ವಿಶ್ವದಲ್ಲಿ ಯಾವ ರಾಷ್ಟ್ರದಲ್ಲಿ ಭ್ರಷ್ಟಾಚಾರ ಇಲ್ಲ ಹೇಳಿ.. ಪ್ರತಿಯೊಂದು ರಾಷ್ಟ್ರದಲ್ಲೂ ಒಂದಲ್ಲಾ ಒಂದು ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಇದ್ದೇ ಇದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾಗಿರಲಿ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳೇ ಇರಲಿ, ಇನ್ನೂ ಬಡರಾಷ್ಟ್ರಗಳೇ ಆಗಿರಲಿ ಭ್ರಷ್ಟಾಚಾರ ಅನ್ನುವುದು ದೊಡ್ಡ ಪಿಡುಗಾಗಿದೆ.
ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ (ಸಿಪಿಐ) ಸಾರ್ವಜನಿಕ ವಲಯಗಳಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಹೊಂದಿರುವ 180 ರಾಷ್ಟ್ರಗಳನ್ನ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರತಿಯೊಂದು ದೇಶಕ್ಕೂ ಶೂನ್ಯದಿಂದ(ಹೆಚ್ಚು ಭ್ರಷ್ಟ)ದಿಂದ 100ರವರೆಗೆ (ಭ್ರಷ್ಟ ಮುಕ್ತ) ಸ್ಕೋರ್ ನೀಡಲಾಗುತ್ತದೆ.
ಹಾಗಿದ್ದರೆ ಸಿಪಿಐ ಪ್ರಕಾರ ವಿಶ್ವದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಹೊಂದಿರುವ ರಾಷ್ಟ್ರಗಳು ಯಾವುವು? ಪಟ್ಟಿಯಲ್ಲಿರುವ 180 ದೇಶಗಳಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ ನೀಡಲಾಗಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಸೊಮಾಲಿಯಾ
ಸಿಪಿಐ ಪ್ರಕಾರ, ಸೊಮಾಲಿಯಾವು ವಿಶ್ವದಲ್ಲಿ ಅತ್ಯಂತ ಹೆಚ್ಚಿನ ಭ್ರಷ್ಟಾಚಾರ ಹೊಂದಿರುವ ರಾಷ್ಟ್ರವಾಗಿದ್ದು, ಕೇವಲ 9 ಅಂಕಗಳನ್ನು ನೀಡಲಾಗಿದೆ. ಜಗತ್ತಿನ ಅತಿ ಅರಾಜಕ ದೇಶ, ಅತ್ಯಂತ ಬಡ ರಾಷ್ಟ್ರ, ಅರ್ಧಕ್ಕಿಂತ ಹೆಚ್ಚು ಜನರು ಅಪೌಷ್ಟಿಕತೆಯಿಂದ ನರಳುತ್ತಿರುವ ದೇಶ ಇದಾಗಿದೆ.
ಇಲ್ಲಿನ ಸಾರ್ವಜನಿಕ ವಲಯದಲ್ಲಿ ಪಾರದರ್ಶಕತೆಗೆ ಅಡ್ಡಿಯಾಗುವ ಅಂಶಗಳು ಹೆಚ್ಚಿದ್ದು, ರಾಜಕೀಯ ಅಸ್ಥಿರತೆ, ಆರ್ಥಿಕತೆ ಕುಸಿತವು ಇದೆ. ಜೊತೆಗೆ ನಿರ್ಬಂಧಿತ ಪತ್ರಿಕಾ ಸ್ವಾತಂತ್ರ್ಯವನ್ನು ಹೊಂದಿರುವ ಅತ್ಯಂತ ಭ್ರಷ್ಟ ರಾಷ್ಟ್ರವಾಗಿದೆ.
ಪಾಕಿಸ್ತಾನ
ಸಿಪಿಐ ಪ್ರಕಾರ, ಪಾಕಿಸ್ತಾನ ಕೂಡ ವಿಶ್ವದಲ್ಲಿ ಅತ್ಯಂತ ಹೆಚ್ಚಿನ ಭ್ರಷ್ಟಾಚಾರ ಹೊಂದಿರುವ ರಾಷ್ಟ್ರವಾಗಿದ್ದು, 32 ಅಂಕಗಳನ್ನು ನೀಡಲಾಗಿದೆ. ರಾಜಕೀಯ ವ್ಯವಸ್ಥೆಯಲ್ಲಿ ಅರಾಜಕತೆ, ಬಡತನ ಪ್ರಮಾಣ ಹೆಚ್ಚಳ ಸೇರಿದಂತೆ ನಿರುದ್ಯೋಗ ದೇಶವನ್ನು ಕಾಡುತ್ತಿದೆ. 2018ರಿಂದ ಕುಸಿತ ಕಾಣುತ್ತಾ ಬಂದಿರುವ ಪಾಕಿಸ್ತಾನ ಮೂರು ಸ್ಥಾನ ಕುಸಿದು 120ನೇ ಸ್ಥಾನ ತಲುಪಿದೆ.
