ಮೆಕ್ರೋಸಾಫ್ಟ್ ಸಿಇಒ ಹೆಂಡತಿ ಅನುಪಮಾಯಿಂದ ಎರಡೆರಡು ಕೋಟಿ ದೇಣಿಗೆ

ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರ ಹೆಂಡತಿ ಅನುಪಮಾ PM CARES ಫಂಡ್ ಗೆ ತಮ್ಮ ಉಳಿತಾಯದಲ್ಲಿ 2 ಕೋಟಿ ರುಪಾಯಿಯನ್ನು ದೇಣಿಗೆ ನೀಡಿದ್ದಾರೆ ಎಂದು ಅವರ ಕುಟುಂಬ ಮೂಲಗಳು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿರುವುದಾಗಿ ವರದಿಯಾಗಿದೆ. ವಾರದ ಹಿಂದೆಯಷ್ಟೇ ತೆಲಂಗಾಣ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅನುಪಮಾ ದೇಣಿಗೆ ನೀಡಿದ್ದರು.

ಭಾರತದಲ್ಲಿ ಕೊರೊನಾ ವಿರುದ್ಧದ ಹೋರಾಟಕ್ಕಾಗಿ ತುರ್ತು ನಿಧಿಯ ಅಗತ್ಯ ಇರುವುದರಿಂದ ಮಾರ್ಚ್ 28ರಂದು ಇದನ್ನು ಆರಂಭಿಸಲಾಗಿದೆ. ಕೊರೊನಾ ವಿರುದ್ಧ ಹೋರಾಟಕ್ಕೆ ಸರ್ಕಾರದ ಜತೆ ಕೈ ಜೋಡಿಸುವಂತೆ ನರೇಂದ್ರ ಮೋದಿ ಅವರು ಜನರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ. ಅಕ್ಷಯ್ ಕುಮಾರ್, ಸುರೇಶ್ ರೈನಾ ಸೇರಿದಂತೆ ಹಲವರು ವೈಯಕ್ತಿಕವಾಗಿ ಹಾಗೂ ಟಾಟಾ, ರಿಲಯನ್ಸ್, ವಿಪ್ರೋ ಕಂಪೆನಿಗಳಿಂದಲೂ ದೇಣಿಗೆ ನೀಡುವ ಘೋಷಣೆ ಮಾಡಲಾಗಿದೆ.

ಮೆಕ್ರೋಸಾಫ್ಟ್ ಸಿಇಒ ಹೆಂಡತಿ ಅನುಪಮಾಯಿಂದ ಎರಡೆರಡು ಕೋಟಿ ದೇಣಿಗೆ

ಅನುಪಮಾ ನಾಡೆಲ್ಲಾ ಅವರ ಈ ಕಾರ್ಯವನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಟ್ವಿಟ್ಟರ್ ನಲ್ಲಿ ಹೊಗಳಿದ್ದಾರೆ. ಇಂಥ ಸಂದಿಗ್ಧ ಸಮಯದಲ್ಲಿ ತಾಯ್ನಾಡಿನ ಜನರ ಕಷ್ಟಕ್ಕೆ ಮಿಡಿಯುತ್ತಿರುವ ಅನುಪಮಾ ಅವರ ಗುಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದ ವಾರವಷ್ಟೇ ಅನುಪಮಾ ತಂದೆ- ನಿವೃತ್ತ ಐಎಎಸ್ ಅಧಿಕಾರಿ ಕೆ.ಆರ್. ವೇಣುಗೋಪಾಲ್ ಅವರು ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಿಗೆ ಎರಡು ಕೋಟಿಯ ಚೆಕ್ ಹಸ್ತಾಂತರಿಸಿದ್ದರು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+