ಮೊಟೊರೋಲಾದ Moto Razr ಮಡಚುವ ಫೋನ್ ಶೀಘ್ರವೇ ಭಾರತದಲ್ಲಿ ಬಿಡುಗಡೆ

ಲೆನೋವೋ ಮಾಲೀಕತ್ವದ ಮೊಟೊರೋಲಾದಿಂದ ಬಹು ನಿರೀಕ್ಷಿತ ವರ್ಟಿಕಲಿ ಫೋಲ್ಡ್ ಬಲ್ ಸ್ಮಾರ್ಟ್ ಫೋನ್ "Moto Razr" ಅಮೆರಿಕದಲ್ಲಿ $ 1500ಕ್ಕೆ ನವೆಂಬರ್ 14ರಂದು ಬಿಡುಗಡೆಯಾಗಿದ್ದು, ಇನ್ನೇನು ಸದ್ಯದಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ. ಕಂಪೆನಿಯು Razrನ ಭಾರತದ ಬಿಡುಗಡೆ ಟೀಸ್ ಅನ್ನು ಟ್ವೀಟ್ ಮಾಡಿದೆ. ಜತೆಗೆ 'ಮಡಚಬಹುದಾದ' ಈ ಪೋನ್ ನ ನೋಂದಣಿ ತನ್ನ ವೆಬ್ ಸೈಟ್ ನಲ್ಲಿ ಆರಂಭಿಸಿದೆ.

Moto Razr ಎರಡು ತೆರೆಯ (ಸ್ಕ್ರೀನ್) ಜತೆ ಬರುತ್ತದೆ. ಒಂದು ಒಳಗೆ ಮತ್ತೊಂದು ಹೊರಗೆ ಇರುತ್ತದೆ. ಇನ್ನು ಒಳ ಭಾಗದಲ್ಲಿ ಯಾವಾಗ ಮಡಚಿರುವುದಿಲ್ಲವೋ ಆಗ ಫೀಚರ್ OLED ಡಿಸ್ ಪ್ಲೇ 6.2 ಇಂಚು ಇರುತ್ತದೆ. ಇನ್ನು ಹೊರಗೆ ಫೋನ್ ಮಡಚಿದಾಗ 2.7 ಇಂಚಿನ OLED ಡಿಸ್ ಪ್ಲೇ ಇರಲಿದ್ದು, ಆಸ್ಪೆಕ್ಟ್ ರೇಷಿಯೋ 4:3 ಇರಲಿದೆ.

ಫೋನ್ ಮಡಚಿದಾಗ ಹೊರಗಿನಿಂದ ಕ್ವಿಕ್ ವ್ಯೂ ಡಿಸ್ ಪ್ಲೇಯಲ್ಲಿ 16 MP ಕ್ಯಾಮೆರಾ ಒಳಗೊಂಡಿದೆ. ಇದರ ಮೂಲಕ ಬಳಕೆದಾರರು ಸೆಲ್ಫಿ ತೆಗೆದುಕೊಳ್ಳಬಹುದು. ಇದೇ 16 MP ಕ್ಯಾಮೆರಾವು ಫೋನ್ ಮಡಚಿದಿದ್ದಾಗ ಹೊರಗಿನ ಕ್ಯಾಮೆರಾದಂತೆ ಕೆಲಸ ಮಾಡುತ್ತದೆ.

ಮೊಟೊರೋಲಾದ Moto Razr ಮಡಚುವ ಫೋನ್ ಶೀಘ್ರವೇ ಭಾರತದಲ್ಲಿ ಬಿಡುಗಡೆ

ಈ 16 MP ಕ್ಯಾಮೆರಾದಲ್ಲಿ EIS, ಡ್ಯುಯಲ್ ಪಿಕ್ಸೆಲ್ ಆಟೋಫೋಕಸ್, ಲೇಸರ್ AF ಮತ್ತು ಕಲರ್ ಕೋರಿಲೇಟೆಡ್ ಟೆಂಪರೇಚರ್ (CCT) ಡ್ಯುಯಲ್ LED ಫ್ಲ್ಯಾಷ್ ಇರುತ್ತದೆ. ಫೋನ್ ಮಡಚಿದಿದ್ದಾಗ 5 MPಯ ಮತ್ತೊಂದು ಕ್ಯಾಮೆರಾ ಫೋನ್ ನ ಒಳಭಾಗದಲ್ಲಿ ಇರುತ್ತದೆ.

ಸ್ಮಾರ್ಟ್ ಫೋನ್ ನಲ್ಲಿ ಸ್ನ್ಯಾಪ್ ಡ್ರ್ಯಾಗನ್ 710 ಪ್ರೊಸೆಸರ್, 6GB RAM ಹಾಗೂ 128 GB ಆಂತರಿಕ ಸಂಗ್ರಹ ಸಾಮರ್ಥ್ಯ ಒಳಗೊಂಡಿದೆ. Razr ಮೊಬೈಲ್ ಫೋನ್ ಆಂಡ್ರಾಯಿಡ್ 9 ಪೈನಲ್ಲಿ ಕಾರ್ಯ ನಿರ್ವಹಿಸುತ್ತದೆ. ಬ್ಯಾಟರಿ 2510 mAh ಜತೆ ಶೀಘ್ರವಾಗಿ ಚಾರ್ಜ್ ಆಗುವ 15W ಸಪೋರ್ಟ್ ಇದೆ.

ಇನ್ನು ಆಕ್ಸೆಸರೀಸ್ ವಿಚಾರಕ್ಕೆ ಬಂದರೆ Razr ಇಯರ್ ಬಡ್ಸ್, USB-Aಯಿಂದ USB-C ಚಾರ್ಜಿಂಗ್ ಕೇಬಲ್, ಪವರ್ ಬ್ರಿಕ್ ಮತ್ತು USB-C ಜತೆ 3.5 ಎಂ.ಎಂ. ಪೋರ್ಟ್ ಡಾಂಗಲ್ ಇರುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+