2020ರ ಭಾರತದ ಜಿಡಿಪಿ ಬೆಳವಣಿಗೆ ದರವನ್ನು 2.5 ಪರ್ಸೆಂಟ್‌ಗೆ ಇಳಿಸಿದ ಮೂಡಿಸ್

ಜಾಗತಿಕವಾಗಿ ದೊಡ್ಡ ಮಹಾಮಾರಿಯಾಗಿ ಪರಿಣಮಿಸಿರುವ ಕೊರೊನಾವೈರಸ್‌ನಿಂದಾಗಿ 2020ರ ಭಾರತದ ಜಿಡಿಪಿ ಬೆಳವಣಿಗೆ ದರವನ್ನು ಮೂಡಿಸ್ 2.5 ಪರ್ಸೆಂಟ್‌ಗೆ ಇಳಿಸಿದೆ.

2020ರ ವರ್ಷದಲ್ಲಿ ಭಾರತದ ಜಿಡಿಪಿಯ ಬೆಳವಣಿಗೆಯನ್ನು ಈ ಹಿಂದೆ 5.3 ಪರ್ಸೆಂಟ್ ಎಂದು ಅಂದಾಜಿಸಿತ್ತು. ಆದರೆ ಕೊರೊನಾವೈರಸ್ ಜಾಗತಿಕ ಆರ್ಥಿಕತೆಗೆ ಭಾರೀ ಆಘಾತವನ್ನುಂಟು ಮಾಡಿದ್ದು, ಭಾರತದ ಬೆಳವಣಿಗೆ ದರವನ್ನು 2.5 ಪರ್ಸೆಂಟ್‌ಗೆ ಇಳಿಕೆ ಮಾಡಿದೆ.

2020ರ ಭಾರತದ ಜಿಡಿಪಿ ದರವನ್ನು 2.5 ಪರ್ಸೆಂಟ್‌ಗೆ ಇಳಿಸಿದ ಮೂಡಿಸ್

ಅಮೆರಿಕಾ ಮೂಲದ ಹಣಕಾಸು ಮತ್ತು ಸಾಲದ ಬದ್ಧತೆ ಈಡೇರಿಸುವ ಸಾಮರ್ಥ್ಯ ಮೌಲ್ಯಮಾಪನ ಸಂಸ್ಥೆಯಾದ ಮೂಡಿಸ್ "ಭಾರತದಲ್ಲಿ, ಬ್ಯಾಂಕ್ ಮತ್ತು ಬ್ಯಾಂಕೇತರ ಹಣಕಾಸು ಕ್ಷೇತ್ರಗಳಲ್ಲಿನ ತೀವ್ರ ದ್ರವ್ಯತೆ ನಿರ್ಬಂಧದಿಂದಾಗಿ ಆರ್ಥಿಕತೆಗೆ ಸಾಲದ ಹರಿವು ಈಗಾಗಲೇ ತೀವ್ರವಾಗಿ ಅಡಚಣೆಯಾಗಿದೆ" ಎಂದು ಅದು ಹೇಳಿದೆ.

ಈ ವಾರದ ಆರಂಭದಲ್ಲಿ, ಭಾರತವು ಮೂರು ವಾರಗಳ ಸುದೀರ್ಘ ರಾಷ್ಟ್ರವ್ಯಾಪಿ ಲಾಕ್‌ಡೌನ್ ಅನ್ನು ವಿಧಿಸಿತು, ಇದುವರೆಗೆ ದೇಶದಲ್ಲಿ ಕನಿಷ್ಠ 17 ಜನರನ್ನು ಬಲಿತೆಗೆದುಕೊಂಡಿರುವ ಕೊರೊನವೈರಸ್ ಸಾಂಕ್ರಾಮಿಕ ರೋಗವನ್ನು ಹರಡುವುದನ್ನು ತಡೆಯಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಮೂರು ವಾರಗಳ ಲಾಕ್‌ಡೌನ್‌ನಿಂದಾಗಿ ದೇಶಕ್ಕೆ ಸುಮಾರು 9 ಲಕ್ಷ ಕೋಟಿ ರುಪಾಯಿ ನಷ್ಟವುಂಟಾಗಬಹುದು ಎಂದು ಅಂದಾಜಿಸಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+