯೋಜನೆ: ಏನಿದು ಸ್ಕೀಮ್?

ಕ್ಯಾಬ್ ಬುಕ್ಕಿಂಗ್ ಕಂಪೆನಿಯಾದ ಓಲಾದಿಂದ ಮಂಗಳವಾರ ಮಹತ್ವದ ಘೋಷಣೆ ಮಾಡಲಾಗಿದೆ. ನಗದು ಅಗತ್ಯ ಇರುವ ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯ ಚಾಲಕರಿಗೆ ಬಡ್ಡಿರಹಿತವಾಗಿ ಕಿರು ಸಾಲ ಒದಗಿಸಲು ಮುಂದಾಗಿದೆ. ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಎದುರಾಗಿರುವ ಆರ್ಥಿಕ ಸವಾಲು ಎದುರಿಸಲು ಈ ಹೊಸ ಯೋಜನೆ ಘೋಷಿಸಿದೆ.

'ಅರ್ಹ ಚಾಲಕರಿಗೆ' 3600 ರುಪಾಯಿ ತನಕದ ಸಾಲವನ್ನು ಮೂರು ವಾರದೊಳಗೆ ವಿತರಿಸಲಾಗುವುದು. ಆ ಮೊತ್ತವನ್ನು ಮನೆಯ ಖರ್ಚು ಅಥವಾ ಯಾವುದಾದರೂ ಮರುಪಾವತಿಗೆ ಬಳಸಬಹುದು ಎಂದು ಕಂಪೆನಿ ತಿಳಿಸಿದೆ. ಈ ಯೋಜನೆ ಅಡಿಯಲ್ಲಿ ವಾರಕ್ಕೆ 1200 ರುಪಾಯಿಯನ್ನು ನೀಡಲಾಗುವುದು.

ಈ ಸಾಲವನ್ನು ಮುಂದೆ, ಎಲ್ಲ ವ್ಯವಹಾರ ಸಹಜ ಸ್ಥಿತಿಗೆ ಬಂದ ಮೇಲೆ ತಮ್ಮ ದುಡಿಮೆಯಲ್ಲಿ ತೀರಿಸಬಹುದು. ಓಲಾ ಕಂಪೆನಿಯು ಈ ಸಾಲವನ್ನು ಮೈಕ್ರೋ ಫೈನಾನ್ಸ್ ಕಂಪೆನಿ ಮೂಲಕ ವಿತರಿಸಲಿದೆ. ಓಲಾ ಆಟೋ, ಓಲಾ ರೆಂಟಲ್ಸ್ ಮತ್ತು ಔಟ್ ಸ್ಟೇಷನ್ಸ್ ಹೀಗೆ ಎಲ್ಲ ವಿಭಾಗದವರೂ ಇದರ ಅನುಕೂಲ ಪಡೆಯಬಹುದು. ಆದರೆ ಈ ಸಾಲದ ಪ್ರಯೋಜನ ಪಡೆಯಲು ಚಾಲಕರ 'ಅರ್ಹತಾ ಮಾನದಂಡ' ಏನು ಎಂಬುದನ್ನು ತಿಳಿಸಿಲ್ಲ.

ಚಾಲಕರಿಗೆ ಓಲಾದಿಂದ ಕಿರು ಸಾಲ ಯೋಜನೆ: ಏನಿದು ಸ್ಕೀಮ್?

ಲಾಕ್ ಡೌನ್ ಕಾರಣಕ್ಕೆ ಓಲಾದ ಎಲ್ಲ ಸೇವೆಯನ್ನು ಸ್ಥಗಿತ ಮಾಡಲಾಗಿದೆ. ಕರ್ನಾಟಕದಲ್ಲಿ ಚಾಲಕರ ಲೀಸ್ ರೆಂಟಲ್ ಕೂಡ ಓಲಾದಿಂದ ಮನ್ನಾ ಮಾಡಲಾಗಿದೆ. ಕೊರೊನಾಗೆ ಸಂಬಂಧಿಸಿದ ಚಟುವಟಿಕೆಗಳಿಗೆ ವೈದ್ಯರ ಸಂಚಾರಕ್ಕೆ ಬಳಸಿಕೊಳ್ಳಲು ಐನೂರು ವಾಹನಗಳನ್ನು ರಾಜ್ಯ ಸರ್ಕಾರಕ್ಕೆ ನೀಡಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+