"ಅಯ್ಯೋ, ನನ್ನ ಕೆಲಸ ಏನಾಗಬಹುದೋ ಗೊತ್ತಿಲ್ಲ. ಅದಕ್ಕೆ ಸದ್ಯಕ್ಕೆ ಮುಂದಿನ ಒಂದು ವರ್ಷ ಮದುವೆ ಆಗೋದು ಬೇಡ ಅಂದುಕೊಂಡಿದ್ದೇನೆ," ಎಂದರು ಬೆಂಗಳೂರು ಸ್ಟಾರ್ಟ್ ಅಪ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಲ್ಲಿ ಉದ್ಯೋಗ ಮಾಡುವ ವರುಣ್. ಅವರ ಜತೆ ಮಾತನಾಡಿದ ಕೆಲವೇ ಗಂಟೆಗಳಲ್ಲಿ ಸಮೀಕ್ಷೆಯೊಂದು ಬಂದಿದೆ. ಇದು ಜಾಗತಿಕ ಮಟ್ಟದ ಸಮೀಕ್ಷೆ. ಅದರಲ್ಲಿ ಉದ್ಯೋಗದ ಬಗ್ಗೆ ಈಗ ಕಾರ್ಯ ನಿರ್ವಹಿಸುತ್ತಿರುವ ವಯಸ್ಕರರು ಏನಂತಾರೆ ಗೊತ್ತಾ?
ಮುಂದಿನ 12 ತಿಂಗಳಲ್ಲಿ ತಮ್ಮ ಉದ್ಯೋಗ ಕಳೆದುಕೊಳ್ಳಬಹುದು ಎಂದು ಭಾರತದ 57% ಮಂದಿ ಭಾವಿಸುತ್ತಾರಂತೆ. ಆದರೆ ಮೂರನೇ ಎರಡು ಭಾಗದಷ್ಟು ಉದ್ಯೋಗಿಗಳಿಗೆ ತಮ್ಮ ಉದ್ಯೋಗದಾತರ ಬಗ್ಗೆ ನಂಬಿಕೆಯಂತೆ. ಹೊಸ ಅವಕಾಶಗಳು ದೊರಕಿಸಿಕೊಡುತ್ತಾರೆ ಎಂಬ ನಂಬಿಕೆ ಎನ್ನುತ್ತದೆ ಸಮೀಕ್ಷೆ.
ವರ್ಲ್ಡ್ ಎಕನಾಮಿಕ್ ಫೋರಂನ ಜಾಬ್ಸ್ ರೀಸೆಟ್ ಸಮಿಟ್ ಆನ್ ಲೈನ್ ಫಲಿತಾಂಶ ಇದು. ಈ ಸಮಿಕ್ಷೆಯಲ್ಲಿ ಬಂದಿರುವ ವರದಿ ಪ್ರಕಾರ, ರಷ್ಯಾದಲ್ಲಿ ಪ್ರತಿ ನಾಲ್ಕು ಕಾರ್ಮಿಕರಲ್ಲಿ ಸರಾಸರಿ ಮೂವರು ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಅದೇ ಜರ್ಮನಿಯಲ್ಲಿ ಪ್ರತಿ ನಾಲ್ವರಲ್ಲಿ ಒಬ್ಬರಿಗೆ ಈ ಬಗ್ಗೆ ಭಯ ಇದೆ.

ಭಾರತದಲ್ಲಿ ಶೇಕಡಾ 57 ಮಂದಿ ಉದ್ಯೋಗದ ಬಗ್ಗೆ ಆತಂಕ ಇರುವುದಾಗಿ ಹೇಳಿಕೊಂಡಿದ್ದಾರೆ. 25ರಷ್ಟು ಮಂದಿ ವಿಪರೀತ ಆತಂಕ ಇದೆ ಎಂದಿದ್ದರೆ, 31ರಷ್ಟು ಮಂದಿ 'ಸ್ವಲ್ಪ ಮಟ್ಟಿಗೆ ಚಿಂತೆ ಇದೆ' ಎಂದು ಹೇಳಿದ್ದಾರೆ. ಮುಂದಿನ ಹನ್ನೆರಡು ತಿಂಗಳಲ್ಲಿ ತಮ್ಮ ಕೆಲಸ ಕಳೆದುಕೊಳ್ಳಬಹುದು ಎಂದು ಜಾಗತಿಕ ಮಟ್ಟದ ಲೆಕ್ಕಾಚಾರದಲ್ಲಿ ಹೇಳಬೇಕೆಂದರೆ, 54% ಮಂದಿ ಆತಂಕ ಹಂಚಿಕೊಂಡಿದ್ದಾರೆ. ಈ ಸಮೀಕ್ಷೆಯಲ್ಲಿ 27 ದೇಶಗಳ 12,000 ವಯಸ್ಕರರು ಪಾಲ್ಗೊಂಡಿದ್ದರು.
ಕೆಲಸ ಕಳೆದುಕೊಳ್ಳುವ ಆತಂಕ ಅತಿ ಹೆಚ್ಚಿನ ಪ್ರಮಾಣದಲ್ಲಿ ಇರುವುದು ರಷ್ಯಾದಲ್ಲಿ. ನಂತರ ಸ್ಪೇನ್ ಹಾಗೂ ಮಲೇಷ್ಯಾದಲ್ಲಿ. ಈ ಬಗ್ಗೆ ಹೆಚ್ಚಿನ ಚಿಂತೆ ಇಲ್ಲದಿರುವುದು ಜರ್ಮನಿಯಲ್ಲಿ. ಆ ನಂತರ ಸ್ವೀಡನ್, ನೆದರ್ಲೆಂಡ್ಸ್ ಮತ್ತು ಯುಎಸ್ ಇದೆ. ಈಗಿರುವ ಉದ್ಯೋಗದಾತರಿಂದಲೇ ಭವಿಷ್ಯಕ್ಕೆ ಅಗತ್ಯ ಇರುವ ಕೌಶಲ ಕಲಿಯುವುದಾಗಿ ವಿಶ್ವದಾದ್ಯಂತ ಶೇಕಡಾ 67ರಷ್ಟು ಮಂದಿ ಹೇಳಿದ್ದಾರೆ.
ಹತ್ತರಲ್ಲಿ ಒಂಬತ್ತು ಮಂದಿ ಸ್ಪೇನ್ ನವರು ತಮ್ಮ ಕೆಲಸಕ್ಕೆ ಅಗತ್ಯವಾದ ಕೌಶಲ ಕಲಿಯಲು ಸಿದ್ಧವಾಗಿರುವುದಾಗಿ ಹೇಳಿದ್ದರೆ, ಆ ನಂತರದ ಸ್ಥಾನಗಳಲ್ಲಿ ಜಪಾನ್, ಸ್ವೀಡನ್ ಹಾಗೂ ರಷ್ಯಾ ಇದೆ.


Click it and Unblock the Notifications