ಪ್ರಮುಖ ಮಾರ್ಕೆಟಿಂಗ್ ಡೇಟಾ ಆಂಡ್ ಅನಾಲಿಟಿಕ್ಸ್ ಕಂಪನಿಯಾದ ಕಾಂತಾರ್ 'ಬ್ರ್ಯಾಂಡ್ ಫುಟ್‌ಪ್ರಿಂಟ್ 2023 ಇಂಡಿಯಾ' ವರದಿಯನ್ನು ಪ್ರಕಟಿಸಿದೆ. ಈ ವರದಿಯ ಪ್ರಕಾರ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ಅಥವಾ ಕರ್ನಾಟಕ ಮಿಲ್ಕ್ ಫೆಡರೇಶನ್‌ನ (ಕೆಎಂಎಫ್) ನಂದಿನಿ ಭಾರತದಲ್ಲಿ ಆರನೇ 'ಅತ್ಯಂತ ಆಯ್ಕೆ ಮಾಡಲಾಗುವ' ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ (ಎಫ್‌ಎಂಸಿಜಿ) ಆಗಿದೆ.
ಹಲವಾರು ವಿವಾದಗಳ ನಡುವೆಯೂ ನಂದಿನಿ ಟಾಪ್ 10 ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಎಫ್‌ಎಂಸಿಜಿ ಬ್ರ್ಯಾಂಡ್‌ಗಳಲ್ಲಿ ಅಮೂಲ್ ಅನ್ನು ಹೊರತುಪಡಿಸಿ ಟಾಪ್ 10 ನಲ್ಲಿರುವ ಡೈರಿ ಬ್ರ್ಯಾಂಡ್ ನಂದಿನಿ ಆಗಿದೆ. ಪ್ರಸ್ತುತ ಟಾಪ್ 5 ಬ್ರ್ಯಾಂಡ್‌ಗಳು ಯಾವುದು, ನಂದಿನಿ ಹಾಲಿನ ವಹಿವಾಟಿನ ಬಗ್ಗೆ ತಿಳಿಯೋಣ ಮುಂದೆ ಓದಿ...

ಟಾಪ್ 5 ಬ್ರ್ಯಾಂಡ್‌ಗಳಿವು ನೋಡಿ
ಟಾಪ್ 10 ಬ್ರಾಂಡ್‌ಗಳ ಪಟ್ಟಿಯಲ್ಲಿ ಅಮುಲ್ ಅನ್ನು ಹೊರತುಪಡಿಸಿ ನಂದಿನಿ ಏಕೈಕ ಡೈರಿ ಬ್ರ್ಯಾಂಡ್ ಆಗಿದೆ. 7449 ಮಿಲಿಯನ್ ಸಿಪಿಆರ್‌ನೊಂದಿಗೆ ಪಾರ್ಲೆ ಮೊದಲ ಸ್ಥಾನ ಪಡೆದರೆ, ಬ್ರಿಟಾನಿಯಾ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಅಮುಲ್ ಮೂರನೇ ಸ್ಥಾನ ಗಳಿಸಿದರೆ, ಕ್ಲಿನಿಕ್ ಪ್ಲಸ್ ನಾಲ್ಕನೇ ಸ್ಥಾನದಲ್ಲಿದೆ. ಟಾಟಾ ಐದನೇ ಸ್ಥಾನದಲ್ಲಿ ನಿಂತಿದೆ. ಆರನೇ ಸ್ಥಾನದಲ್ಲಿ ನಮ್ಮ ಕರ್ನಾಟಕದ ಡೈರಿ ಬ್ರ್ಯಾಂಡ್ ನಂದಿನಿ ಇದೆ.
ಈ ವರದಿಯು ಕನ್ಸ್ಯೂಮರ್ ರೀಚ್ ಪಾಯಿಂಟ್‌ಗಳ (ಸಿಆರ್‌ಪಿ) ಆಧಾರದ ಮೇಲೆ ಪ್ರತಿ ಬ್ರ್ಯಾಂಡ್ ಅನ್ನು ಶ್ರೇಣೀಕರಿಸಿದೆ. ದೇಶದಲ್ಲಿರುವ ಜನರು, ಆ ಪೈಕಿ ನಿರ್ದಿಷ್ಟ ಬ್ರ್ಯಾಂಡ್ ಅನ್ನು ಖರೀದಿ ಮಾಡುವ ಜನರ ಸಂಖ್ಯೆ, ಒಂದು ವರ್ಷದಲ್ಲಿ ಅದೇ ಉತ್ಪನ್ನವನ್ನು ಜನರು ಎಷ್ಟು ಬಾರಿ ಖರೀದಿಸಿದ್ದಾರೆ ಎಂಬುದನ್ನು ಪರಿಗಣಿಸಿಕೊಂಡು ಈ ಲೆಕ್ಕಾಚಾರವನ್ನು ಮಾಡಲಾಗುತ್ತದೆ.
