Namma Metro Fare Hike: ಮೆಟ್ರೋ ದರ ಏರಿಕೆ: ರೈಲಿನ ಒಳಗೇ ಪ್ರತಿಭಟನೆ.. ಬೆಲೆ ಇಳಿಸಲು ಆಗ್ರಹ

ನಮ್ಮ ಮೆಟ್ರೋ ಪ್ರಯಾಣ ದರ(Metro fare hike)ಏರಿಕೆಗೆ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ. ಈ ಕರುತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟನೆಯ ಕಿಚ್ಚುನ್ನು ಸಹ ಸಾರ್ವಜನಿಕರು ವ್ಯಕ್ತಪಡಿಸಿದ್ದರು.ಇದರಿಂದ ಮೆಟ್ರೊ (Metro) ಪ್ರಯಾಣಿಕ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗತ್ತಲೇ ಇದೆ. ಆದ್ರೆ ಇದೀಗ ಮೊಟ್ರೋ ದರ ಏರಿಕೆ ವಿರುದ್ಧ ರೈಲಿನ ಒಳಗೇ ಪ್ರತಿಭಟನೆ ಮಾಡಿ ಬೆಲೆ ಏರಿಗೆ ಕಡಿಮೆ ಮಾಡಿ ಎಂದು ಆಗ್ರಹ ಮಾಡಿದ್ದಾರೆ.

ಹೌದು,ಫೆಬ್ರವರಿ 9ರ ಭಾನುವಾರದಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದೆ.ಈ ಕುರಿತು ಭಾರೀ ಚರ್ಚೆಗಳು ನಡೆಯುತ್ತಲೇ ಇವೆ. 2017ರ ಬಳಿಕ ಇದೇ ಮೊದಲ ಬಾರಿಗೆ ಪ್ರಯಾಣ ದರ ಏರಿಕೆ ಮಾಡಲಾಗಿತ್ತು.ಮತ್ತೆ ಬಿಎಂಆರ್ ಸಿಎಲ್‌ ಬೆಲೆ ಏರಿಕೆಯನ್ನು ಇದ್ದ ಕೆಲವು ಮಾರ್ಗಗದಲ್ಲಿ ಮಾತ್ರ ಬದಲಾವಣೆಯನ್ನು ಮಾಡಿತ್ತು.ಆದ್ರೆ ಪ್ರಯಾಣಿಕರ ಜೇಬಿಗೆ ಮಾತ್ರ ಕತ್ತರಿ ತಪ್ಪಲಿಲ್ಲ .. ಇದನೆಲ್ಲಾ ಪರಿಗಣನೆ ತೆಗೆದುಕೊಂಡು ಇದೀಗ ಮೆಟ್ರೊ ಪ್ರಯಾಣ ದರ ಏರಿಕೆ ವಿರೋಧಿಸಿ ಭಾನುವಾರ ಮೆಟ್ರೊ ರೈಲಿನ ಒಳಗೆ ಪ್ರತಿಭಟನೆ ನಡೆಸಿದರು.

ಮೆಟ್ರೋ ದರ ಏರಿಕೆ: ರೈಲಿನ ಒಳಗೇ ಪ್ರತಿಭಟನೆ.. ಬೆಲೆ ಇಳಿಸಲು ಆಗ್ರಹ

ಎಲ್ಲಿಂದ ಪ್ರತಿಭಟನೆ ಆರಂಭಿಸಿದ್ದರು..?

