ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ 35,000ದಿಂದ 45,000 ಕೋಟಿ ರುಪಾಯಿ ಮಧ್ಯಂತರ ಲಾಭಾಂಶವನ್ನು ಕೇಳಬಹುದು ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಸರ್ಕಾರದ ಮನವಿಯನ್ನು ಆರ್ ಬಿಐ ಪುರಸ್ಕರಿಸಿದಲ್ಲಿ ಸತತವಾಗಿ ಮೂರನೇ ವರ್ಷ ಮಧ್ಯಂತರ ಲಾಭಾಂಶವನ್ನು ನೀಡಿದಂತಾಗುತ್ತದೆ.
ಪದೇಪದೇ ಮಧ್ಯಂತರ ಲಾಭಾಂಶವನ್ನು ಸರ್ಕಾರ ಕೇಳುವುದಿಲ್ಲ. ಆದರೆ ಈ ವರ್ಷದ ಸ್ಥಿತಿ ಕ್ಲಿಷ್ಟಕರವಾಗಿದೆ. ಆ ಕಾರಣಕ್ಕೆ ಮಧ್ಯಂತರ ಲಾಭಾಂಶವನ್ನು ಆರ್ ಬಿಐ ನೀಡಬೇಕು ಎಂದು ಈಗಿನ ಬೆಳವಣಿಗೆ ಬಗ್ಗೆ ಮಾಹಿತಿ ಇರುವ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಳೆದ ವರ್ಷ ಉತ್ತಮ ಲಾಭ ಗಳಿಸಿದ್ದ ರಿಸರ್ವ್ ಬ್ಯಾಂಕ್, 1.23 ಲಕ್ಷ ಕೋಟಿ ತನಕ ಲಾಭ ದಾಖಲಿಸಿತ್ತು. ಕರೆನ್ಸಿ ಟ್ರೇಡಿಂಗ್ ಮತ್ತು ಸರ್ಕಾರದ ಬಾಂಡ್ ಗಳ ಮೂಲಕ ಈ ಲಾಭ ಮಾಡಿತ್ತು. ಅದರಲ್ಲಿ ಸ್ವಲ್ಪ ಭಾಗ ಕಾರ್ಯ ನಿರ್ವಹಣೆ ಚಟುವಟಿಕೆಗೆ ಮತ್ತು ಅನಿರೀಕ್ಷಿತ ಖರ್ಚುಗಳಿಗೆ ಮೀಸಲಿರಿಸಿತ್ತು. ಬಾಕಿ ಮೊತ್ತವನ್ನು ಲಾಭಾಂಶವಾಗಿ ಸರ್ಕಾರಕ್ಕೆ ಪಾವತಿಸಿತ್ತು.

ಒಟ್ಟಾರೆಯಾಗಿ ಕೇಂದ್ರ ಸರ್ಕಾರದ ಆದಾಯದಲ್ಲಿ ಗಣನೀಯವಾಗಿ ಕುಸಿದಿದ್ದು, ಬೆಳವಣಿಗೆ ದರವು ಐದು ಪರ್ಸೆಂಟ್ ಗಿಂತ ಕಡಿಮೆ ಇದೆ. ಅನ್ಯಥಾ ಮಾರ್ಗ ಇಲ್ಲದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಳಿ ಮಧ್ಯಂತರ ಲಾಭಾಂಶವನ್ನು ಕೇಳಬಹುದು ಎನ್ನಲಾಗುತ್ತಿದೆ.
More From GoodReturns

Tejasvi Surya: ಹೋಟೆಲ್ ಉದ್ಯಮದ ಬೆಂಬಲಕ್ಕೆ ನಿಂತ ತೇಜಸ್ವಿ ಸೂರ್ಯ; LPG ಗ್ಯಾಸ್ ಪೂರೈಸುವಂತೆ ಮನವಿ

PM-Kisan 22nd instalment date: ಕೆಲವೇ ದಿನಗಳಲ್ಲಿ ರೈತರ ಖಾತೆಗೆ ಬರಲಿದೆ 2000 ರೂ. ಹಣ! ರೈತರಿಗೆ ಗುಡ್ ನ್ಯೂಸ್

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications