ಭಾರತದ ಜಿಡಿಪಿ ದರವನ್ನು 4.8 ಪರ್ಸೆಂಟ್‌ಗೆ ತಗ್ಗಿಸಿದ ಮೂಡಿಸ್ ಸಂಸ್ಥೆ

ಮೂಡಿಸ್ ಸಂಸ್ಥೆಯು 2019-20ರ ಹಣಕಾಸಿನ ವರ್ಷದಲ್ಲಿ ಭಾರತದ ಜಿಡಿಪಿ ದರ ಬೆಳವಣಿಗೆಯ ಮುನ್ಸೂಚನೆಯನ್ನು 5.8 ರಿಂದ 4.8 ಪರ್ಸೆಂಟ್‌ಗೆ ಇಳಿಸಿದೆ.

ಅಮೆರಿಕಾ ಮೂಲದ ಹಣಕಾಸು ಮತ್ತು ಸಾಲದ ಬದ್ಧತೆ ಈಡೇರಿಸುವ ಸಾಮರ್ಥ್ಯ ಮೌಲ್ಯಮಾಪನ ಸಂಸ್ಥೆಯಾದ ಮೂಡಿಸ್ ಈ ಹಿಂದೆ ಭಾರತದ ಜಿಡಿಪಿ ದರವನ್ನು 5.8 ಪರ್ಸೆಂಟ್‌ಗೆ ಇಳಿಸಿತ್ತು. ದೇಶದ ಆರ್ಥಿಕ ವೃದ್ದಿ ದರವಷ್ಟೇ ಅಲ್ಲದೆ ಆರು ಭಾರತೀಯ ಹಣಕಾಸು ಸಂಸ್ಥೆಗಳ ದೃಷ್ಟಿಕೋನವನ್ನು 'ಸ್ಥಿರ' ದಿಂದ 'ನಕಾರಾತ್ಮಕ'ಕ್ಕೆ ಪರಿಷ್ಕರಿಸಿತ್ತು.

ಭಾರತದ ಜಿಡಿಪಿ ದರವನ್ನು 4.8 ಪರ್ಸೆಂಟ್‌ಗೆ ತಗ್ಗಿಸಿದ ಮೂಡಿಸ್ ಸಂಸ್ಥೆ

ಕಳೆದ ಕೆಲವು ತ್ರೈಮಾಸಿಕಗಳಲ್ಲಿ ನಿಧಾನಗತಿಯ ಆರ್ಥಿಕ ಬೆಳವಣಿಗೆಯು ಮನೆಗಳ ಸಾಲ ಮರುಪಾವತಿ ಸಾಮರ್ಥ್ಯವನ್ನು ಕುಂಠಿತಗೊಳಿಸಿವೆ. ಮತ್ತು ಚಿಲ್ಲರೆ ಸಾಲದ ಗುಣಮಟ್ಟವನ್ನು ಹಾನಿಗೊಳಿಸಿದೆ ಎಂದು ಮೂಡಿಸ್ ಸಂಸ್ಥೆಯು ಹೇಳಿದೆ.

ಭಾರತದಲ್ಲಿನ ಮಂದಗತಿಯ ಆರ್ಥಿಕ ಬೆಳವಣಿಗೆಯಿಂದಾಗಿ ಹೂಡಿಕೆಯ ಪ್ರಮಾಣವು ಕುಸಿದಿದೆ. ಗ್ರಾಮೀಣ ಕುಟುಂಬಗಳಲ್ಲಿನ ಆರ್ಥಿಕ ಒತ್ತಡ ಮತ್ತು ನಿಧಾನಗತಿಯ ಉದ್ಯೋಗ ಸೃಷ್ಠಿ ಜಿಡಿಪಿ ಕುಸಿತಕ್ಕೆ ಕಾರಣವಾಗಲಿದೆ ಎಂದಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+