ಇಲ್ಲಿ ಕೇಳಿ..! ಬೆಂಗಳೂರಿಗರೇ, ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಬಂದ್.. ಎಲ್ಲೆಲ್ಲಿ ತಿಳಿಯಿರಿ

ಬೆಂಗಳೂರಿಗರೇ ಇಲ್ಲಿ ಕೇಳಿ... ನೀವು ಇಂದು ಈ ಮಾರ್ಗದಲ್ಲಿ ಸಂಚಾರ ಮಾಡುತ್ತಿದ್ದರೆ ಕೂಡಲೇ ನಿಮ್ಮ ಮಾರ್ಗವನ್ನು ಬದಲಾವಣೆ ಮಾಡಿಕೊಳ್ಳಿ ಯಾಕೆಂದರೆ ಈ ಮಾರ್ಗದಲ್ಲಿ ಸಂಚಾರ ನಿರ್ಬಧವನ್ನು ಹೇರಲಾಗಿದೆ. ಹಾಗಿದ್ರೆ ಯಾವ ಮಾರ್ಗದಲ್ಲಿ ಸಂಚಾರ ನಿರ್ಬಧ ಜಾರಿಯಲ್ಲಿ ಇದೆ ಯಾಕೆ? ನೀವು ಬದಲಾವಣೆ ಮಾಡಿಕೊಳ್ಳಬಹುದಾದ ಮಾರ್ಗಗಳು ಯಾವುವು ? ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ.

ಹೌದು, ನಮ್ಮ ಮೆಟ್ರೋ 2ಎ ಹಂತ ನಿರ್ಮಾಣಕ್ಕಾಗಿ ಮಹದೇವಪುರ ಹಾಗೂ ಎಚ್‌ಎಎಲ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ರೈನ್ ಬೋ ಆಸ್ಪತ್ರೆ ಜಂಕ್ಷನ್ ಬಳಿಯ ದೊಡ್ಡನೆಕ್ಕುಂದಿಯ ಸೇಲಂ ಸೇತುವೆ ಮೇಲೆ ಸಿಮೆಂಟ್‌ ಗರ್ಡರ್ ಅಳವಡಿಸುವ ಕಾಮಗಾರಿ ಕೈಗೊಂಡಿರುವುದರಿಂದ ವಾಹನ ಸಂಚಾರ ನಿರ್ಬಧಗಳು ಇರಲಿವೆ.

ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಬಂದ್; ಎಲ್ಲಿ?

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ವತಿಯಿಂದ ದೊಡ್ಡನೆಕ್ಕುಂದಿಯ ರೈಲು ಮಾರ್ಗದ ಮೇಲೆ ಸಂಯೋಜಿತ ಉಕ್ಕಿನ ಗರ್ಡರ್ ಅನ್ನು ಪ್ರಾರಂಭಿಸಲು ಹೊರಟಿದ್ದು ಜ.27 ಮತ್ತು 28ರಂದು ಈ ಮಾರ್ಗದಲ್ಲಿ ಸಂಚಾರ ಬಂದ್ ಆಗಲಿದೆ ಪರ್ಯಾಯ ಮಾರ್ಗವನ್ನು ಸಂಚಾರ ವಿಭಾಗದ ಪೊಲೀಸ್‌ರು ಮಾಹಿತಿಯನ್ನು ತಿಳಿಸಿದ್ದಾರೆ.

ಹೊರ ವರ್ತುಲ ರಸ್ತೆಯ ಕೆಆರ್ ಪುರಂ ಕಡೆಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆಯವರೆಗೆ ರಸ್ತೆಯ ಇನ್ನೊಂದು ಬದಿಯಲ್ಲಿ ದ್ವಿಮುಖ ಸಂಚಾರ ವ್ಯವಸ್ಥೆ ಜಾರಿ ಮಾಡಲಾಗಿದೆ

ಎಲ್ಲಿ ಸಂಚಾರವನ್ನು ನಿರ್ಬಧಿಸಲಾಗಿದೆ?

