ಬೆಂಗಳೂರು, ಜೂನ್ 18: ವಲಸಿಗರಿಗೆ ವಾಸಿಸಲು ಮುಂಬೈ ಭಾರತದ ಅತ್ಯಂತ ದುಬಾರಿ ನಗರವಾಗಿದೆ ಎಂದು ಮಾನವ ಸಂಪನ್ಮೂಲ ಕನ್ಸಲ್ಟೆನ್ಸಿ ಮರ್ಸರ್‌ನ 2024 ರ ಜೀವನ ವೆಚ್ಚದ ಸಮೀಕ್ಷೆಯ ಬಹಿರಂಗಪಡಿಸಿದೆ. 2013 ರಲ್ಲಿ ಸಮೀಕ್ಷೆ ಪ್ರಾರಂಭವಾದಾಗಿನಿಂದ ಈ ನಗರವು ಭಾರತದ ಅತ್ಯಂತ ದುಬಾರಿ ನಗರಗಳಲ್ಲಿ ಅಗ್ರಸ್ಥಾನದಲ್ಲಿದೆ. ಇದಾದ ಬಳಿಕ ದೆಹಲಿ ಸ್ಥಾನ ಪಡೆದುಕೊಂಡಿದೆ.
ಸೋಮವಾರ ಬಿಡುಗಡೆಯಾದ 2024 ಮರ್ಸರ್ ಕಾಸ್ಟ್ ಆಫ್ ಲಿವಿಂಗ್ ಸಮೀಕ್ಷೆಯಲ್ಲಿ ವಾಣಿಜ್ಯ ರಾಜಧಾನಿ ಭಾರತದ ಅತ್ಯಂತ ದುಬಾರಿ ನಗರಗಳಲ್ಲಿ ಅಗ್ರಸ್ಥಾನದಲ್ಲಿದೆ.

ಏಷ್ಯಾದಲ್ಲಿ ಮುಂಬೈ ಮತ್ತು ದೆಹಲಿ ನಗರಗಳು ಶ್ರೇಯಾಂಕದಲ್ಲಿ ಮೇಲ್ಮುಖ ಚಲನೆಯನ್ನು ಕಂಡಿವೆ. ಮುಂಬೈ ಆರು ಸ್ಥಾನ ಮೇಲೇರಿದ್ರೆ, ದೆಹಲಿ ಎರಡು ಸ್ಥಾನ ಮೇಲಕ್ಕೇರಿದೆ. ಇದರ ಪರಿಣಾಮವಾಗಿ, ಮುಂಬೈ ಈಗ ಏಷ್ಯಾದಲ್ಲಿ ಸಮೀಕ್ಷೆ ನಡೆಸಿದ ನಗರಗಳಲ್ಲಿ ವಲಸಿಗರಿಗೆ 21 ನೇ ಅತ್ಯಂತ ದುಬಾರಿಯಾಗಿದೆ, ಆದರೆ ದೆಹಲಿ 30 ನೇ ಸ್ಥಾನದಲ್ಲಿದೆ. ಜಾಗತಿಕವಾಗಿ ನೋಡುವುದಾದರೆ , ಕಳೆದ ವರ್ಷದಿಂದ ಇದು 11 ಸ್ಥಾನ ಮೇಲೆಕ್ಕೇರಿ ಸಮೀಕ್ಷೆಗೆ ಒಳಪಡಿಸಿದ 226 ನಗರಗಳಲ್ಲಿ ಮುಂಬೈ 136 ನೇ ಸ್ಥಾನದಲ್ಲಿದೆ.
ಹಾಂಗ್ ಕಾಂಗ್, ಸಿಂಗಾಪುರ್, ಜ್ಯೂರಿಚ್( ಸ್ವಿಟ್ಜರ್ಲೆಂಡ್), ಜಿನೀವಾ (ಸ್ವಿಟ್ಜರ್ಲೆಂಡ್),ಬಾಸೆಲ್( ಸ್ವಿಟ್ಜರ್ಲೆಂಡ್) ಬರ್ನ್( ಸ್ವಿಟ್ಜರ್ಲೆಂಡ್) ನ್ಯೂಯಾರ್ಕ್ , ಲಂಡನ್( ಯುನೈಟೆಡ್ ಕಿಂಗ್ಡಮ್) ನಸ್ಸೌ ( ಬಹಾಮಾಸ್) ಲಾಸ್ ಏಂಜಲೀಸ್ ವಿಶ್ವದ ಟಾಪ್ 10 ಅತ್ಯಂತ ದುಬಾರಿ ನಗರಗಳಾಗಿವೆ.
