ಭಾರತದ ಆರ್ಥಿಕತೆಗೆ ಹೊಡೆತವೆಂಬಂತೆ ಮೂಡಿಸ್ ಸಂಸ್ಥೆ ದೇಶದ ಆರ್ಥಿಕ ವೃದ್ದಿ ದರ ಕುರಿತು ನಕಾರಾತ್ಮಕ ರೇಟಿಂಗ್ ನೀಡಿದೆ. ಈ ಹಿಂದೆ ಇದ್ದ 'ಸ್ಥಿರ' ದಿಂದ 'ನಕಾರಾತ್ಮಕ'ಕ್ಕೆ ಬದಲಿಸಿದೆ. ದೇಶದ ಆರ್ಥಿಕ ದುರ್ಬಲತೆಯನ್ನು ಗಮನಹರಿಸುವಲ್ಲಿ ಭಾರತ ಸರ್ಕಾರ ವಿಫಲವಾಗಿದ್ದು, ಇದರಿಂದ ಆರ್ಥಿಕ ಪ್ರಗತಿ ಕುಂಠಿತವಾಗುತ್ತಿದೆ ಎಂದು ಆಘಾತಕಾರಿ ಅಂಶವನ್ನು ಶುಕ್ರವಾರ (ನವೆಂಬರ್ 8) ಬಹಿರಂಗಪಡಿಸಿದೆ.
ಅಮೆರಿಕಾ ಮೂಲದ ಹಣಕಾಸು ಮತ್ತು ಸಾಲದ ಬದ್ಧತೆ ಈಡೇರಿಸುವ ಸಾಮರ್ಥ್ಯ ಮೌಲ್ಯಮಾಪನ ಸಂಸ್ಥೆಯಾದ ಮೂಡಿಸ್ ಈ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಭಾರತದ ಆರ್ಥಿಕತೆಗೆ ಮತ್ತೊಂದು ಹೊಡೆತ ನೀಡಿದೆ. ಆರ್ಥಿಕ ಕುಂಠಿತವನ್ನು ಎದುರಿಸಲು ಸರ್ಕಾರ ವಿಫಲವಾಗಿದ್ದು, ಇದು ದೇಶದ ಸಾಲದ ಹೊರೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಿದೆ.
ದೇಶದ ಆರ್ಥಿಕ ವೃದ್ದಿ ದರವಷ್ಟೇ ಅಲ್ಲದೆ ಆರು ಭಾರತೀಯ ಹಣಕಾಸು ಸಂಸ್ಥೆಗಳ ದೃಷ್ಟಿಕೋನವನ್ನು 'ಸ್ಥಿರ' ದಿಂದ 'ನಕಾರಾತ್ಮಕ'ಕ್ಕೆ ಪರಿಷ್ಕರಿಸಿದೆ. ಇದರಲ್ಲಿ ಹೆಚ್‌ಡಿಎಫ್ ಸಿ ಬ್ಯಾಂಕ್, ಎಸ್‌ಬಿಐ, ಎಕ್ಸಿಮ್ ಬ್ಯಾಂಕ್, ಹೀರೊ ಫಿನ್ ಕಾರ್ಪ್, HUDCO, IRFC (ಭಾರತೀಯ ರೈಲ್ವೇ ಹಣಕಾಸು ನಿಗಮ)ಸೇರಿವೆ.
೨೦೧೯-೨೦ರಲ್ಲಿ ಭಾರತದ ಅಭಿವೃದ್ಧಿ ದರವು ಶೇಕಡಾ 5.8ರಷ್ಟು ಇರಲಿದೆ ಎಂದು ಅಕ್ಟೋಬರ್‌ನಲ್ಲಿ ಮೂಡಿಸ್ ಅಂದಾಜಿಸಿತ್ತು. ಅದಕ್ಕೂ ಮೊದಲು ಶೇಕಡಾ 6.2 ಇರಲಿದೆ ಎಂದು ಹೇಳಿತ್ತು. ಆದರೆ ಈಗ 2017ರಲ್ಲಿ ನೀಡಿದ್ದ 'ಬಿಬಿಎ2' ರೇಟಿಂಗ್ ಅನ್ನು ಮುಂದುವರಿಸಿದೆ. ಇದಕ್ಕೂ ಮೊದಲು 2004ರಲ್ಲಿ 'ಬಿಬಿಎ3' ರೇಟಿಂಗ್ ನೀಡಿತ್ತು. ಬಳಿಕ ನರೇಂದ್ರ ಮೋದಿ ಸರ್ಕಾರದಲ್ಲಿ ಆರ್ಥಿಕ ಸುಧಾರಣೆ ಅಂದಾಜಿಸಿ 2017ರಲ್ಲಿ 'ಬಿಬಿಎ2' ನೀಡಲಾಗಿತ್ತು.
