ಮೆಟ್ರೋ ಪ್ರಯಾಣ ದರ(Metro fare hike)ಏರಿಕೆಯಿಂದ ಮೆಟ್ರೊ (Metro) ಪ್ರಯಾಣಿಕರು ದಿನದಿಂದ ದಿನಕ್ಕೆ ಕಡಿಮೆಯಾಗತ್ತಲೇ ಇದೆ. ಹೌದು,2017ರ ಬಳಿಕ ಇದೇ ಮೊದಲ ಬಾರಿಗೆ ಪ್ರಯಾಣ ದರ ಏರಿಕೆ ಮಾಡಲಾಗಿದ್ದು,ಫೆಬ್ರವರಿ 9ರ ಭಾನುವಾರದಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದೆ.ಈ ಕುರಿತು ಭಾರೀ ಚರ್ಚೆಗಳು ನಡೆಯುತ್ತಲೇ ಇವೆ..
ಜನವರಿ ತಿಂಗಳಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ ಕಂಡಿತ್ತು.ಆದ್ರೆ ಇದೀಗ ಫೆಬ್ರವರಿಯ ಎರಡನೇ ವಾರದಲ್ಲಿ ಪ್ರಯಾಣ ದರಗಳನ್ನು ಪರಿಷ್ಕರಿಸಿ ಕಡಿಮೆ ಮಾಡಲಾಗಿತ್ತು ಆದರೂ ಸಹ ನಮ್ಮ ಮೆಟ್ರೋದಲ್ಲಿ ಸರಾಸರಿ ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.13 ರಷ್ಟು ಇಳಿಕೆ ಕಂಡುಬಂದಿದೆ.

ಫೆಬ್ರವರಿ 9ರ ದರ ಹೆಚ್ಚಳಕ್ಕೆ ಮುಂಚಿನ ತಿಂಗಳಿನಲ್ಲಿ ಸರಾಸರಿ ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಸುಮಾರು 8.2 ಲಕ್ಷ ಜನರು ಇದ್ದರು.ನಂತರದ 20 ದಿನಗಳಲ್ಲಿ ಈ ಸಂಖ್ಯೆ ಸುಮಾರು 7.1 ಲಕ್ಷಕ್ಕೆ ಇಳಿದಿದೆ ಶೇ. 13 ರಷ್ಟು ಇಳಿಕೆಯಾಗಿದೆ.
ಜನವರಿಯಲ್ಲಿ 2.5 ಕೋಟಿ ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸಿದ್ದರೆ, ಫೆಬ್ರವರಿಯಲ್ಲಿ ಈ ಸಂಖ್ಯೆ 2 ಕೋಟಿಗೆ ಇಳಿದಿದ್ದು, ಫೆಬ್ರವರಿಯಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ. 20 ರಷ್ಟು ಇಳಿಕೆ ಕಂಡು ಬಂದಿದೆ.
ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ಅಂಕಿ ಅಂಶಗಳು ಮಾಹಿತಿಯನ್ನು ತಿಳಿಸಿವೆ.
ನಮ್ಮ ಮೆಟ್ರೋ ಪ್ರಯಾಣ ದರದ ಏರಿಕೆಯಲ್ಲಿ ಸರಾಸರಿ ದರ ಏರಿಕೆ ಶೇ. 46 ಎಂದು ಬಿಎಂಆರ್‌ಸಿಎಲ್ ಹೇಳಿಕೊಂಡಿದ್ದರೂ ಇನ್ನೂ ಕೆಲವು ವಿಭಾಗಗಳಲ್ಲಿ ದರ ಹೆಚ್ಚಳ ಶೇ. 110 ರವರೆಗೆ ಇದೆ ಎಂದು ಪ್ರಯಾಣಿಕರು ಆರೋಪ ಮಾಡುತ್ತಿದ್ದಾರೆ.
