ಗೂಗಲ್ ಪ್ಲೇ ಸ್ಟೋರ್ ನ ಆಪ್ ಗಳ ಸುರಕ್ಷತೆ ಬಗ್ಗೆ ಈಗಾಗಲೇ ಸಾಕಷ್ಟು ಲೇಖನಗಳು ಬಂದಿವೆ. ವರದಿಗಳ ಪ್ರಕಾರ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಅಪ್ಲಿಕೇಷನ್ ಗಳ ಮಾಲ್ ವೇರ್ ನಿಂದ ಆಗುತ್ತಿರುವ ಹಾನಿಯನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಸಾಮಾನ್ಯವಾಗಿ ಗೂಗಲ್ ನಿಂದ ಆಗಾಗ್ಗೆ ಅಂಥ ಕೆಲವು ಅಪ್ಲಿಕೇಷನ್ ಗಳನ್ನು ಕಿತ್ತೊಗೆಯಲಾಗುತ್ತದೆ.
ಆದರೆ, ಅದೇ ಥರದ್ದು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಇದೀಗ ಅಂಥದ್ದಕ್ಕೆ ಹೊಸ ಸೇರ್ಪಡೆ ಕೀ ಬೋರ್ಡ್ ಅಪ್ಲಿಕೇಶನ್. ಇದು ನಿಮ್ಮ ಎಲ್ಲ ಹಣವನ್ನು ಕಳುವು ಮಾಡಬಲ್ಲದು. "ai.type keyboard" ಎಂಬುದು ಈ ಅಪ್ಲಿಕೇಷನ್ ನ ಹೆಸರು. ಇದು ಬಳಕೆದಾರರನ್ನು ಅಕ್ಷರಶಃ ದೋಚಿಬಿಡುತ್ತದೆ ಎಂದು ವರದಿಗಳು ಹೇಳುತ್ತಿವೆ.
ಫೋನ್ ಬಳಸುತ್ತಿರುವ ಸಂದರ್ಭದಲ್ಲೇ ಬಳಕೆದಾರರ ಗಮನಕ್ಕೂ ಬಾರದೆ ಈ ಅಪ್ಲಿಕೇಷನ್ ತನ್ನ ಚಟುವಟಿಕೆ ಶುರು ಮಾಡುತ್ತದೆ. ಅನಧಿಕೃತ ವ್ಯವಹಾರದ ಮೂಲಕ ಬಳಕೆದಾರರ ಹಣವನ್ನು ಕಳುವು ಮಾಡುತ್ತದೆ. ಇಂಥ ಒಂದೂವರೆ ಕೋಟಿಯಷ್ಟು ಮನವಿಯನ್ನು ಗುರುತಿಸಲಾಗಿದೆ. ಡಿ- ಪ್ಲಾಟ್ ಫಾರ್ಮ್ ಮೂಲಕ ಸಂಶೋಧಕರು ಅದನ್ನು ಬ್ಲಾಕ್ ಮಾಡಿದ್ದಾರೆ.

ಗೂಗಲ್ ನ ಪ್ರಕಾರ, ಈ ವರ್ಷದ ಜೂನ್ ನಲ್ಲೇ ಈ ಅಪ್ಲಿಕೇಷನ್ ಅನ್ನು ಕಿತ್ತೊಗೆಯಲಾಗಿದೆ. ಆದರೂ ಇದು ಸ್ಮಾರ್ಟ್ ಫೋನ್ ಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಆದರೂ ಈ ಅಪ್ಲಿಕೇಷನ್ ಈಗಲೂ ವಿವಿಧ ಥರ್ಡ್ ಪಾರ್ಟಿ ಆಪ್ ಸ್ಟೋರ್ಸ್ ಹಾಗೂ ವೆಬ್ ಸೈಟ್ ಗಳಲ್ಲಿ ಡೌನ್ ಲೋಡ್ ಗೆ ಲಭ್ಯವಿದೆ.
ಸಂಶೋಧನೆ ಪ್ರಕಾರ, ಈ ಅಪ್ಲಿಕೇಷನ್ ಹತ್ತಾರು ಡಿವೈಸ್ ಗಳಲ್ಲಿ ಇನ್ ಸ್ಟಾಲ್ ಆಗಿದೆ. ಗೂಗಲ್ ನಿಂದ ಅಪ್ಲಿಕೇಷನ್ ಸ್ಥಗಿತವಾದ ನಂತರ ಇದು ಮತ್ತಷ್ಟು ಖತರ್ನಾಕ್ ಚಟುವಟಿಕೆಯಲ್ಲಿ ತೊಡಗಿದೆ. ಆಗಿನಿಂದ ಹಲವಾರು ವಂಚನೆ ವ್ಯವಹಾರಗಳು ವರದಿಯಾಗಿವೆ.
ನಿಮ್ಮ ಮೊಬೈಲ್ ಪರಿಶೀಲಿಸಿ. ಒಂದು ವೇಳೆ ಕೀ ಬೋರ್ಡ್ ಅಪ್ಲಿಕೇಷನ್ ನೀವು ಬಳಸುವ ಡಿವೈಸ್ ನಲ್ಲಿ ಅಪ್ಪಿತಪ್ಪಿ ಇನ್ ಸ್ಟಾಲ್ ಆಗಿದ್ದರೆ ತಕ್ಷಣ ಅದನ್ನು ಡಿಲೀಟ್ ಮಾಡುವುದು ಉತ್ತಮ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?



Click it and Unblock the Notifications