ಮೂಡಿಸ್ ರೇಟಿಂಗ್‌ಗೆ ಸರ್ಕಾರದ ಉತ್ತರ
ಮೂಡಿಸ್ ಭಾರತದ ಆರ್ಥಿಕತೆ ಕುರಿತು ನಕಾರಾತ್ಮಕ ರೇಟಿಂಗ್ ನೀಡಿದ್ದೇ ತಡ ಹಣಕಾಸು ಸಚಿವಾಲಯ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿತು. 'ಭಾರತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ವಿಶ್ವದ ಪ್ರಮುಖ ಆರ್ಥಿಕತೆಯಾಗಿ ಮುಂದುವರಿಯಲಿದೆ. ಆರ್ಥಿಕತೆಯ ಮೂಲ ದೃಢವಾಗಿದ್ದು, ಹಣದುಬ್ಬರದ ಮೇಲೆ ನಿಗಾವಹಿಸಲಾಗಿದೆ. ಇತ್ತೀಚಿನ IMF (ಅಂತರಾಷ್ಟ್ರೀಯ ಹಣಕಾಸು ನಿಧಿ) ದೃಷ್ಟಿಕೋನದ ಪ್ರಕಾರ ಭಾರತದ ಆರ್ಥಿಕತೆ 2019ರಲ್ಲಿ 6.1 ರಷ್ಟು ಬೆಳವಣಿಗೆ ಕಾಣಲಿದೆ ಹಾಗೂ 2020ರ ವೇಳೆಗೆ ಶೇಕಡಾ 7ರಷ್ಟು ಪ್ರಗತಿ ಕಾಣಲಿದೆ. ಭಾರತದ ಸಂಭಾವ್ಯ ಬೆಳವಣಿಗೆ ದರವು ಬದಲಾಗುವುದಿಲ್ಲ. IMF ಹಾಗೂ ಇತರ ಬಹುಪಕ್ಷೀಯ ಸಂಘಟನೆಗಳ ಮೌಲ್ಯಮಾಪನವು ಭಾರತದ ಬಗ್ಗೆ ಸಕಾರಾತ್ಮಕ ದೃಷ್ಟಿಕೋನವನ್ನು ಒತ್ತಿ ಹೇಳುತ್ತಿವೆ. ' ಎಂದು ಹಣಕಾಸು ಸಚಿವಾಲಯ ಮೂಡಿಸ್ ರೇಟಿಂಗ್ ಕುರಿತು ಪ್ರತಿಕ್ರಿಯಿಸಿದೆ.
ಮೂಡಿಸ್ ಹೇಗೆ ರೇಟಿಂಗ್ ನೀಡುತ್ತದೆ?
ಮೂಡಿಸ್ ಪ್ರಸ್ತುತ ಜಗತ್ತಿನ ಅರ್ಥವ್ಯವಸ್ಥೆಯ ಆಧಾರದ ಮೇಲೆ ವಿವಿಧ ರಾಷ್ಟ್ರಗಳಿಗೆ ರೇಟಿಂಗ್ ನೀಡುತ್ತದೆ. ಅತಿಹೆಚ್ಚು ಎಂದರೆ 'ಎಎಎ' ಯಿಂದ ಕನಿಷ್ಟ 'ಸಿ'ವರೆಗೆ ರೇಟಿಂಗ್ ನೀಡುತ್ತದೆ. ಇದು ೨೧ consists ಮತ್ತು ೨ ವಿಭಾಗವನ್ನು ಒಳಗೊಂಡಿದೆ. ಆರ್ಥಿಕವಾಗಿ ಉತ್ತಮವಾಗಿರುವ ಕಂಪನಿಗಳಿಗೆ ಹೂಡಿಕೆ ವಿಭಾಗ. ಮತ್ತು ಹೂಡಿಕೆ ಮಾಡುವುದರಿಂದ ಹೆಚ್ಚಿನ ತೊಂದರೆ ಆಗುವ ಕಂಪನಿಗಳೆಂದು ಮತ್ತೊಂದು ವಿಭಾಗ ಸೃಷ್ಟಿಸುತ್ತದೆ.
'ಎಎಎ" ರೇಟಿಂಗ್ ಎಂದರೇನು?
'ಎಎಎ' ಎಂದರೆ ಮುಂದುವರಿದ ಅರ್ಥ ವ್ಯವಸ್ಥೆಯ ಅತ್ಯುನ್ನತ ರೇಟಿಂಗ್ ಆಗಿದ್ದು, 'ಬಿಬಿಎ2' ರೇಟಿಂಗ್ ಮಧ್ಯಮ ಪ್ರಮಾಣದ ಆರ್ಥಿಕ ಅಭಿವೃದ್ಧಿಯನ್ನು ಸೂಚಿಸುತ್ತದೆ. 'ಸಿ' ಅತ್ಯಂತ ಕನಿಷ್ಟ ರೇಟಿಂಗ್ ಆಗಿದೆ.


Click it and Unblock the Notifications