ವಿಶ್ವದಾದ್ಯಂತ 226 ನಗರಗಳನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿದ್ದು ಮುಂಬೈ 11 ಸ್ಥಾನ ಮೇಲೇರಿ 136 ನೇ ಸ್ಥಾನ ಪಡೆದರೆ, ದೆಹಲಿ 4 ಸ್ಥಾನ ಮೇಲೇರಿ 164 ನೇ ಸ್ಥಾನಕ್ಕೆ ತಲುಪಿದೆ. ಭಾರತದ ಇನ್ನುಳಿದ ನಗರಗಳು ಈ ಪಟ್ಟಿಯನ್ನು ಮಿಶ್ರ ಪ್ರವೃತ್ತಿ ತೋರಿದ್ದು, ಚೆನ್ನೈ ಐದು ಸ್ಥಾನಗಳನ್ನು ಕಳೆದುಕೊಂಡು 189, ಬೆಂಗಳೂರು ಆರು ಸ್ಥಾನ ಕಳೆದುಕೊಂಡು 195, ಹೈದರಬಾದ್ ಸ್ಥಾನ ಬದಲಾಯಿಸದೇ 202ರಲ್ಲಿ ಉಳಿದುಕೊಂಡಿದೆ. ಇನ್ನು ಪುಣೆ ಎಂಟು ಸ್ಥಾನ ಜಿಗಿದು 205ಕ್ಕೆ , ಕೋಲ್ಕತ್ತಾ ನಾಲ್ಕು ಸ್ಥಾನ ಮೇಲಕ್ಕೇರಿ 207 ಕ್ಕೆ ತಲುಪಿದೆ.
"ಡ್ರೀಮ್ ಸಿಟಿ " ಎಂದು ಕರೆಯಲ್ಪಡುವ ಮುಂಬೈ, ಅದರ ಹೆಚ್ಚಿನ ಜೀವನ ವೆಚ್ಚದ ಕಾರಣದಿಂದಾಗಿ ಅನೇಕರಿಗೆ ದೂರದ ಕನಸಾಗಿ ಉಳಿಯುವ ಸಾಧ್ಯತೆಯಿದೆ. ರಿಯಲ್ ಎಸ್ಟೇಟ್ ಮಾತ್ರವಲ್ಲ, ಬಹುತೇಕ ಬಾಲಿವುಡ್ ತಾರೆಯರು ಮೂಲೆಯನ್ನು ಹೊಂದಿರುವ ಹಿಂದಿ ಚಿತ್ರರಂಗದ ತವರೂರು ಮುಂಬೈನಲ್ಲಿ ಸರಕುಗಳ ಬೆಲೆಯೂ ಹೆಚ್ಚಾಗಿದೆ.
ವಿವಿಧ ನಗರದಲ್ಲಿ ಪರ್ಸನಲ್ ಕೇರ್ ಉತ್ಪನ್ನಗಳ ಬೆಲೆ:
ಭಾರತೀಯ ನಗರಗಳ ವಿಷಯಕ್ಕೆ ಬಂದಾಗ, ಸೌಂದರ್ಯವರ್ಧಕಗಳು, ಟಾಯೈಲೆಟ್ರಿಸ್ , ಸೌಂದರ್ಯ ಉತ್ಪನ್ನಗಳು ಸೇರಿದಂತೆ ವೈಯಕ್ತಿಕ ಆರೈಕೆ ಉತ್ಪನ್ನಗಳು ಮುಂಬೈನಲ್ಲಿ ಅತ್ಯಂತ ದುಬಾರಿಯಾಗಿದೆ. ನಂತರ ಚೆನ್ನೈ ಈ ಸ್ಥಾನದಲ್ಲಿ ಕೋಲ್ಕತ್ತಾದಲ್ಲಿ ಅವುಗಳ ಬೆಲೆ ಕಡಿಮೆಯಾಗಿದೆ
ವಸತಿ ಬಾಡಿಗೆಗಳು ದೆಹಲಿಯಲ್ಲಿ ವಲಸಿಗರಿಗೆ 12-15 ಪ್ರತಿಶತದಷ್ಟು ಹೆಚ್ಚಳವನ್ನು ಕಂಡರೆ, ಮುಂಬೈ ಶೇಕಡಾ 6-8, ಬೆಂಗಳೂರು ಶೇಕಡಾ 3-6 ಮತ್ತು ಪುಣೆ, ಹೈದರಾಬಾದ್ ಮತ್ತು ಚೆನ್ನೈ ಶೇಕಡಾ 2-4 ರಷ್ಟು ಏರಿಕೆ ಕಂಡಿದೆ. ಹಾಲು ಮತ್ತು ಡೈರಿ ಉತ್ಪನ್ನಗಳು, ಬ್ರೆಡ್ ಉತ್ಪನ್ನಗಳು, ಪಾನೀಯಗಳು, ತೈಲಗಳು, ಹಣ್ಣುಗಳು ಮತ್ತು ತರಕಾರಿಗಳು ಕೋಲ್ಕತ್ತಾದಲ್ಲಿ ಅತ್ಯಂತ ಕೈಗೆಟಕುವ ದರದಲ್ಲಿದ್ದು, ಪುಣೆ ನಂತರದ ಸ್ಥಾನದಲ್ಲಿದೆ. ಇನ್ನು ಆಲ್ಕೋಹಾಲ್ ಮತ್ತು ತಂಬಾಕು ವಸ್ತುಗಳು ದೆಹಲಿಯಲ್ಲಿ ಅಗ್ಗವಾಗಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Bengaluru Airport: ಬೆಂಗಳೂರು ಏರ್ಪೋರ್ಟ್ಗೆ 2025ರ ACI ಪ್ರಶಸ್ತಿ... ಪ್ರಯಾಣಿಕರ ಹೃದಯ ಗೆದ್ದ ವಿಮಾನ ನಿಲ್ದಾಣ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ



Click it and Unblock the Notifications