ಇದು ಆದಾಯದ ಲೆಕ್ಕಾಚಾರದಲ್ಲಿ ಟಾಪ್ ಸ್ಥಾನ ಪಡೆದಿರುವ ಬ್ರ್ಯಾಂಡ್‌ಗಳಲ್ಲ, ಬದಲಾಗಿ ಗ್ರಾಹಕರ ನೆಚ್ಚಿನ ಬ್ರ್ಯಾಂಡ್ ಎಂದರೆ ತಪ್ಪಾಗಲಾರದು. ಈ ಗ್ರಾಹಕರ ನೆಚ್ಚಿನ ಬ್ರ್ಯಾಂಡ್‌ಗಳಲ್ಲಿ ನಮ್ಮ ಕರ್ನಾಟಕದ ನಂದಿನಿ ಉತ್ಪನ್ನಗಳು ಕೂಡಾ ಒಂದಾಗಿದೆ. ನವೆಂಬರ್ 2021 ಮತ್ತು ಅಕ್ಟೋಬರ್ 2022 ರ ನಡುವಿನ 52 ವಾರಗಳ ಅವಧಿಯಲ್ಲಿ ಸಂಗ್ರಹಿಸಿದ ಡೇಟಾವನ್ನು ಆಧರಿಸಿ ಈ ಶ್ರೇಯಾಂಕಗಳನ್ನು ನಿರ್ಧರಿಸಲಾಗಿದೆ.
ಕಾಂತರ್ ವರದಿಯು ಪ್ರಮುಖವಾಗಿ ಎರಡು ಅಂಶಗಳನ್ನು ಆಧರಿಸಿದೆ:
* ಹೋಮ್ ಪ್ಯಾನಲ್ (ಮನೆಯೊಳಗಿನ ಬಳಕೆಗಾಗಿ ಖರೀದಿ): ನಗರ, ಗ್ರಾಮೀಣ, ಎಲ್ಲಾ ಶ್ರೀಮಂತ, ಬಡ ವರ್ಗಗಳು
* ಒಒಎಚ್ ಪ್ಯಾನೆಲ್ (ಮನೆಯ ಹೊರಗಿನ ಬಳಕೆಗಾಗಿ ಖರೀದಿ): 10 ಲಕ್ಷ+ ಪಟ್ಟಣಗಳು, ಎನ್‌ಸಿಸಿಎಸ್ ಎಬಿಸಿ, ಆಹಾರ ಮತ್ತು ಪಾನೀಯಗಳ ವಿಭಾಗ
ಒಟ್ಟಾರೆಯಾಗಿ, ವರದಿಯು 408 ಬ್ರಾಂಡ್‌ಗಳನ್ನು ಪರಿಶೀಲನೆ ಮಾಡಿದೆ. ಇದು ಆಹಾರಗಳು, ಗೃಹ ಆರೈಕೆ, ಆರೋಗ್ಯ ಮತ್ತು ಸೌಂದರ್ಯ, ಪಾನೀಯಗಳು, ತಿಂಡಿ ಮತ್ತು ಡೈರಿಗಳಂತಹ ಎಫ್‌ಎಂಸಿಜಿ ವರ್ಗಕ್ಕೆ ಸೇರಿದ ಬ್ರ್ಯಾಂಡ್‌ಗಳಾಗಿದೆ. ಒಟ್ಟಾಗಿ 107 ಬಿಲಿಯನ್ ಕನ್ಸ್ಯೂಮರ್ ರೀಚ್ ಪಾಯಿಂಟ್‌ಗಳನ್ನು ಸಂಗ್ರಹ ಮಾಡಲಾಗಿದೆ.
ಒಒಎಚ್ ಪ್ಯಾನೆಲ್ (ಮನೆಯ ಹೊರಗಿನ ಬಳಕೆಗಾಗಿ ಖರೀದಿ) ನೋಡಿದಾಗ ಬ್ರಿಟಾನಿಯಾ ಟಾಪ್ ಸ್ಥಾನದಲ್ಲಿದ್ದು, 498 ಮಿಲಿಯನ್ ಸಿಪಿಆರ್ ಇದೆ. ಇದರ ನಂತರ ಸ್ಥಾನದಲ್ಲಿ ಹಲ್ದಿರಾಮ್ಸ್, ಕ್ಯಾಡ್ಬರಿ, ಬಾಲಾಜಿ ಮತ್ತು ಪಾರ್ಲೆ ಇದೆ.
ಪ್ರಮುಖಾಂಶಗಳು
* ಒಟ್ಟಾರೆಯಾಗಿ, ಕಳೆದ ಐದು ವರ್ಷಗಳಲ್ಲಿ ಕನ್ಸ್ಯೂಮರ್ ರೀಚ್ ಪಾಯಿಂಟ್ ಸುಮಾರು ಶೇಕಡ 50 ರಷ್ಟು ಹೆಚ್ಚಾಗಿದೆ
* ನಾಲ್ಕು ಹೊಸ ಬ್ರಾಂಡ್‌ಗಳು: ಬಾಲಾಜಿ, ಲಕ್ಸ್, ಸನ್‌ಸಿಲ್ಕ್ ಮತ್ತು ನಿರ್ಮಾ 2022 ರಲ್ಲಿ ಬಿಲಿಯನ್ ಸಿಆರ್‌ಪಿ ಕ್ಲಬ್‌ಗೆ ಸೇರ್ಪಡೆಗೊಂಡ ಬ್ರ್ಯಾಂಡ್‌ಗಳಾಗಿದೆ. ಕಳೆದ ಐದು ವರ್ಷಗಳಲ್ಲಿ, ಬಿಲಿಯನ್ ಸಿಆರ್‌ಪಿ ಕ್ಲಬ್‌ನಲ್ಲಿರುವ ಬ್ರ್ಯಾಂಡ್‌ಗಳ ಸಂಖ್ಯೆ 16 ರಿಂದ 28 ಕ್ಕೆ ಏರಿಕೆಯಾಗಿದೆ.
* ಪಾನೀಯಗಳು ಈ ವರ್ಷ ವೇಗವಾಗಿ ಬೆಳೆಯುತ್ತಿರುವ ವರ್ಗವಾಗಿದೆ


Click it and Unblock the Notifications