ಬೆಂಗಳೂರು ಮೆಟ್ರೋ ಪ್ರಯಾಣ ದರ ಏರಿಕೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಆಕ್ರೋಶದ ಹಿನ್ನೆಲೆಯಲ್ಲಿ,ಕೆಲವು ಮಾರ್ಗದಲ್ಲಿ ದರ ಹೆಚ್ಚಳವನ್ನು ಕಡಿಮೆ ಮಾಡಲಾಗಿದೆ. ಆದರೆ, ದೀರ್ಘ ದೂರದ ಪ್ರಯಾಣಿಕರು ದರ ಮ್ಯಾಟ್ರಿಕ್ಸ್ ಮರುಪರಿಶೀಲನೆಯಿಂದ ತಮಗೆ ಯಾವುದೇ ಅನಉಕೂಲಗಳು ಆಗಿಲ್ಲ ಎಂದು ಆರೋಪಿಸಿದ್ದಾರೆ.
ದರ ಪರಿಷ್ಕರಣೆಯ ನಂತರ, ನಮ್ಮ ಮೆಟ್ರೋದ ಮೂಲ ದರವನ್ನು 10 ರೂ. ಮತ್ತು ಗರಿಷ್ಠ ದರ 90 ರೂ. ಎಂದು ನಿಗದಿಪಡಿಸಲಾಗಿದೆ. ದರ ಮ್ಯಾಟ್ರಿಕ್ಸ್‌ಗಳ ಪುನರ್ರಚನೆ ಹೊರತಾಗಿಯೂ, ಪ್ರಯಾಣಿಕರ ಸಂಖ್ಯೆ ಇನ್ನೂ ದಕ್ಷಿಣ ದಿಕ್ಕಿನತ್ತ ಇರುತ್ತದೆ.
ಫೆಬ್ರವರಿ 23 ರಂದು 4.9 ಲಕ್ಷಕ್ಕಿಂತ ಸ್ವಲ್ಪ ಹೆಚ್ಚು ಪ್ರಯಾಣಿಕರ ಸಂಖ್ಯೆ ದಾಖಲಾಗಿದೆ. ಹೆಚ್ಚಳದ ನಂತರ, ದೈನಂದಿನ ಪ್ರಯಾಣಿಕರ ಸಂಖ್ಯೆ 8 ಲಕ್ಷವನ್ನು ಎರಡು ಬಾರಿ ಮಾತ್ರ ದಾಟಿದೆ. ಫೆಬ್ರವರಿ 10 ಮತ್ತು 24 ರಂದು ಶುಲ್ಕ ಹೆಚ್ಚಳದಿಂದಾಗಿ ಸಾವಿರಾರು ಪ್ರಯಾಣಿಕರು ತಮ್ಮ ಖಾಸಗಿ ವಾಹನಗಳು ಅಥವಾ ನಗರ ಬಸ್‌ಗಳ ಕಡೆಗೆ ಮುಖವನ್ನು ಮಾಡಿದ್ದಾರೆ.
ಮೆಟ್ರೋ ಬಳಸುವ ವಿದ್ಯಾರ್ಥಿಗಳಿಗೂ ಸಹ ದರ ಏರಿಕೆಯ ಬಿಸಿ ತಟ್ಟಿದ್ದು, ಅವರೂ ಕೂಡ ಮೆಟ್ರೋ ಸಂಚಾರವನ್ನು ಮಾಡಲು ಹೀದೇಟು ಹಾಕುತ್ತಿದ್ದಾರೆ.
ಪ್ರಯಾಣಿಕರ ಸಂಖ್ಯೆಯ ಕುರಿತು ಬಿಎಂಆರ್‌ಸಿಎಲ್ ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕೇಳಿದಾಗ, ಎಂಡಿ ಮಹೇಶ್ವರ ರಾವ್ ನಾವು ಪ್ರಯಾಣಿಕರ ಡೇಟಾವನ್ನು ವಿಶ್ಲೇಷಿಸುತ್ತಿದ್ದೇವೆ ಮತ್ತು ಪ್ರಯಾಣಿಕರ ಮೇಲಿನ ಪರಿಣಾಮವನ್ನು ಗಮನವರಿಸುತ್ತೇವೆ ಎಂದು ಮಾಹಿತಿಯನ್ನು ತಿಳಿಸಿದ್ದಾರೆ.
