ಟಾಟಾ ಗ್ರೂಪ್ ಮಾಲೀಕತ್ವದ ಏರ್ ಇಂಡಿಯಾ ಸಂಸ್ಥೆ ಇತ್ತೀಚೆಗೆ ಇತಿಹಾಸದಲ್ಲೇ ಅತೀ ದೊಡ್ಡ ಮಲ್ಟಿ ಬಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿದೆ. ಫ್ರಾನ್ಸ್‌ನ ಏರ್‌ಬಸ್ ಮತ್ತು ಅಮೆರಿಕಾದ ವಿಮಾನ ತಯಾರಕ ಸಂಸ್ಥೆ ಬೋಯಿಂಗ್ ಜೊತೆ ಒಟ್ಟು 470 ಪ್ರಯಾಣಿಕ ವಿಮಾನ ಖರೀದಿಯ ಡೀಲ್ ಅನ್ನು ಮಾಡಿದೆ. ಇದಾದ ಬಳಿಕ ಏರ್‌ಇಂಡಿಯಾಕ್ಕೆ 6,500ಕ್ಕೂ ಅಧಿಕ ಪೈಲಟ್‌ಗಳ ಅಗತ್ಯವಿದೆ.
ತನ್ನ ಸಂಸ್ಥೆಯ ವಿಸ್ತಾರ ಹೆಚ್ಚಿಸಲು ಏರ್ ಇಂಡಿಯಾ ಹೊಸದಾಗಿ 470 ವಿಮಾನಗಳನ್ನು ಖರೀದಿ ಮಾಡುತ್ತಿದೆ. ಈಗ ಏರ್‌ಇಂಡಿಯಾವು ಏರ್‌ಬಸ್ ಸಂಸ್ಥೆಯಿಂದ 250 ವಿಮಾನಗಳು ಮತ್ತು ಬೋಯಿಂಗ್‌ನಿಂದ 220 ವಿಮಾನಗಳ ಖರೀದಿಗೆ ಮುಂದಾಗಿದೆ. ಇದು ಇತಿಹಾಸದಲ್ಲೇ ಅತೀ ದೊಡ್ಡ ಡೀಲ್ ಆಗಿದೆ. ಇನ್ನು ಏರ್‌ಇಂಡಿಯಾದ 113 ವಿಮಾನಗಳಿಗೆ 1,600 ಪೈಲಟ್‌ಗಳು ಇದ್ದಾರೆ.
ಇನ್ನು ಇನ್ನೆರಡು ಏರ್‌ಲೈನ್ಸ್‌ಗಳಾದ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಏರ್‌ಏಷ್ಯಾ ಇಂಡಿಯಾ 54 ವಿಮಾನಗಳ ನಿರ್ವಹಣೆ ಒಟ್ಟಾಗಿ 850 ಪೈಲಟ್‌ಗಳನ್ನು ಹೊಂದಿದೆ. ವಿಸ್ತಾರಾವು 600ಕ್ಕೂ ಅಧಿಕ ಪೈಲಟ್‌ಗಳನ್ನು ಹೊಂದಿದೆ. ಈ ಸಂಸ್ಥೆಯಲ್ಲಿ 53 ವಿಮಾನಗಳು ಇದೆ. ಏರ್‌ಇಂಡಿಯಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್, ವಿಸ್ತಾರಾ ಮತ್ತು ಏರ್‌ಏಷ್ಯಾ ಇಂಡಿಯಾ 220 ವಿಮಾನಗಳ ಹಾರಾಟ ನಿರ್ವಹಣೆಗೆ 3 ಸಾವಿರ ಪೈಲಟ್‌ಗಳನ್ನು ಹೊಂದಿದೆ.

ಏರ್‌ಇಂಡಿಯಾ ಖರೀದಿಸುವ ವಿಮಾನಗಳ ಮಾಹಿತಿ
ಏರ್‌ಬಸ್‌ನ A350ನಲ್ಲಿ ಎರಡು ವರ್ಜನ್‌ಗಲಿದೆ. ಒಂದು A350-900 ಮತ್ತೊಂದು A350-1000 ಆಗಿದೆ. ಏರ್‌ಬಸ್‌ನ ಕಡಿಮೆ ವಿಸ್ತಾರದ ವಿಮಾನದಲ್ಲಿ A320 ಮತ್ತು A220 ವಿಮಾನಗಳು ಇರಲಿದೆ. ಭಾರತದಲ್ಲಿ ಈಗಾಗಲೇ ಹಲವಾರು ಏರ್‌ಲೈನ್ ಸಂಸ್ಥೆಗಳ ಬಳಿ A320 ಶೈಲಿಯ ವಿಮಾನಗಳಿದೆ. ಇನ್ನು ಬೋಯಿಂಗ್ ವಿಮಾನ ಖರೀದಿಯ ಬಗ್ಗೆ ಲೀಸ್ಟ್ ಅನ್ನು ನೀಡಲಾಡಗಿದೆ. 20 ಬೋಯಿಂಗ್ 787, 10 ಬೋಯಿಂಗ್ 777-9 ವಿಸ್ತಾರವಾದ ವಿಮಾನ, ಮತ್ತು 190 ಬೋಯಿಂಗ್ 737 MAX ವಿಮಾನ ಖರೀದಿಯ ಮಾತುಕತೆ ನಡೆದಿದೆ. ಇನ್ನು ಏರ್ ಇಂಡಿಯಾದ ಉದ್ಯೋಗಿಗಳ ಸಮವಸ್ತ್ರವನ್ನು ಕೂಡಾ ಬದಲಾವಣೆ ಮಾಡುವ ಸಾಧ್ಯತೆಯಿದೆ. ಕಳೆದ ತಿಂಗಳು 400 ಮಿಲಿಯನ್ ಡಾಲರ್ ವ್ಯಯಿಸಿ ವಿಮಾನದಲ್ಲಿ ಹಲವಾರು ಬದಲಾವಣೆಗಳನ್ನು ಏರ್ ಇಂಡಿಯಾ ಮಾಡಿದೆ.
ಏರ್‌ಇಂಡಿಯಾದ A350 ವಿಮಾನಕ್ಕೆ 30 ಪೈಲಟ್, 15 ಕಮಾಂಡರ್‌ಗಳು ಮತ್ತು 15 ಸಿಬ್ಬಂದಿಗಳು ಬೇಕಾಗುತ್ತದೆ. ಒಟ್ಟಾಗಿ 1,200 ಪೈಲಟ್‌ಗಳ ಅಗತ್ಯವಿದೆ. ಇನ್ನು ಬೋಯಿಂಗ್ 777 ವಿಮಾನಕ್ಕೆ 26 ಪೈಲಟ್‌ಗಳ ಅಗತ್ಯವಿದೆ. ಸಂಸ್ಥೆಯ ಬಳಿ ಒಟ್ಟಾಗಿ 10 ವಿಮಾನಗಳಿದ್ದರೆ, 260 ಪೈಲಟ್‌ಗಳ ಅಗತ್ಯವಿರುತ್ತದೆ. 20 ಬೋಯಿಂಗ್ 787 ವಿಮಾನಗಳಿಗೆ 400 ಪೈಲಟ್‌ಗಳ ಅಗತ್ಯವಿದೆ.


Click it and Unblock the Notifications