Nandini in UP: ಕರ್ನಾಟಕ ಹಾಲು ಒಕ್ಕೂಟ ನಂದಿನಿ ಈಗಾಗಲೇ ತನ್ನ ಉತ್ತಮ ಬ್ರ್ಯಾಂಡ್ ಮೂಲಕ ಕರ್ನಾಟಕ ಮಾತ್ರವಲ್ಲದೇ ಬೇರೆ ರಾಜ್ಯಗಳಲ್ಲೂ ಕೂಡ ಪ್ರಖ್ಯಾತಿಯನ್ನ ಹೊಂದಿದೆ.ಅಲ್ಲದೆ ಉತ್ತಮ ಹಾಲಿನ ಉತ್ಪನ್ನಗಳ ಮೂಲಕ ಮನೆಮಾತಾಗಿರುವ ಕೆಎಂಎಫ್ ತನ್ನ ಉತ್ಪನ್ನಗಳ ಜೊತೆಗೆ ರೆಡಿಮೇಡ್ ನಂದಿನಿ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಬೆಂಗಳೂರಿನಲ್ಲಿ ಅನಾವರಣಗೊಳಿಸಿದೆ.ಇನ್ಮುಂದೆ ನಂದಿನಿ ಹಾಲು (Nandini Milk) ಈ ತಿಂಗಳಾಂತ್ಯದಲ್ಲಿ ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಡೈರಿ ಮಾರುಕಟ್ಟೆಗೆ ಪ್ರವೇಶಿಸಲಿದೆ.
ಹೌದು, ನಂದಿನಿ ಇನ್ಮುಂದೆ ಉತ್ತರ ಪ್ರದೇಶದ ಪ್ರಸಿದ್ಧ ಪ್ರವಾಸಿ ಸ್ಥಳಗಳಾದ ತಾಜ್‌ಮಹಲ್ ಖ್ಯಾತಿಯ ಆಗ್ರಾ, ಕೃಷ್ಣ ನಗರಿ ಮಥುರಾದಲ್ಲೂ ಸಿಗಲಿವೆ.ಈಗಾಗಲೇ ದೆಹಲಿಯಲ್ಲಿ ನಂದಿನಿ ಹಾಲು, ಮೊಸರು ಸೇರಿದಂತೆ ಹಲವು ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ಮಾಡಿರುವ ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ ಕೆಎಂಎಫ್ ಈಗ ಉತ್ತರ ಪ್ರದೇಶದಲ್ಲೂ ತನ್ನ ಚಟುವಟಿಕೆ ವಿಸ್ತರಿಸಲು ಸಜ್ಜಾಗಿದೆ.

ಮುಂದಿನ ವಾರದಿಂದಲೇ ಈ ಭಾಗದಲ್ಲಿ ನಂದಿನಿ ಹಾಲು ಸರಬರಾಜು ಶುರುವಾಗಲಿದೆ.ಇದಲ್ಲದೇ ರಾಜಸ್ಥಾನದಲ್ಲಿಯೂ ನಂದಿನಿ ಸೇವೆಯನ್ನು ವಿಸ್ತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.ದೆಹಲಿಗೆ ವಿಸ್ತರಿಸಿದ ನಂತರ, ನಂದಿನಿ ಬ್ರಾಂಡ್ ಅಡಿಯಲ್ಲಿ ತನ್ನ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್), ಹಾಲು ಮತ್ತು ಮೊಸರು ಸೇರಿದಂತೆ ತಾಜಾ ಡೈರಿ ಉತ್ಪನ್ನಗಳೊಂದಿಗೆ ಉತ್ತರ ಪ್ರದೇಶ ಮತ್ತು ರಾಜಸ್ಥಾನವನ್ನು ಪ್ರವೇಶಿಸಲು ಸಿದ್ದವಾಗಿದೆ.
ಈ ತಿಂಗಳ ಅಂತ್ಯದ ವೇಳೆಗೆ ನಂದಿನಿ ಉತ್ಪನ್ನಗಳು ಉತ್ತರ ಉತ್ತರ ಪ್ರದೇಶ ಮತ್ತು ಜೈಪುರದಲ್ಲಿ ಲಭ್ಯವಿರುತ್ತವೆ ಎಂದು ಕೆಎಂಎಫ್ ಅಧಿಕಾರಿಗಳು ಮಾಹಿತಿಯನ್ನು ತಿಳಿಸಿದ್ದಾರೆ.ಕೆಎಂಎಫ್ ನವೆಂಬರ್ 21, 2024 ರಂದು ರಾಷ್ಟ್ರ ರಾಜಧಾನಿಯಲ್ಲಿ ನಂದಿನಿ ಹಾಲು ಮತ್ತು ಮೊಸರನ್ನು ಬಿಡುಗಡೆ ಮಾಡಿತ್ತು ಮತ್ತು ಈಗ ದೆಹಲಿಯ ಗಡಿ ಪ್ರದೇಶಗಳಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸುತ್ತಲೇ ಇದೆ.