ಗ್ರೀನ್ ಪೀಸ್ ಇಂಡಿಯಾ ಸಂಘಟನೆಯ ಕಾರ್ಯಕರ್ತರು ಜ್ಞಾನಭಾರತಿ ಮೆಟ್ರೊ ನಿಲ್ದಾಣದಲ್ಲಿ ಮೆಟ್ರೋ ಪ್ರವೇಶಿಸಿದ ಅವರು ಮಹಾತ್ಮ ಗಾಂಧಿ ಮೆಟ್ರೋ ನಿಲ್ದಾಣದಲ್ಲಿ ಇಳಿಯುವ ಮೊದಲು ಬೆಲೆ ಏರಿಕೆಯಿಂದ ಅಸಮಾನತೆ ಏರಿಕೆಯ ಫಲಕ ಪ್ರದರ್ಶಿಸಿ ಪ್ರತಿಭಟನೆಯನ್ನು ನಡೆಸಿದ್ದಾರೆ.

ಮೆಟ್ರೊ ನಿಲ್ದಾಣದಿಂದ ಹೊರಬಂದ ಬಳಿಕ ಮೆಟ್ರೊ ಪರಿಷ್ಕೃತ ದರವನ್ನು ಹಿಂಪಡೆಯಿರಿ ಎಂದು ಆಗ್ರಹದ ಫಲಕವನ್ನು ಸಹ ತೋರಿಸಿದ್ದಾರೆ.

ಶೇ 13ರಷ್ಟು ಪ್ರಯಾಣಿಕರ ಸಂಖ್ಯೆ ಇಳಿಕೆ

ನಮ್ಮ ಮೆಟ್ರೊ ಪ್ರಯಾಣ ದರ ಏರಿಕೆಯಾದ ಬಳಿಕ ಶೇ 13ರಷ್ಟು ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ ಕಂಡಬಂದಿದೆ, ಬೆಲೆ ಏರಿಕೆ ಪ್ರಯಾಣಿಕರಿಗೆ ಮೇಲೆ ಮತ್ತಷ್ಟು ಹೊರೆಯಾಗಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಗ್ರೀನ್ ಪೀಸ್ ಇಂಡಿಯಾ ಪದಾಧಿಕಾರಿಗಳು ಮಾಹಿತಿಯನ್ನು ತಿಳಿಸಿದ್ದಾರೆ.

ಗ್ರೀನ್‌ಪೀಸ್ ಇಂಡಿಯಾ ಸಮೀಕ್ಷೆ

ಗ್ರೀನ್‌ಪೀಸ್ ಇಂಡಿಯಾ ಸಮೀಕ್ಷೆಯ ಪ್ರಕಾರ, ಶೇ. 72.9 ರಷ್ಟು ಪ್ರಯಾಣಿಕರು ಈಗ ಊಟಕ್ಕೆ ಮಾಡುವಷ್ಟೇ ಪ್ರಯಾಣ ಮಾಡುವುದಲಕ್ಕಾಗಿ ಖರ್ಚು ಮಾಡುತ್ತಿದ್ದಾರೆ. ಆರ್ಥಿಕ ಹೊರೆಯನ್ನು ಹೊರೆಯನ್ನು ಹೆಚ್ಚು ಮಾಡುತ್ತಿದೆ, ಬೆಲೆ ಏರಿಕೆ ನಂತರ ಪ್ರಯಾಣಿಕರ ಸಂಖ್ಯೆ ಶೇ. 13 ರಷ್ಟು ಕಡಿಮೆಯಾಗಿದೆ ಎಂದು ಸಮೀಕ್ಷೆಯು ಅಭಿಪ್ರಾಯವನ್ನು ಅವರು ಕಂಡುಕೊಂಡಿದ್ದಾರೆ.