ಮಾರತ್ತಹಳ್ಳಿಯಿಂದ ಟಿನ್ ಫ್ಯಾಕ್ಟರಿ ಕಡೆಗೆ ಒಆರ್‌ಆರ್ ಮಾರ್ಗದಲ್ಲಿ ಮೆಟ್ರೋ ಪಿಲ್ಲರ್ ಸಂಖ್ಯೆ 434-435 ರಿಂದ 200 ಮೀಟರ್ ವರೆಗೆ ರಸ್ತೆಯ ಎಡಭಾಗದಲ್ಲಿ ವಾಹನ ಸಂಚಾರವನ್ನು ನಿರ್ಬಂಧ ಮಾಡಲಾಗಿದೆ.

ಪರ್ಯಾಯ ಮಾರ್ಗಗಳು ಯಾವುವು?

ಮಾರತಹಳ್ಳಿಯಿಂದ ಟಿನ್ ಫ್ಯಾಕ್ಟರಿ ಮತ್ತು ಹೆಬ್ಬಾಳ ಕಡೆಗೆ ಹೋಗುವ ಪ್ರಯಾಣಿಕರು ಮಾರತಹಳ್ಳಿ ಮೇಲ್ಸೇತುವೆ ಬಳಿ ಎಡ ತಿರುವು ಪಡೆದು ಹಳೆ ವಿಮಾನ ನಿಲ್ದಾಣ ರಸ್ತೆ ಮೂಲಕ ಹೋಗಬೇಕು. ಸುರಂಜನ್ ದಾಸ್ ರಸ್ತೆ ಜಂಕ್ಷನ್‌ನಲ್ಲಿ, NGEF ಜಂಕ್ಷನ್‌ಗೆ ಹೋಗಲು ಬಲ ತಿರುವು ತೆಗೆದುಕೊಳ್ಳಿ ಅಲ್ಲಿಂದ ಬಲ ತಿರುವು ಪಡೆದು ಟಿನ್ ಫ್ಯಾಕ್ಟರಿ ಮತ್ತು ಹೆಬ್ಬಾಳ ಕಡೆಗೆ ನೀವು ಹೋಗಬೇಕು.

ಟಿನ್ ಫ್ಯಾಕ್ಟರಿಯಿಂದ ಮಾರತ್ತಹಳ್ಳಿಯ ಮಾರ್ಗದ ಪ್ರಯಾಣಿಕರು

ಟಿನ್ ಫ್ಯಾಕ್ಟರಿಯಿಂದ ಮಾರತ್ತಹಳ್ಳಿ ಕಡೆಗೆ ಹೋಗುವ ಪ್ರಯಾಣಿಕರು ಕೆಆರ್ ಪುರಂ ರೈಲು ನಿಲ್ದಾಣದ ಬಳಿ ಎಡ ತಿರುವು ಪಡೆದು ಐಟಿಪಿಎಲ್ ರಸ್ತೆ ಮೂಲಕ ಸಾಗಬೇಕು. ಹೂಡಿ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಕುಂದಲಹಳ್ಳಿ ಮಾರ್ಗವಾಗಿ ಮಾರತ್ತಹಳ್ಳಿ ತಲುಪಬೇಕು.

ಫೆ.1 ರಿಂದ ಮೆಟ್ರೋ ಪ್ರಯಾಣ ದರ ಏರಿಕೆ ಜಾರಿ?

ಬೆಂಗಳೂರಿಗರೇ ಇಲ್ಲಿ ಕೇಳಿ.. ಇನ್ನುಂದೆ ಮಟ್ರೋ ಪ್ರಯಾಣ ದುಬಾರಿಯಾಗಲಿದೆ. ಹೌದು,ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್‌) ಮುಂಬರುವ ಪ್ರಯಾಣ ದರ ಏರಿಕೆಯನ್ನು ಮಾಡಲು ಈಗಲೇ ಸರ್ಕಾರಕ್ಕೆ ಶಿಫಾರಸ್ಸು ಮಾಡಿತು. ಬೆಲೆ ಏರಿಕೆಯನ್ನು ಎಷ್ಟೇ ಗೌಪ್ಯವಾಗಿಟ್ಟಿದ್ದರೂ ಕೂಡ ಫೆಬ್ರುವರಿ 1 ರಿಂದ ದರ ಏರಿಕೆಯಾಗಲಿದೆ ಎಂಬ ಮಾಹಿತಿಯನ್ನು ತಿಳಿಸಿವೆ.

