Mrs Bectors ಫುಡ್ ಸ್ಪೆಷಾಲಿಟೀಸ್ ಎಂಬ ಉತ್ತರ ಭಾರತದ ಪ್ರೀಮಿಯಂ ಬಿಸ್ಕೆಟ್ ಮತ್ತು ಬೇಕರಿಯ ಐಪಿಒಗೆ (ಇನಿಷಿಯಲ್ ಪಬ್ಲಿಕ್ ಆಫರ್) ಡಿಸೆಂಬರ್ 17ನೇ ತಾರೀಕಿನ ಬೆಳಗ್ಗೆ 198 ಪಟ್ಟು ಹೆಚ್ಚು ಬೇಡಿಕೆ ಬಂದಿತ್ತು. ಇಂದು ಅಂತಿಮ ದಿನದ ಬಿಡ್ಡಿಂಗ್ ಆಗಿತ್ತು.
ಈ ಇನ್ಷಿಯಲ್ ಪಬ್ಲಿಕ್ ಆಫರ್ ಇದ್ದದ್ದು 1.32 ಕೋಟಿ ಷೇರುಗಳಿಗೆ (ಆಂಕರ್ ಬುಕ್ ಹೊರತುಪಡಿಸಿ), ಆದರೆ 262.1 ಈಕ್ವಿಟಿ ಷೇರುಗಳಿಗೆ ಬಿಡ್ ಬಂದಿತ್ತು. ನಾನ್ ಇನ್ ಸ್ಟಿಟ್ಯೂಷನಲ್ ಹೂಡಿಕೆದಾರರಿಗೆ ಮೀಸಲಿಟ್ಟಿದ್ದ ಷೇರುಗಳಿಗೆ 620.85 ಪಟ್ಟು ಹೆಚ್ಚು ಬೇಡಿಕೆ ಬಂದಿದೆ. ಅದರಲ್ಲಿ ಕ್ವಾಲಿಫೈಡ್ ಇನ್ ಸ್ಟಿಟ್ಯೂಷನಲ್ ಬೈಯರ್ಸ್ (QIB) 176.85 ಪಟ್ಟು ಹೆಚ್ಚು ಬೇಡಿಕೆ ಸಲ್ಲಿಸಿದ್ದಾರೆ.
ರೀಟೇಲ್ ಹೂಡಿಕೆದಾರರಿಗೆ ಮತ್ತು ಸಿಬ್ಬಂದಿಗೆ ಮೀಸಲಿರುವ ಷೇರುಗಳಿಗೆ ಕ್ರಮವಾಗಿ 29.3 ಹಾಗೂ 45.45 ಪಟ್ಟು ಹೆಚ್ಚು ಬೇಡಿಕೆ ಬಂದಿದೆ. ಈ ಐಪಿಒನಲ್ಲಿ ಹೊಸದಾಗಿ 40.54 ಕೋಟಿ ರುಪಾಯಿ ಹಾಗೂ 500 ಕೋಟಿ ಆಫರ್ ಫಾರ್ ಸೇಲ್ (ಒಎಫ್ ಎಸ್) ಒಳಗೊಂಡಿದೆ. ಸಾರ್ವಜನಿಕರ ವಿತರಣೆಗೆ ಪ್ರತಿ ಷೇರಿಗೆ ರು. 286ರಿಂದ 288 ದರ ನಿಗದಿ ಮಾಡಲಾಗಿದೆ.

Mrs Bectors ಫುಡ್ ಸ್ಪೆಷಾಲಿಟೀಸ್ ರಫ್ತು ಮಾರುಕಟ್ಟೆಯಲ್ಲಿ ಶೇಕಡಾ ಹನ್ನೆರಡರಷ್ಟು ಪಾಲನ್ನು ಹೊಂದಿದೆ. ಬಿಸ್ಕೆಟ್ ರಫ್ತಿನ ಒಟ್ಟು ಮೌಲ್ಯದಲ್ಲಿ ಶೇಕಡಾ ಐವತ್ತರಷ್ಟು ಇದರ ಪಾಲಿದೆ. ಇನ್ನು ಭಾರತದಲ್ಲಿ 4.5 ಪರ್ಸೆಂಟ್ ಮಾರ್ಕೆಟ್ ಪಾಲನ್ನು ಹೊಂದಿದೆ.
More From GoodReturns

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?



Click it and Unblock the Notifications