ಗ್ರೀನ್‌ಪೀಸ್ ಇಂಡಿಯಾ ನಡೆಸಿದ ಸಮೀಕ್ಷೆಯಲ್ಲಿ ಮೆಟ್ರೋ ಪ್ರಯಾಣಕರು ಶೇ 40.4ರಷ್ಟು ಜನರು ಮೆಟ್ರೊವನ್ನು ಪ್ರಾಥಮಿಕ ಸಾರಿಗೆ ವಿಧಾನವಾಗಿ ಬಳಕೆ ಮಾಡಿಕೊಳ್ಳುತ್ತಾರೆ. ಶೇ 73.4ರಷ್ಟು ಜನರು ಸಾರಿಗೆಗಾಗಿ ದಿನಕ್ಕೆ 50 ರಿಂದ 150 ಖರ್ಚು ಮಾಡುತ್ತಾರೆ. ಅನಿವಾರ್ಯ ಇದ್ದ ಸಮಯದಲ್ಲಿ ಶೇ 75.4ರಷ್ಟು ಜನರು ಮೆಟ್ರೊ ಬಿಟ್ಟು ಬೇರೆ ಸಾರಿಗೆಗಳಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ಗ್ರೀನ್‌ಪೀಸ್‌ ಇಂಡಿಯಾ ಮಾಹಿತಿಯನ್ನು ತಿಳಿಸಿದೆ.

ಬೆಂಗಳೂರಿನಲ್ಲಿ ಕಷ್ಟಪಟ್ಟು ಕಡಿಮೆ ಸಂಬಳಕ್ಕೆ ಕೆಲಸ ಮಾಡುವವರು, ವಿದ್ಯಾರ್ಥಿಗಳು ಸೇರಿದಂತೆ ಅನೇಕರಿಗೆ ಬೆಲೆ ಏರಿಕೆ ಜೇಬು ಖಾಲಿ ಮಾಡಿಸಿದೆ ಎಂದು ಗ್ರೀನ್‌ಪೀಸ್ ಇಂಡಿಯಾ ಸಂಘಟನೆ ಆರೋಪ ಮಾಡುತ್ತಿದೆ.

ಫೆಬ್ರವರಿ 9ರ ದರ ಹೆಚ್ಚಳಕ್ಕೆ ಮುಂಚಿನ ತಿಂಗಳಿನಲ್ಲಿ ಸರಾಸರಿ ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಸುಮಾರು 8.2 ಲಕ್ಷ ಜನರು ಇದ್ದರು.ನಂತರದ 20 ದಿನಗಳಲ್ಲಿ ಈ ಸಂಖ್ಯೆ ಸುಮಾರು 7.1 ಲಕ್ಷಕ್ಕೆ ಇಳಿದಿದೆ ಶೇ. 13 ರಷ್ಟು ಇಳಿಕೆಯಾಗಿದೆ.

ಫೆಬ್ರವರಿ 23 ರಂದು 4.9 ಲಕ್ಷಕ್ಕಿಂತ ಸ್ವಲ್ಪ ಹೆಚ್ಚು ಪ್ರಯಾಣಿಕರ ಸಂಖ್ಯೆ ದಾಖಲಾಗಿದೆ. ಹೆಚ್ಚಳದ ನಂತರ, ದೈನಂದಿನ ಪ್ರಯಾಣಿಕರ ಸಂಖ್ಯೆ 8 ಲಕ್ಷವನ್ನು ಎರಡು ಬಾರಿ ಮಾತ್ರ ದಾಟಿದೆ. ಫೆಬ್ರವರಿ 10 ಮತ್ತು 24 ರಂದು ಶುಲ್ಕ ಹೆಚ್ಚಳದಿಂದಾಗಿ ಸಾವಿರಾರು ಪ್ರಯಾಣಿಕರು ತಮ್ಮ ಖಾಸಗಿ ವಾಹನಗಳು ಅಥವಾ ನಗರ ಬಸ್‌ಗಳ ಕಡೆಗೆ ಮುಖವನ್ನು ಮಾಡಿದ್ದಾರೆ.

ಮೆಟ್ರೋ ಬಳಸುವ ವಿದ್ಯಾರ್ಥಿಗಳಿಗೂ ಸಹ ದರ ಏರಿಕೆಯ ಬಿಸಿ ತಟ್ಟಿದ್ದು, ಅವರೂ ಕೂಡ ಮೆಟ್ರೋ ಸಂಚಾರವನ್ನು ಮಾಡಲು ಹೀದೇಟು ಹಾಕುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+