ಚೀನಾ
ಚೀನಾ ರಾಷ್ಟ್ರವು ಸಿಪಿಐ 180 ರಾಷ್ಟ್ರಗಳ ಪಟ್ಟಿಯಲ್ಲಿ 80ನೇ ಸ್ಥಾನ ಪಡೆದಿದೆ. 41 ಅಂಕಗಳೊಂದಿಗೆ ಚೀನಾ ಕೂಡ ಸಾರ್ವಜನಿಕ ವಲಯದಲ್ಲಿ ಹೆಚ್ಚು ಭ್ರಷ್ಟತೆಯಿಂದ ಕೂಡಿದೆ.
ಭಾರತ
ಭಾರತ ಕೂಡ ಚೀನಾದಂತೆ ಸಾರ್ವಜನಿಕ ವಲಯಗಳಲ್ಲಿ, ಸರ್ಕಾರಿ ಕೆಲಸಗಳಲ್ಲಿ ಭ್ರಷ್ಟಾಚಾರವನ್ನು ಹೊಂದಿದೆ. ಸಿಪಿಐ ಭಾರತಕ್ಕೆ 41 ಅಂಕಗಳನ್ನು ನೀಡಿದ್ದು, 2018ರಲ್ಲಿ 180 ರಾಷ್ಟ್ರಗಳ ಪಟ್ಟಿಯಲ್ಲಿ 80ನೇ ಸ್ಥಾನ ಪಡೆದಿತ್ತು.
ಅಮೆರಿಕಾ
ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲೂ ಭ್ರಷ್ಟಾಚಾರ ಮುಕ್ತವಾಗಿಲ್ಲ. ಸಿಪಿಐ ಪ್ರಕಾರ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ 69 ಅಂಕಗಳನ್ನು ಪಡೆದಿದ್ದು 23ನೇ ರ್ಯಾಂಕಿಂಗ್ ಪಡೆದಿದೆ.
ಪಶ್ಚಿಮ ಯುರೋಪ್
ಪಶ್ಚಿಮ ಯುರೋಪ್ ಮತ್ತು ಇಯು ಸರಾಸರಿ 66 ರೊಂದಿಗೆ ಹೆಚ್ಚು ಅಂಕ ಗಳಿಸಿದ ಪ್ರದೇಶವಾಗಿದ್ದರೆ, ಸಬ್-ಸಹಾರನ್ ಆಫ್ರಿಕಾ 32 ಅಂಕಗಳೊಂದಿಗೆ ಕಡಿಮೆ ಅಂಕ ಗಳಿಸಿದ ಪ್ರದೇಶವಾಗಿದೆ.
ಅತ್ಯಂತ ಕಡಿಮೆ ಭ್ರಷ್ಟತೆ ಹೊಂದಿರುವ ರಾಷ್ಟ್ರಗಳು
ಡೆನ್ಮಾರ್ಕ್ (ಸ್ಕೋರ್: 87), ನ್ಯೂಜಿಲೆಂಡ್ (ಸ್ಕೋರ್: 87), ಮತ್ತು ಫಿನ್‌ಲ್ಯಾಂಡ್ (ಸ್ಕೋರ್: 86) ವಿಶ್ವದ ಅತ್ಯಂತ ಕಡಿಮೆ ಭ್ರಷ್ಟತೆ ಹೊಂದಿರುವ ರಾಷ್ಟ್ರಗಳಾಗಿ ಪರಿಗಣಿಸಲ್ಪಟ್ಟಿದೆ.
ಭ್ರಷ್ಟಾಚಾರ ತಗ್ಗಿರುವ ರಾಷ್ಟ್ರಗಳು
ಪಾರದರ್ಶಕತೆ ಅಂತರರಾಷ್ಟ್ರೀಯ ಪ್ರಕಾರ, ಕಳೆದ ಎಂಟು ವರ್ಷಗಳಲ್ಲಿ ಗ್ರೀಸ್ (ಸ್ಕೋರ್: 48), ಗಯಾನಾ (ಸ್ಕೋರ್: 40) ಮತ್ತು ಎಸ್ಟೋನಿಯಾ (ಸ್ಕೋರ್: 74) ಸೇರಿದಂತೆ ಕೇವಲ 22 ದೇಶಗಳು ಮಾತ್ರ ತಮ್ಮ ಅಂಕಗಳಲ್ಲಿ ಗಮನಾರ್ಹ ಸುಧಾರಣೆ ಕಂಡಿದೆ.
ಭ್ರಷ್ಟಾಚಾರ ಹೆಚ್ಚುತ್ತಿರುವ ರಾಷ್ಟ್ರಗಳು
ಸಿಪಿಐ ಪ್ರಕಾರ 21 ದೇಶಗಳು ತಮ್ಮ ರ್ಯಾಂಕಿಂಗ್‌ನಲ್ಲಿ ಗಮನಾರ್ಹ ಇಳಿಕೆ ಕಂಡಿವೆ. ಕೆನಡಾ (ಸ್ಕೋರ್: 77), ನಿಕರಾಗುವಾ (ಸ್ಕೋರ್: 22) ಮತ್ತು ಆಸ್ಟ್ರೇಲಿಯಾ (ಸ್ಕೋರ್: 77) ಗಳೊಂದಿಗೆ ಗಮನಾರ್ಹ ಇಳಿಕೆ ದಾಖಲಿಸಿದೆ.


Click it and Unblock the Notifications