ಪ್ರಯಾಣ ದರ ಶೇ. 41 ರಷ್ಟು ಏರಿಕೆ

ಇನ್ಮಂದೆ ಪ್ರಯಾಣ ದರ ಶೇ. 41 ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ.ದರ ಪರಿಷ್ಕರಣೆ ಸಮಿತಿ ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ ಕಾಯ್ಕೆ 2002ರ ಅಡಿಯಲ್ಲಿ ಶೇ. 41 ರಷ್ಟು ಪ್ರಯಾಣ ದರ ಹೆಚ್ಚಳಕ್ಕೆ ಶಿಫಾರಸು ಮಾಡಿತು. ದರ ಪರಿಷ್ಕರಿಸಲು ರಚಿಸಲಾದ ಸಮಿತಿಯು ಶೇ. 41 ರಷ್ಟು ಹೆಚ್ಚಳವನ್ನು ಪ್ರಸ್ತಾಪ ಸಹ ಇದೆ. ಈಗ ಮೆಟ್ರೋ ಟೋಕನ್ ದರ ರೂ. 10 ರಿಂದ 60 ರ ನಡುವೆ ಇದ್ದು, ಮೆಟ್ರೋ ಕಾರ್ಡ್‌ಗಳ ಮೇಲೆ ಶೇ. 5 ರಷ್ಟು ರಿಯಾಯಿತಿ ಸಹ ಇದೆ.

ಇವರೇ ಶುಲ್ಕ ನಿಗದಿ ಸಮಿತಿಯಲ್ಲಿದ್ದವರು!

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) - ಆರ್ ಥರಾಣಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸತೀಂದರ್ ಪಾಲ್ ಸಿಂಗ್ ಕರ್ನಾಟಕದ ನಿವೃತ್ತ IAS ಅಧಿಕಾರಿ ಇವಿ ರಮಣ ರೆಡ್ಡಿ ಮೆಟ್ರೋ ಬೆಲೆ ಏರಿಕೆಯ ಕುರಿತು ಸಮಿತಿಯು ಅಕ್ಟೋಬರ್ 2, 28, 2024 ರ ನಡುವೆ ಸಾರ್ವಜನಿಕ ಪ್ರತಿಕ್ರಿಯೆಯನ್ನು ಸಂಗ್ರಹ ಮಾಡಿತು. ಡಿಸೆಂಬರ್ 16 ರಂದು ಸಾರ್ವಜನಿಕ ಪ್ರತಿಕ್ರಿಯೆಗಳ ಕೋರಿಕೆಯೂ ಮುಕ್ತಾಯವಾಗಿತು.

ನಮ್ಮ ಮೆಟ್ರೋ ಸಮಿತಿಯ ಬೆಲೆ ಏರಿಕೆಯ ತನ್ನ ಅಂತಿಮ ವರದಿಯನ್ನು ಕಳೆದ ವಾರ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಮಂಡಳಿಗೆ ಸಲ್ಲಿಕೆ ಮಾಡಿತು. ವಿಶ್ಲೇಷಣೆಯ ಆಧಾರದ ಮೇಲೆ ಸಮಿತಿಯು ನಮ್ಮ ಮೆಟ್ರೋ ಪ್ರಯಾಣದ ಬೆಲೆಯನ್ನು ಶೇ.40 ರಿಂದ 45 ರಷ್ಟು ಏರಿಕೆಗೆ ಶಿಫಾರಸು ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+