ಇದು ಕರ್ನಾಟಕ ಹಾಲು ಒಕ್ಕೂಟದ ಯೋಜನೆಯ ಭಾಗವಾಗಿದ್ದು, ಉತ್ತರ ಭಾರತದ ಮಾರುಕಟ್ಟೆಗೆ ತನ್ನ ವಿಸ್ತರಣೆಯನ್ನು ಕೈಗೊಳ್ಳಲಿದ್ದು,ಅಲ್ಲಿ ಅದರ ಬ್ರಾಂಡ್ ನಂದಿನಿ ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟದ ಅಮುಲ್ ಜೊತೆ ಸ್ಪರ್ಧಿಸಲಿದೆ. ಕೆಎಂಎಫ್ ಈಗ ದೆಹಲಿ ಬಳಿಯ ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಹೊಸ ಹಾಲು ಪ್ಯಾಕೇಜಿಂಗ್ ಘಟಕವನ್ನು ಪ್ರಾರಂಭಿಸಿದೆ.
ಆಗ್ರಾ, ಮಥುರಾ ಮತ್ತು ಮೀರತ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಂದಿನಿ ಹಾಲನ್ನು ವಿತರಿಸಲು ಒಕ್ಕೂಟ ಯೋಜಿಸಿದೆ. ಮಾರ್ಚ್ 16 ರಿಂದ ಈ ಪ್ರದೇಶಗಳಲ್ಲಿ ಮಾರಾಟವನ್ನು ಪ್ರಾರಂಭಿಸಲು ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ರಾಜಸ್ಥಾನದ ಜೈಪುರದಲ್ಲಿಯೂ ಈ ತಿಂಗಳೊಳಗೆ ಮಾರಾಟ ಪ್ರಾರಂಭವಾಗಲಿದೆ" ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ ಶಿವಸ್ವಾಮಿ ಹೇಳಿದರು.
ಕೆಎಂಎಫ್ ನಂದಿನಿಯ ಮಾರಾಟವನ್ನು ಕರ್ನಾಟಕಕ್ಕೆ ಮಾತ್ರ ಸೀಮಿತಗೊಳಿಸುತ್ತಿಲ್ಲ ಭಾರತ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಜಾಲವನ್ನು ಸ್ಥಿರವಾಗಿ ವಿಸ್ತರಿಸುತ್ತಿದೆ.ಫೆಡರೇಶನ್ ಈಗಾಗಲೇ ದೆಹಲಿಯಲ್ಲಿ ನಂದಿನಿ ಹಾಲು, ಮೊಸರು ಮತ್ತು ಮಜ್ಜಿಗೆಯನ್ನು ಪರಿಚಯಿಸಿದೆ ಮತ್ತು ಹತ್ತಿರದ ನಗರಗಳಿಗೆ ಮತ್ತಷ್ಟು ವಿಸ್ತರಿಸುವ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಎರಡನೇ ಅತಿದೊಡ್ಡ ಹಾಲು ಸಹಕಾರ ಸಂಘವಾದ ಕೆಎಂಎಫ್, ತನ್ನ ಸದಸ್ಯ ಜಿಲ್ಲಾ ಹಾಲು ಸಂಘಗಳ ಮೂಲಕ 26 ಲಕ್ಷಕ್ಕೂ ಹೆಚ್ಚು ಡೈರಿ ರೈತರಿಂದ ಹಾಲನ್ನು ಖರೀದಿಸಿ ಸಂಸ್ಕರಿಸುತ್ತದೆ. ಕಳೆದ ಐದು ದಶಕಗಳಿಂದ, ಇದು ನಂದಿನಿ ಬ್ರ್ಯಾಂಡ್ ಅಡಿಯಲ್ಲಿ ಹಾಲು ಮತ್ತು ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.
ಇದಲ್ಲದೇ ರಾಜಸ್ತಾನದ ಜೈಪುರಲ್ಲಿಯೂ ಇದೇ ಮಾರ್ಚ್ ತಿಂಗಳಿನಿಂದಲೇ ಹಾಲು ಮಾರಾಟ ಪ್ರಾರಂಭಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಶಿವಸ್ವಾಮಿ ಹೇಳಿದ್ಧಾರೆ.


Click it and Unblock the Notifications