ಮೆಟ್ರೋ ದರ ಏರಿಕೆಯನ್ನು ಬಿಎಂಆರ್‌ಸಿಎಲ್ ಮರುಪರಿಶೀಲಿಸುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿ "ನನಗೆ ಯಾವುದೇ ಪ್ರತಿಕ್ರಿಯೆಗಳಿಲ್ಲ ಎಂದು ಹೇಳಿಕೆಯನ್ನು ನೀಡಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದರ ಏರಿಕೆಯಿಂದ ತೊಂದರೆಗೊಳಗಾದವರ ಕುಂದುಕೊರತೆಗಳನ್ನು ಪರಿಹರಿಸಲು ಏಕೆ ಸಮಯ ತೆಗೆದುಕೊಳ್ಳುತ್ತಿವೆ ಎಂದು ಪ್ರಯಾಣಿಕರು ಪ್ರಶ್ನೆ ಮಾಡುತ್ತಿದ್ದಾರೆ.
ಕೈಗೆಟುಕುವ ಪ್ರಯಾಣವನ್ನಾಗಿ ಮಾಡುವ ಮೂಲಕ ನಗರದ ಜನದಟ್ಟಣೆಯನ್ನು ಕಡಿಮೆ ಮಾಡುವುದು ಮೆಟ್ರೋದ ಪ್ರಾಥಮಿಕ ಉದ್ದೇಶವಾಗಿತ್ತು. ಆದರೆ ಸರ್ಕಾರಗಳು ಜನರ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.
ನಮ್ಮ ಮೆಟ್ರೋದಲ್ಲಿ ಪ್ರಯಾಣಕ್ಕಾಗಿ ವಿದ್ಯಾರ್ಥಿಗಳು ತಿಂಗಳಿಗೆ 3,500 ರೂ. ಪಾವತಿಸುವ ಸ್ಥಿತಿಯಲ್ಲಿಲ್ಲ. ಇದು ಪೋಷಕರ ಮೇಲೆ ಹೊರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಮ್ಮ ಮೆಟ್ರೋದಲ್ಲಿ ದರ ಹೆಚ್ಚಳದ ಪರಿಷ್ಕೃತ ದರವನ್ನು ನೋಡಿದ ಜನರು, ಮೆಟ್ರೋಗಿಂತ ಬಿಎಂಟಿಸಿ ಬಸ್, ಖಾಸಗಿ ವಾಹನಗಳೇ ಉತ್ತಮ ಎಂದು ಹೇಳುತ್ತಿದ್ದಾರೆ.ಮೆಟ್ರೋದಲ್ಲಿ ಖಾಲಿ ಖಾಲಿ ಸೀಟುಗಳು ಇದೇ ಮೊದಲ ಭಾರೀ ಕಂಡು ಬರುತ್ತಿದೆ. ಮೆಟ್ರೋದಲ್ಲಿ ಪ್ರಯಾಣ ಮಾಡಲು ಜನರು ಹಿಂದೆ ಮುಂದೆ ನೋಡುತ್ತಿದ್ದಾರೆ.
ಬಿಎಂಟಿಸಿ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಮೆಟ್ರೋ ದರ ಏರಿಕೆ ಆಗಿರುವುದರಿಂದ ಪ್ರಯಾಣಿಕರು ಬಿಎಂಟಿಸಿ ಬಸ್ ಕಡೆಗೆ ಮುಖ ಮಾಡುತ್ತಿದ್ದಾರೆ.ಫೆಬ್ರವರಿ 3ರ ಸೋಮವಾರ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ 36.62 ಲಕ್ಷ. ಫೆಬ್ರವರಿ 10ರ ಸೋಮವಾರ ಇದು 37.22 ಲಕ್ಷಕ್ಕೆ ಏರಿಕೆಯಾಗಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications