ಕರ್ನಾಟಕ ಸರ್ಕಾರಿ ಉದ್ಯೋಗಗಳಲ್ಲಿ 20,000 ಕ್ಕೂ ಹೆಚ್ಚು ಹುದ್ದೆಗಳು ಖಾಲಿ; ನಾಗರಿಕರ ಸೇವೆಗಳು ವಿಳಂಬ!

ಈಗಂತು ಹುದ್ದೆಗಳು ಪ್ರತಿಯೊಬ್ಬರಿಗೂ ಕೂಡ ಮುಖ್ಯವಾಗಿವೆ. ಅದರಲ್ಲೂ ಸರ್ಕಾರಿ ಕೆಲಸಗಳಿಗಾಗಿ ಜನರು ಸ್ಪರ್ಧೆಯಲ್ಲಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಕರ್ನಾಟಕದ ಸರ್ಕಾರಿ ಹುದ್ದೆಗಳಲ್ಲಿ ಈ ವರ್ಷ 20,466 ಹುದ್ದೆಗಳು ಖಾಲಿ ಇವೆ ಎಂದು ಹೇಳಲಾಗ್ತಿದೆ. ಇನ್ನು ಅಂಕಿ ಅಂಶಗಳ ಪ್ರಕಾರ ನಾವು ಗಮನಿಸುವುದಾದ್ರೆ ಆಡಳಿತದ ಮೂರನೇ ಒಂದು ಭಾಗದಷ್ಟು ಹುದ್ದೆಗಳು ಖಾಲಿಯಿರುವುದರಿಂದ ನಾಗರಿಕರ ಕೆಲಸಗಳು ಕೂಡ ವಿಳಂಬವಾಗ್ತಿವೆ ಎನ್ನಲಾಗ್ತಿದೆ.

ಈಗಾಗಲೇ ಕರ್ನಾಟಕದಲ್ಲಿ 7.72 ಲಕ್ಷ ಸರ್ಕಾರಿ ಹುದ್ದೆಗಳು ಮಂಜೂರಾಗಿದ್ದು, ಈ ಹುದ್ದೆಗಳಲ್ಲಿ 2.76 ಲಕ್ಷ ಹುದ್ದೆಗಳು ಖಾಲಿ ಇವೆ. ಅಲ್ಲದೆ ರಾಜ್ಯ ಕಾಂಗ್ರೆಸ್‌ ಕೂಡ ಈ ಕುರಿತಾಗಿ 2023ರಲ್ಲಿ ಪ್ರಣಾಳಿಕೆಯನ್ನ ಹೊರಡಿಸಿತ್ತು. ಇನ್ನು ಅದರಲ್ಲಿ ಒಂದು ವರ್ಷದೊಳಗೆ ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆಯನ್ನ ಕೂಡ ನೀಡಿತ್ತು. ಇನ್ನೂ ಕೂಡ ಆ ಭರವಸೆ ಈಡೇರಿಲ್ಲ ಎಂಬ ದೂರು ಕೇಳಿ ಬರ್ತಿದೆ.

ಕರ್ನಾಟಕದಲ್ಲಿ 20,000 ಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ!

'ಕೇಸ್ ಟು ಕೇಸ್' ಆಧಾರದ ಮೇಲೆ ನೇಮಕಾತಿಗೆ ಅನುಮತಿ ನೀಡಲಾಗುತ್ತಿದೆ ಎಂದು ಹಣಕಾಸು ಇಲಾಖೆ ಸ್ಪಷ್ಟನೆಯನ್ನ ನೀಡಿದೆ. ಆದಾಗ್ಯೂ, ಗ್ಯಾರಂಟಿ ಯೋಜನೆಗಳಿಗೆ 63,000 ಕೋಟಿ ರೂ.ಗಿಂತ ಹೆಚ್ಚಿನ ವೆಚ್ಚದ ಕಾರಣ, ಹಣಕಾಸಿನ ಒತ್ತಡಗಳು ಕೂಡ ಹೆಚ್ಚುತ್ತಿವೆ. ಹೀಗಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅಡಿಯಲ್ಲಿ ಉದ್ಯೋಗ ನೇಮಕಾತಿಗಳು ಕೂಡ ವಿಳಂಬವಾಗಿವೆ.

ಹುದ್ದೆಗಳು ಖಾಲಿಯಿರುವುದರಿಂದ ಸಾರ್ವಜನಿಕ ಕಲೆಸಗಳು ಕೂಡ ವಿಳಂಬವಾಗುತ್ತಿವೆ ಇದರಿಂದಾಗಿ ಭ್ರಷ್ಟಾಚಾರಗಳು ಕೂಡ ಹೆಚ್ಚಾಗುತ್ತಿವೆ ಎಂದು ಕಾರ್ಕಳದ ಬಿಜೆಪಿ ಶಾಸಕ ವಿ ಸುನೀಲ್ ಕುಮಾರ್ ಅವರು ಉಡುಪಿ ಜಿಲ್ಲೆಯಲ್ಲಿ ಹೇಳಿದ್ರು. ಇನ್ನು ಈ ಬಗ್ಗೆ ಮಾತನಾಡಿದ ಅವರು ಕೇವಲ ಇಬ್ಬರು ಭೂ ಪರಿವರ್ತನೆ ಅರ್ಜಿಗಳನ್ನ ನಿರ್ವಹಿಸುವುದರಿಂದ 2,000 ರೂ. ವೆಚ್ಚದ ಸೇವೆಗಳು ವಿಳಂಬವಾಗ್ತಿವೆ ಇದರಿಂದಾಗಿ 25,000 ರೂ. ಕೊಟ್ಟು ಕೆಲಸ ಮಾಡಿಸುವ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರು.

ಇನ್ನು ಈ ಕುರಿತು ಮೇಲುಕೋಟೆಯ ಸರ್ವೋದಯ ಕರ್ನಾಟಕ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಕಳವಳ ವ್ಯಕ್ತಪಡಿಸಿದ್ರು, ಶೇ.65ರಷ್ಟು ಸಿಬ್ಬಂದಿ ಕೊರತೆಯಿಂದ ಕೃಷಿ ಇಲಾಖೆ ಅತ್ಯಂತ ಸಂಕಷ್ಟದಲ್ಲಿದೆ. ಇದರಿಂದಾಗಿ ಸರ್ಕಾರಿ ಉದ್ಯೋಗಿಗಳು ಹೆಚ್ಚು ಕೆಲಸ ಮಾಡುತ್ತಾರೆ, ಆಗಾಗ್ಗೆ 12-15 ಗಂಟೆಗಳ ಕಾಲ ಕೆಲಸ ಮಾಡುವ ಪರಿಸ್ಥಿತಿ ಎದುರಾಗಿದೆ. ಹುದ್ದೆಗಳು ಖಾಲಿ ಇರುವುದರಿಂದಾಗಿ ನಾಗರಿಕರು ಭ್ರಷ್ಟಾಚಾರದ ಮೂಲಕ ಕೆಲಸ ಮಾಡಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದರು.

ಹಾಗೆ ನೋಡುವುದಾದ್ರೆ, ಟೈಪಿಸ್ಟ್‌ಗಳು , ಸ್ಟೆನೋಗ್ರಾಫರ್‌ಗಳು, ಮತ್ತು ಡ್ರೈವರ್‌ಗಳು ಸೇರಿದಂತೆ 96,000 ಗ್ರೂಪ್ 'ಸಿ' ಮತ್ತು 'ಡಿ' ಉದ್ಯೋಗಗಳನ್ನು ಹೊರಗುತ್ತಿಗೆ ನೌಕಕರರಿಂದ ಮಾಡಿಸಲಾಗ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ರು.

ಅಲ್ಲದೆ ಈ ಪರಿಸ್ಥಿತಿಯ ಕುರಿತು ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರು ಟೀಕೆ ಮಾಡಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಅವರು ಸರ್ಕಾರವನ್ನು ಉದ್ಯೋಗ ಸಂಸ್ಥೆಯಾಗಿ ನೋಡಬಾರದು. ಕೆಲವು ಇಲಾಖೆಗಳಿಗೆ ನೇಮಕಾತಿ ಅಗತ್ಯವಿದ್ದರೂ ಕೂಡ ಇನ್ನು ಕೆಲವು ಇಲಾಖೆಗಳಿಗೆ ಇದರ ಅವಶ್ಯಕತೆ ಇರುವುದಿಲ್ಲ ಎಂದು ಆಡಳಿತಾತ್ಮಕವಾಗಿ ಹೆಚ್ಚುತ್ತಿರುವ ವೆಚ್ಚಗಳ ಬಗ್ಗೆ ಒತ್ತಿಹೇಳಿದರು.

ಅಷ್ಟಲ್ಲದೆ ಈ ನೇಮಕಾತಿ ಭರವಸೆಗಳ ಬಗ್ಗೆ ಟೀಕೆಗಳನ್ನು ಎದುರಿಸುತ್ತಿರುವ ಮೊದಲನೆಯ ಸರ್ಕಾರ ಕಾಂಗ್ರೆಸ್ ಏನಲ್ಲ . ನವೆಂಬರ್ 2022 ರಲ್ಲಿ ಬಸವರಾಜ ಬೊಮ್ಮಾಯಿ ಬಿಜೆಪಿ ಮುಖ್ಯಮಂತ್ರಿ ಆಗಿದ್ದಾಗ, ಒಂದು ವರ್ಷದೊಳಗೆ ಒಂದು ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಯೋಜನೆಯನ್ನು ಘೋಷಿಸಿದ್ದರು ಆದ್ರೆ ಅದು ಕೂಡ ಈಡೇರಲಿಲ್ಲ.

ಇದು ಈ ಸರ್ಕಾರದ ಸಮಸ್ಯೆಯಲ್ಲ ಪ್ರತೀ ಸರ್ಕಾರದ ಆಡಳಿತದ ವೇಳೆ ಕೂಡ ಇಂತಹ ಪರಿಸ್ಥಿತಿಗಳನ್ನ ಜನರು ಎದುರಿಸಿದ್ದಾರೆ. ಅಲ್ಲದೆ ಈಗಲು ಕೂಡ ಕಾಲ ಮೀರಿಲ್ಲ ಈ ಉದ್ಯೋಗಗಳನ್ನ ಭರ್ತಿ ಮಾಡುವ ಮೂಲಕ ನಿರುಧ್ಯೋಗವನ್ನ ಕೂಡ ಕಡಿಮೆ ಮಾಡಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+