ಜಾಗತಿಕ ಮಟ್ಟದಲ್ಲಿ ಸರ್ಚ್ ಆದ ಟಾಪ್ ಟೆನ್ ಭಾರತೀಯ ಆಹಾರಗಳು

ಕಳೆದ ವರ್ಷ ಜಾಗತಿಕವಾಗಿ ಅತಿ ಹೆಚ್ಚು ಸರ್ಚ್ ಮಾಡಲಾದ ಭಾರತೀಯ ಆಹಾರ ಖಾದ್ಯ ಯಾವುದು ಗೊತ್ತಾ? ಅದು ಚಿಕನ್ ಬಿರಿಯಾನಿ. ತಿಂಗಳಿಗೆ ಸರಾಸರಿ ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ಶೋಧ ಮಾಡಲಾಗಿದೆ ಎಂದು ಹೊಸ ಅಧ್ಯಯನವೊಂದು ಬಹಿರಂಗ ಮಾಡಿದೆ. ಇನ್ನು ಟಾಪ್ ಟೆನ್ ಸರ್ಚ್ ನಲ್ಲಿ ಏನೇನೆಲ್ಲ ಇವೆ ಗೊತ್ತೆ?

ಬಟರ್ ಚಿಕನ್, ಸಮೋಸಾ, ಚಿಕನ್ ಟಿಕ್ಕಾ ಮಸಾಲಾ, ದೋಸೆ, ತಂದೂರಿ ಚಿಕನ್, ಪಾಲಾಕ್ ಪನ್ನೀರ್, ನಾನ್, ದಾಲ್ ಮಖಾನಿ ಹಾಗೂ ಚಾಟ್ ಗಳಿವೆ. ಅಂದ ಹಾಗೆ ಬಟರ್ ಚಿಕನ್ ಬಹಳ ನೆಚ್ಚಿನ ಪಂಜಾಬಿ ಖಾದ್ಯ. ಇದನ್ನು ಸರಾಸರಿ ನಾಲ್ಕು ಲಕ್ಷ ಸಲ ಸರ್ಚ್ ಮಾಡಲಾಗಿದೆ. ಸಮೋಸಾ ನಾಲ್ಕು ಲಕ್ಷಕ್ಕಿಂತ ಸ್ವಲ್ಪ ಕಮ್ಮಿ, ಚಿಕನ್ ಟಿಕ್ಕಾ ಮಸಾಲಾ ಸರಾಸರಿ ಎರಡೂವರೆ ಲಕ್ಷ ಸಲ ಸರ್ಚ್ ಮಾಡಲಾಗಿದೆ.

ದಕ್ಷಿಣ ಭಾರತೀಯರ ನೆಚ್ಚಿನ ದೋಸೆಯನ್ನು ಸರಾಸರಿ ಎರಡೂಕಾಲು ಲಕ್ಷಕ್ಕೂ ಹೆಚ್ಚು ಬಾರಿ ಸರ್ಚ್ ಮಾಡಲಾಗಿದೆ. ಆ ನಂತರದ ಐದು ಆಹಾರಗಳು: ತಂದೂರಿ ಚಿಕನ್, ಪಾಲಾಕ್ ಪನ್ನೀರ್, ನಾನ್, ದಾಲ್ ಮಖಾನಿ ಮತ್ತು ಚಾಟ್ ಗಳು. ಈ ಅಧ್ಯಯನದಿಂದ ಭಾರತದ ಆಹಾರ ಖಾದ್ಯಗಳ ಪೈಕಿ ಯಾವುದು ಹೆಚ್ಚು ಜನಪ್ರಿಯ ಎಂಬುದರ ಒಂದು ಅಳತೆಗೋಲು ಗೊತ್ತಾಗುತ್ತದೆ ಎಂದು ಅಧ್ಯಯನ ಸಂಸ್ಥೆ ತಿಳಿಸಿದೆ.

ಜಾಗತಿಕ ಮಟ್ಟದಲ್ಲಿ ಸರ್ಚ್ ಆದ ಟಾಪ್ ಟೆನ್ ಭಾರತೀಯ ಆಹಾರಗಳು

ವಿದೇಶಕ್ಕೂ ರಫ್ತಾಗುವ ಕೋವಿಲ್ ಪಟ್ಟಿ 'ಕಡಲೈ ಮಿಠಾಯ್' ಬಗ್ಗೆ ಏನು ಗೊತ್ತು?

ಪಟ್ಟಿಯಲ್ಲಿ ಇರುವ ಪೈಕಿ ಪಾಲಾಕ್ ಪನ್ನೀರ್ ಮತ್ತು ದಾಲ್ ಮಖಾನಿ ಮಾತ್ರ ಸಸ್ಯಾಹಾರಿ. ಇನ್ನು ಜಾಗತಿಕ ಮಟ್ಟದಲ್ಲಿ ಉತ್ತರ ಭಾರತೀಯ ಆಹಾರ ಖಾದ್ಯಗಳು ಹೆಚ್ಚು ಜನಪ್ರಿಯ ಎಂಬುದು ಕೂಡ ಅಧ್ಯಯನದಿಂದ ಗೊತ್ತಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+